ಗುಜರಾತ್ ಪ್ರವಾಹ: ಕಂಬನಿ ಮಿಡಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ, ಜುಲೈ 26: ಗುಜರಾತ್, ಅಸ್ಸಾಂ, ರಾಜಸ್ತಾನ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದ್ದು, ಪ್ರವಾಹದ ಸಂಕಷ್ಟ ಎದುರಿಸುತ್ತಿರುವ ಜನರ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಂಬನಿ ಮಿಡಿದಿದ್ದಾರೆ.
ಅಸ್ಸಾಂ, ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಉಂಟಾದ ಅತಿವೃಷ್ಠಿ ಮತ್ತು ಮಳೆಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ನಾವೆಂದಿಗೂ ಅವರ ಕುಟುಂಬದೊಂದಿಗಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಪ್ರವಾಹ ಪೀಡಿತ ರಾಜ್ಯಗಳ ಜನರಿಗೆ ಸಾಂತ್ವನ ಹೇಳಿದ್ದಾರೆ.

ಭಾರತದ 14 ನೇ ರಾಷ್ಟ್ರಪತಿಯಾಗಿ ಜುಲೈ 25 ರಂದು ರಾಮನಾಥ್ ಕೋವಿಂದ್ ಪ್ರಮಾಣವಚನ ಸ್ವೀಕರಿಸಿದ್ದರು.
Nation condoles deaths due to heavy rains & floods in Assam, Gujarat, Rajasthan & other states. Stands by families affected #PresidentKovind
— President of India (@rashtrapatibhvn) July 26, 2017












Click it and Unblock the Notifications