• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹ ಪೀಡಿತ ರಾಜ್ಯಗಳ ನಕಲಿ ಚಿತ್ರಗಳನ್ನು ಶೇರ್ ಮಾಡಿದ ಪ್ರಿಯಾಂಕಾ

|

ನವದೆಹಲಿ, ಜುಲೈ 20: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದ ಪ್ರವಾಹ ಪೀಡಿತ ಪ್ರದೇಶಗಳ ಚಿತ್ರಗಳು ನಕಲಿ ಎಂದು ಸಾಬೀತಾಗಿದೆ. ಪ್ರಿಯಾಂಕಾ ಗಾಂಧಿ ಟ್ವಿಟ್ಟರ್‌ನಲ್ಲಿ ಬಿಹಾರ, ಅಸ್ಸಾಂ, ಉತ್ತರ ಪ್ರದೇಶದ ಪ್ರವಾಹ ಚಿತ್ರಗಳನ್ನು ಶೇರ್ ಮಾಡಿ, ಆ ಜನರ ಸಹಾಯಕ್ಕೆ ನಾವಿದ್ದೇವೆ ಎಂದು ಬರೆದುಕೊಂಡಿದ್ದರು.

   Leopard enters home and takes away pet dog | Oneindia kannada

   ಆದರೆ ಪ್ರವಾಹ ಆ ಚಿತ್ರಗಳು ಹಳೆಯದು ಎನ್ನುವುದು ತಿಳಿದುಬಂದಿದೆ. ಅವರು ಟ್ವಿಟ್ಟರ್‌ನಲ್ಲಿ' ಅಸ್ಸಾಂ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಭಾರಿ ಪ್ರವಾಹ ಸ್ಥಿತಿ ಎದುರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಸಂತ್ರಸ್ತರಿಗೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಬರೆದುಕೊಂಡಿದ್ದರು.

   'ವೀಕೆಂಡ್ ಲಾಕ್‌ಡೌನ್‌ನಲ್ಲಿ ಲಾಜಿಕ್ ಇಲ್ಲ: ಪ್ರಿಯಾಂಕಾ ವಾಗ್ದಾಳಿ

   ಆದರೆ ಆ ಚಿತ್ರಗಳೆಲ್ಲವೂ ಹಳೆಯದು,ಮೊದಲ ಚಿತ್ರ 2019ರ ಜುಲೈನಲ್ಲಿ ತೆಗೆದಿರುವ ಚಿತ್ರವಾಗಿದೆ. ಎರಡನೇ ಚಿತ್ರ 2017ರಲ್ಲಿ ತೆಗೆದಿದ್ದು, 2017ರ ಆಗಸ್ಟ್ 31ರಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

   ಆ ಎರಡೂ ಚಿತ್ರಗಳು ತುಂಬಾ ಹಳೆಯದು ಎಂದು ಹೇಳಲಾಗಿದೆ. ಲಕ್ಷಾಂತರ ಮಂದಿ ಸಂಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು.

   ಅಸ್ಸಾಂನ 20 ಜಿಲ್ಲೆಗಳಲ್ಲಿ ಸುಮಾರು 13.3 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ನೆರೆಯ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡು ಸುಮಾರು 12,297 ಜನರಿಗೆ 163 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.

   English summary
   General Secretary of AICC Priyanka Gandhi posted two images from her official Twitter handle to lament about the flood situation in the states of Bihar, Assam and Uttar Pradesh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X