ಮಂತ್ರಿಮಂಡಲ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಇದೇ ಮೊದಲ ಬಾರಿಗೆ ತಮ್ಮ ಮಂತ್ರಿಮಂಡಲದ ಪರಾಮರ್ಶೆ ಸಭೆಯನ್ನು ಶನಿವಾರ ಕರೆದಿದ್ದಾರೆ.

ನವದೆಹಲಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಗರ್ವಿ ಗುಜರಾತ್ ಭವನದಲ್ಲಿ ಈ ಸಭೆಯನ್ನು ಪ್ರಧಾನಿಯವರು ಕರೆದಿದ್ದಾರೆ. ಮುಂದಿನ ತಿಂಗಳು ಕೇಂದ್ರ ಸಂಪುಟ ವಿಸ್ತರಣೆ ಇರುವುದರಿಂದ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸಚಿವರ ಜೊತೆ ಬಿಜೆಪಿಯ ಕೆಲ ಹಿರಿಯ ನಾಯಕರೂ ಕೂಡ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Prime Minister Narendra Modi Review Cabinet On Saturday

ಸಚಿವರ ಪರಾಮರ್ಶೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ನಡೆಯುವ ಚರ್ಚೆ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಕುಂಠುತ್ತಿರುವ ಆರ್ಥಿಕ ವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಅವರು ಪ್ರಧಾನಿಯವರಿಗೆ ವಿವರಿಸಬೇಕಿದೆ. ಮೋದಿ ಎರಡನೇ ಬಾರಿಗೆ ಪ್ರಧಾನಿಯಾದಾಗ ಮಂತ್ರಿಮಂಡಲ ಸಭೆ ಕರೆದು ಮುಂದಿನ ಐದು ವರ್ಷದ ಮುನ್ನೋಟವನ್ನು ವಿವರಿಸಿದ್ದರು. ಈಗ ತಮ್ಮ ಸಹೋದ್ಯೋಗಿಳ ಕೆಲಸದ ಪರಾಮರ್ಶೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+