ರಾಷ್ಟ್ರಪತಿಗಳಿಂದ 2016ನೇ ಸಾಲಿನ 'ಪದ್ಮ ಪ್ರಶಸ್ತಿ' ಪ್ರದಾನ

Posted By:
Subscribe to Oneindia Kannada

ನವದೆಹಲಿ,ಮಾರ್ಚ್.28: ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಶ್ರೀಶ್ರೀ ರವಿಶಂಕರ್ ಗುರೂಜಿ, ಅನುಪಮ್ ಖೇರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಹಲವಾರು ಸಾಧಕರು ನವದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನಾಡಿನ ಪ್ರತಿ‍ಷ್ಠಿತ ಪ್ರಶಸ್ತಿ ಪದ್ಮ ವಿಭೂಷಣಕ್ಕೆ 10, ಪದ್ಮ ಭೂಷಣಕ್ಕೆ 19 ಹಾಗೂ ಪದ್ಮಶ್ರೀ ಪ್ರಶಸ್ತಿಗೆ 83 ಮಂದಿ ಭಾಜನರಾಗಿದ್ದಾರೆ. ಇದರಲ್ಲಿ 19 ಜನ ಮಹಿಳಾ ಸಾಧಕಿಯರಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪದ್ಮ ವಿಭೂಷಣ ಪ್ರಶಸ್ತಿಯನ್ನು ಯಾಮಿನಿ ಕೃಷ್ಣಮೂರ್ತಿ ನೃತ್ಯದಲ್ಲಿ, ನಟ ರಜನಿಕಾಂತ್ ಸಿನಿಮಾ ವಲಯದಲ್ಲಿ, ರಾಮೋಜಿ ರಾವ್ ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪಡೆದಿದ್ದಾರೆ. ಪದ್ಮ ವಿಭೂಷಣಕ್ಕೆ ಒಟ್ಟು 10 ಮಂದಿ ಭಾಜನರಾಗಿದ್ದಾರೆ. ಅವಿನಾಶ್ ದೀಕ್ಷಿತ್ ಸಾಹಿತ್ಯ ಹಾಗೂ ಶಿಕ್ಷಣ-ಯುಎಸ್ಎ, ಧೀರೂಭಾಯಿ ಅಂಬಾನಿ ಮರಣೋತ್ತರ ಪ್ರಶಸ್ತಿ ಪಡೆದಿದ್ದಾರೆ. [ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ]

ಪದ್ಮ ಭೂಷಣ ಪ್ರಶಸ್ತಿಯು ಅನುಪಮ್ ಖೇರ್, ಸಾನಿಯಾ ಮಿರ್ಜಾ, ವಿನೋದ್ ರಾಯ್, ಸೈನಾ ನೆಹ್ವಾಲ್ ಸೇರಿದಂತೆ ಒಟ್ಟು 19 ಮಂದಿಗೆ ಸಂದಿದೆ. ಪದ್ಮಶ್ರೀ ಪ್ರಶಸ್ತಿಯನ್ನು ಪ್ರಿಯಾಂಕಾ ಛೋಪ್ರಾ, ತುಳಸಿದಾಸ್ ಬೋರ್ಕರ್, ಭಿಕುದಾನ್ ಗಾಧ್ವಿ, ಅಜಯ್ ಪಾಲ್ ಸಿಂಗ್ ಬಂಗಾ ಹೀಗೆ ಒಟ್ಟು 83 ಮಂದಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.

ರವಿಶಂಕರ್ ಗುರೂಜಿಗೆ ಪದ್ಮವಿಭೂಷಣ ಪ್ರಶಸ್ತಿ

ರವಿಶಂಕರ್ ಗುರೂಜಿಗೆ ಪದ್ಮವಿಭೂಷಣ ಪ್ರಶಸ್ತಿ

ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀಶ್ರೀ ರವಿಶಂಕರ್ ಗುರೂಜಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಆಧ್ಯಾತ್ಮಿಕ ವಲಯದ ಮಹಾಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ಧೀರೂಬಾಯಿ ಅಂಬಾನಿಗೆ ಮರಣೋತ್ತರ ಪ್ರಶಸ್ತಿ

ಧೀರೂಬಾಯಿ ಅಂಬಾನಿಗೆ ಮರಣೋತ್ತರ ಪ್ರಶಸ್ತಿ

ದಿ. ಧೀರೂಬಾಯಿ ಅಂಬಾನಿ ಅವರಿಗೆ ಮರಣೋತ್ತರ ಪ್ರಶಸ್ತಿ ಲಭಿಸಿದ್ದು, ಅವರ ಪತ್ನಿಯಾದ ಕೊಕೀಲಾಬೇನ್ ಅಂಬಾನಿ ಪ್ರಶಸ್ತಿ ಸ್ವೀಕರಿಸಿದರು.

ಬ್ಯಾಡ್ಮಿಂಟನ್ ತಾರೆಯ ನಗು

ಬ್ಯಾಡ್ಮಿಂಟನ್ ತಾರೆಯ ನಗು

ಬ್ಯಾಡ್ಮಿಂಟನ್ ತಾರೆಯಾದ ಹೈದರಾಬಾದ್ ಮೂಲದ ಸೈನಾ ನೆಹ್ವಾಲ್ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸಾಧನೆಗಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸುವಾಗ ಚಂದದ ನಗೆ ಬೀರಿದ್ದು ಹೀಗೆ

ನಟ ಅನುಪಮ್ ಖೇರ್ ಗೆ ಪದ್ಮಭೂಷಣ

ನಟ ಅನುಪಮ್ ಖೇರ್ ಗೆ ಪದ್ಮಭೂಷಣ

ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಅಭಿನಯದ ಮೂಲಕ ವಿಶೇಷ ಛಾಪು ಮೂಡಿಸಿದ ಕಾರಣ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ಪದ್ಮಶ್ರೀ ಪ್ರಶಸ್ತಿ ಪಡೆದ ಅಜಯ್ ಪಾಲ್ ಸಿಂಗ್

ಪದ್ಮಶ್ರೀ ಪ್ರಶಸ್ತಿ ಪಡೆದ ಅಜಯ್ ಪಾಲ್ ಸಿಂಗ್

ಅಜಯ್ ಪಾಲ್ ಸಿಂಗ್ ಅವರು ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಪಡೆದರು.

ಫಿಲ್ಮ್ ಮೇಕರ್ ಮಧೂರ್ ಭಂಡಾರ್ಕರ್

ಫಿಲ್ಮ್ ಮೇಕರ್ ಮಧೂರ್ ಭಂಡಾರ್ಕರ್

ಫಿಲ್ಮ್ ಮೇಕರ್ ಮಧೂರ್ ಭಂಡಾರ್ಕರ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಜಗನ್ಮೋಹನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ

ಜಗನ್ಮೋಹನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಜಗನ್ಮೋಹನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ.

ಅಜಯ್ ದೇವಾಗನ್ ಗೆ ಪದ್ಮಶ್ರೀ ಪ್ರಶಸ್ತಿ

ಅಜಯ್ ದೇವಾಗನ್ ಗೆ ಪದ್ಮಶ್ರೀ ಪ್ರಶಸ್ತಿ

ಬಾಲಿವುಡ್ ನಟನಾ ವಲಯದಲ್ಲಿ ಸಾಧನೆ ಮಾಡಿದ ಅಜಯ್ ದೇವಾಗನ್ ಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಜಗನ್ಮೋಹನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ

ಜಗನ್ಮೋಹನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಜಗನ್ಮೋಹನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
President Pranab Mukherjee presents Padma Vibhushan to Former Jammu and Kashmir Governor Jagmohan, Padma Bhushan to badminton star Saina Nehwal, Padma Vibhushan to Sri Sri Ravi Shankar, Padma Bhushan to Actor Anupam Kher awards at Radhtrapathi Bhavan, in New Delhi
Please Wait while comments are loading...