ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ರಾಜ್ಯದಲ್ಲೂ ಐಐಟಿ, ಐಐಎಂ ಸ್ಥಾಪನೆ: ರಾಷ್ಟ್ರಪತಿ

By Mahesh
|
Google Oneindia Kannada News

ನವದೆಹಲಿ, ಜೂ.9: ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಆದ್ಯತೆಗಳನ್ನು ಪಟ್ಟಿ ಮಾಡಿ ಹೇಳಿದರು. ಪ್ರತಿ ರಾಜ್ಯದಲ್ಲೂ ಐಐಟಿ, ಐಐಎಂ ಸ್ಥಾಪನೆ, ಬೆಲೆ ಏರಿಕೆ, ಆರ್ಥಿಕತೆ, ಬಡವರ ಏಳಿಗೆ ಮುಂತಾದ ವಿಷಯಗಳು ಭಾಷಣದ ಪ್ರಮುಖ ಅಂಶಗಳಾಗಿತ್ತು.

ನನ್ನ ಸರಕಾರವು ಬಡವರ ಏಳಿಗೆಗೆ ಮುಡಿಪಾಗಿದೆ. ಬಡತನಕ್ಕೆ ಯಾವುದೇ ಜಾತಿ, ಮತ, ಧರ್ಮ ಎಂಬುದಿಲ್ಲ. ಹಾಗೆಯೇ ಹಸಿವಿಗೆ ಕೂಡ. ನನ್ನ ಸರಕಾರ ದಾರಿದ್ರ್ಯ ನಿರ್ಮೂಲನೆಗೆ ಮಾತ್ರವೇ ತೃಪ್ತಿಪಡುವುದಿಲ್ಲ. ಬದಲು ಬಡತನವನ್ನು ಆಮೂಲಾಗ್ರವಾಗಿ ನಿರ್ಮೂಲನೆ ಮಾಡುವ ಗುರಿಗೆ ಸದಾ ಬದ್ಧವಾಗಿರುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.

ಬದುಕಿನ ಮೂಲ ಸೌಕರ್ಯಗಳು ಅಗತ್ಯವಿರುವ ಎಲ್ಲ ಜನರನ್ನು ತಲುಪುವುದಕ್ಕೆ ಮತ್ತು ಅವರ ಅಗತ್ಯಗಳನ್ನು ಪೂರೈಸುವುದಕ್ಕೆ ನನ್ನ ಸರಕಾರ ಬದ್ಧವಾಗಿರುತ್ತದೆ. 'ಜನಸೇವೆಯೇ ಜನಾರ್ದನ ಸೇವೆ' ಎಂಬ ತತ್ವಕ್ಕೆ ಬದ್ಧವಾಗಿರುತ್ತದೆ. ಆಹಾರ ಬೆಲೆ ಏರಿಕೆ ನಿಯಂತ್ರಿಸುವುದಕ್ಕೆ ಕಟಿಬದ್ಧವಾಗಿರುತ್ತದೆ. ಅದುವೇ ಸರಕಾರದ ಮೂಲ ಆದ್ಯತೆ ಆಗಿರುತ್ತದೆ. ಕಾಳ ಸಂತೆ ಹಾಗೂ ಅಕ್ರಮ ದಾಸ್ತಾನನ್ನು ನಿಗ್ರಹಿಸುವುದಕ್ಕೆ ಸರಕಾರವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.

ಆಹಾರ ಬೆಲೆ ಏರಿಕೆ ಆಗಬಹುದು

ಆಹಾರ ಬೆಲೆ ಏರಿಕೆ ಆಗಬಹುದು

ಈ ಬಾರಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಮಳೆ ಬೀಳಬಹುದು ಮತ್ತು ಅದರಿಂದ ಆಹಾರ ಬೆಲೆ ಏರಿಕೆ ಆಗಬಹುದು ಎಂಬ ವಾಸ್ತವವನ್ನು ನನ್ನ ಸರಕಾರ ಈಗಲೇ ಅರಿತುಕೊಂಡಿದೆ ಮತ್ತು ಈ ಗುರುತರ ಸವಾಲನ್ನು ಎದುರಿಸುವುದಕ್ಕೆ ಅದು ಶಕ್ತಿಮೀರಿ ಪ್ರಯತ್ನಿಸಲಿದೆ' ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದರು.

ಪ್ರಣಬ್ ಮುಖರ್ಜಿ ಭಾಷಣ ಮುಖ್ಯಾಂಶ

ಪ್ರಣಬ್ ಮುಖರ್ಜಿ ಭಾಷಣ ಮುಖ್ಯಾಂಶ

* ಹುತಾತ್ಮ ಯೋಧರ ನೆನಪಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಾಪನೆ
* ಪ್ರತಿ ರಾಜ್ಯದಲ್ಲೂ ಐಐಟಿ, ಐಐಎಂ ಸ್ಥಾಪನೆ.
* ಕಡಿಮೆ ವೆಚ್ಚದ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಸಣ್ಣ ಪಟ್ಟಣಗಳಿಗೂ ವಿಮಾನ ಸಂಪರ್ಕ ಒದಗಿಸುವುದು
* ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ 33 ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧ.
* ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು.
* ಹೈಸ್ಪೀಡ್ ರೈಲು ಸಂಪರ್ಕ ಯೋಜನೆ ಜಾರಿ.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವಾಗತ

ಉಭಯ ಸದನ ಉದ್ದೇಶಿಸಿ ಭಾಷಣ ಮಾಡಲು ಸಂಸತ್ತಿಗೆ ಬರುತ್ತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.

ಸೆಂಟ್ರಲ್ ಹಾಲ್ ನತ್ತ ರಾಷ್ಟ್ರಪತಿಗಳ ನಡಿಗೆ

ಸೆಂಟ್ರಲ್ ಹಾಲ್ ನತ್ತ ರಾಷ್ಟ್ರಪತಿಗಳ ನಡಿಗೆ ಅವರ ಹಿಂದೆ ಸಂಸದರ ಪ್ರವೇಶ

ಉಪ ರಾಷ್ಟ್ರಪತಿಗಳಿಂದ ಸ್ವಾಗತ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜತೆ

English summary
President Pranab Mukherjee addressed the joint session of parliament on Monday morning. The President's address began at 11 am in the Central Hall of Parliament. Highlights of President's address to both houses of Parliament
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X