'5 ವರ್ಷಗಳಲ್ಲಿ 2ನೇ ಬಾರಿ ಅಣುವಿಕಿರಣ ಸೋರಿಕೆ'

ನವದೆಹಲಿ, ಮೇ.29: ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಶ್‌ ಏರ್‌ವೇಸ್ ವಿಮಾನದಲ್ಲಿದ್ದ ಪ್ಯಾಕೇಜ್ ನಿಂದ ಅಣುವಿಕಿರಣ ಸೋರಿಕೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಕಳೆದ ಐದು ವರ್ಷಗಳಲ್ಲಿ ಎರಡನೇ ಬಾರಿಗೆ ಈ ರೀತಿ ಘಟನೆ ನಡೆದಿದೆ.

ವಿಮಾನದಲ್ಲಿದ್ದ ಮೆಡಿಕಲ್‌ ಕಿಟ್‌ನಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಔಷಧದಿಂದ ರೇಡಿಯೊ ಆಕ್ಟಿವ್‌ ವಿಕಿರಣ ಸೋರಿಕೆಯಾಗಿದೆ. ಈ ಹಿನ್ನಲೆಯಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಲಾಯಿತು. ಫೋರ್ಟಿಸ್ ಆಸ್ಪತ್ರೆಯ ರೋಗಿಗಳ ಚಿಕಿತ್ಸೆಗಾಗಿ ಈ ಕಿಟ್ ತರಲಾಗುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಎನ್‌ಡಿಆರ್‌ಎಫ್ ಪಡೆ ಮತ್ತು ಅಣು ಶಕ್ತಿ ಆಯೋಗದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ.

Radioactive leak: Delhi's second in five years

ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಆತಂಕದ ವಾತಾವರಣ ಈಗ ತಿಳಿಯಾಗಿದೆ. ವಿಕಿರಣ ಸೋರಿಕೆ ಬಗ್ಗೆ ವಿವರಣೆ ಕೋರಿ ಫೋರ್ಟಿಸ್ ಆಸ್ಪತ್ರೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ರಾಜ್‌ನಾಥ್‌ ಸಿಂಗ್‌ ಹೇಳಿಕೆ: ರೇಡಿಯೋ ಆಕ್ಟಿವ್ ವಿಕಿರಣ ಉಪಕರಣವಿದ್ದ 10 ಪ್ಯಾಕೆಟ್ ಗಳನ್ನು ವಿಶೇಷ ಮೆಡಿಕಲ್ ಕಿಟ್ ಗಳ ಪೈಕಿ 4 ಪ್ಯಾಕ್ ಗಳಲ್ಲಿ ವಿಕಿರಣ ಸೋರಿಕೆಯಾಗಿತ್ತು. ಈಗ ವಿಕಿರಣ ಪ್ರಸಾರವನ್ನು ತಡೆಯಲಾಗಿದೆ. ಜನತೆ ಆತಂಕಪಡಬೇಕಾಗಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

2010ರಲ್ಲೂ ಸೋರಿಕೆಯಾಗಿತ್ತು: ದೆಹಲಿಯ ಮಾಯಾಪುರಿ ಪ್ರದೇಶದಲ್ಲಿ 2010ರಲ್ಲಿ ಇದೇ ರೀತಿ ಪ್ರಕರಣ ನಡೆದಿತ್ತು. ಕೈಗಾರಿಕಾ ಪ್ರದೇಶದಲ್ಲಿ ವಿಕಿರಣ ಸೋರಿಕೆಯಿಂದ ಅನೇಕ ಜನರು ಗಾಯಗೊಂಡಿದ್ದರು, ಉಸಿರಾಟದ ತೊಂದರೆಯಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಅಣುವಿಕಿರಣ ಪದಾರ್ಥ ಕೋಬಾಲ್ಟ್ 60 ಸೋರಿಕೆಯಾದ ಪರಿಣಾಮ ಸಮಸ್ಯೆ ಉಂಟಾಗಿತ್ತು. ಈಗ ಮತ್ತೊಮ್ಮೆ ಇಂಥದ್ದೇ ಸಮಸ್ಯೆ ಎದುರಾಗಿದ್ದು, ಅಣು ವಿಕಿರಣ ಸೋರಿಕೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+