ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತೀಯತೆಯನ್ನು ಮೂಟೆಕಟ್ಟಿ ಪಾತಾಳದಲ್ಲಿ ಹೂತುಹಾಕಬೇಕು: ಮೀರಾ ಕುಮಾರ್

|
Google Oneindia Kannada News

ನವದೆಹಲಿ, ಜೂನ್ 27: 'ಜಾತಿಪದ್ಧತಿ ಭಾರತಕ್ಕಂಟಿರುವ ಶಾಪ. ಅದನ್ನು ಮೂಟೆಕಟ್ಟಿ, ಪಾತಾಳದಲ್ಲಿ ಹೂತುಹಾಕಬೇಕು. ರಾಷ್ಟ್ರಪತಿಯಾದರೆ ಅದೇ ನನ್ನ ಆದ್ಯ ಗುರಿ' ಎಂದು ಮಾಜಿ ಸ್ಪೀಕರ್ ಮೀರಾ ಕುಮಾರ್ ಹೇಳಿದರು.

ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಮ್ಮತದಿಂದ ಆಯ್ಕೆಯಾದ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ್, ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿಕೊಂಡ ನಂತರ ಮೊಟ್ಟಮೊದಲ ಪತ್ರಿಕಾ ಗೋಷ್ಠಿಯನ್ನು ಇಂದು (ಜೂನ್ 27) ದೆಹಲಿಯಲ್ಲಿ ನಡೆಸಿದರು.

ರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟುರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟು

ಈ ಸಂದರ್ಭದಲ್ಲಿ ತಾವು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಕೈಗೊಳ್ಳಲಿರುವ ಪ್ರಮುಖ ಕಾರ್ಯಗಳ ಕುರಿತು ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ, ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡುವ ಮತ್ತು ಬಡತನಕ್ಕೆ ಮುಕ್ತಾಯ ಹಾಡಿ ಆ ಮೂಲಕ ಒಗ್ಗಟ್ಟು ಸಾಧಿಸುವತ್ತ ತಮ್ಮ ಮೊದಲ ಗಮನ ಎಂದು ಅವರು ನುಡಿದರು.

ರಾಷ್ಟ್ರಪತಿ ಚುನಾವಣೆ ಮತ ಲೆಕ್ಕಾಚಾರ, ಕೋವಿಂದ್ ರಿಗೆ ಸುಲಭ ಗೆಲುವುರಾಷ್ಟ್ರಪತಿ ಚುನಾವಣೆ ಮತ ಲೆಕ್ಕಾಚಾರ, ಕೋವಿಂದ್ ರಿಗೆ ಸುಲಭ ಗೆಲುವು

ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರು ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಎದುರಿಸಲಿದ್ದಾರೆ. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆ ಪಡೆದಿದ್ದ ಮೀರಾ ಅವರಿಗೆ ತಂದೆ ಜಗಜೀವನ್ ರಾಮ್ ಅವರ ಹೆಸರಿನ ಬಲವೂ ಇರುವುದರಿಂದ ಕೋವಿಂದ್ ಅವರನ್ನು ಎದುರಿಸಲು ಅವರೇ ಸಮರ್ಥ ವ್ಯಕ್ತಿ ಎಂಬ ನಿರ್ಧಾರಕ್ಕೆ ವಿಪಕ್ಷಗಳು ಬಂದು, ಅವರನ್ನೇ ಕಣಕ್ಕಿಳಿಸಿವೆ.

ಈ ಹಿನ್ನೆಲೆಯಲ್ಲಿ ಮೀರಾ ಕುಮಾರ್ ಇಂದು ನಡೆಸಿದ್ದ ಪತ್ರಿಕಾ ಗೋಷ್ಠಿ ಮಹತ್ವದ್ದೆನಿಸಿದೆ.

17 ಪಕ್ಷಗಳ ಬೆಂಬಲ ನಮ್ಮ ಕಡೆಗೆ

17 ಪಕ್ಷಗಳ ಬೆಂಬಲ ನಮ್ಮ ಕಡೆಗೆ

ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಒಟ್ಟು 17 ಪಕ್ಷಗಳು ಬೆಂಬಲ ಸೂಚಿಸಿವೆ ಎಂದ ಮೀರಾ ಕುಮಾರ್, ಗೆಲ್ಲುವ ಆಶಾಭಾವವನ್ನು ವ್ಯಕ್ತಪಡಿಸಿದರು. ಜೆಡಿ(ಯು) ಪಕ್ಷ, ರಾಮ್ ನಾಥ್ ಕೋವಿಂದ್ ಗೆ ಬೆಂಬಲ ಸೂಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಇವೆಲ್ಲ ಸಹಜ ಎಂದರು.

ಆಂತರಿಕ ಪ್ರಜ್ಞೆಯಿಂದ ಬೆಂಬಲ ನೀಡಿ

ಆಂತರಿಕ ಪ್ರಜ್ಞೆಯಿಂದ ಬೆಂಬಲ ನೀಡಿ

ಈಗಾಗಲೇ ಸಂಸದರು ಮತ್ತು ಶಾಸಕರಿಗೆ ಪತ್ರ ಬರೆದಿರುವ ಮೀರಾ ಕುಮಾರ್ ತಮಗೆ ಆಂತರಿಕ ಪ್ರಜ್ಞೆಯಿಂದ ಮತನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಾಬರಮತಿಯಿಂದ ಪ್ರಚಾರ

ಸಾಬರಮತಿಯಿಂದ ಪ್ರಚಾರ

ಮಹಾತ್ಮಾ ಗಾಂಧಿಯವರ ಪಾದದ ಧೂಳಿನಿಂದ ಪವಿತ್ರವಾಗಿರುವ ಗುಜರಾತಿನ ಸಾಬರಮತಿ ಆಶ್ರಮದಿಂದ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸುವುದಾಗಿ ಮೀರಾ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ

ಅಧಿಸೂಚನೆಯ ದಿನಾಂಕ: ಜೂನ್ 14, 2017
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 28
ನಾಮಪತ್ರ ಪರಿಶೀಲನೆ: ಜೂನ್ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ: ಜುಲೈ 1
ಚುನಾವಣಾ ದಿನಾಂಕ: ಜುಲೈ 17 (ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ)
ಫಲಿತಾಂಶದ ದಿನಾಂಕ: ಜುಲೈ 20

English summary
"I want the bundle of casteism should be dumped," UPA's presidential candidate Meira Kumar told in a press conference at Delhi, today. June 27th. It is her first Press meet after announcing as presidential candidate. She will start her campiagn from Gujarat's Sabarmati Ashram for presidential poll which will be scheduled on July 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X