ಗರಿಷ್ಠ ಮತದಾನದ ದಾಖಲೆ ಬರೆದ ರಾಷ್ಟ್ರಪತಿ ಚುನಾವಣೆ

Posted By:
Subscribe to Oneindia Kannada

ನವದೆಹಲಿ, ಜುಲೈ 18: ಭಾರತದ ರಾಷ್ಟ್ರಪತಿ ಹುದ್ದೆಗಾಗಿ ನಿನ್ನೆ(ಜು.17) ನಡೆದ ಚುನಾವಣೆ ಇದುವರೆಗಿನ ರಾಷ್ಟ್ರಪತಿ ಚುನಾವಣೆಗಳಲ್ಲೇ ಅತ್ಯಂತ ಹೆಚ್ಚಿನ ಮತದಾನದ ದಾಖಲೆ ಬರೆದಿದೆ.

ರಾಷ್ಟ್ರಪತಿ ಚುನಾವಣೆ: ಮತದಾನ ಮಾಡಿದ ಮೋದಿ, ಸೋನಿಯಾ

ರಾಷ್ಟ್ರಪತಿ ಹುದ್ದೆಗೆ ಸುಮಾರು ಶೇ.99 ರಷ್ಟು ಮತದಾನವಾಗಿದ್ದು, ಇದು ಇದುವರೆಗಿನ ಗರಿಷ್ಠ ಮತದಾನವೆನ್ನಿಸುತ್ತದೆ ಎಂದು ಲೋಕಸಭಾ ಪ್ರಧಾನ ಕಾರ್ಯದರ್ಶಿ ಅನೂಪ್ ಮಿಶ್ರಾ ಹೇಳಿದ್ದಾರೆ.

President of India poll: Highest ever voting recorded

ಅರುಣಾಚಲ ಪ್ರದೇಶ, ಛತ್ತೀಸ್ ಗಢ, ಅಸ್ಸಾಂ, ಗುಜರಾತ್, ಬಿಹಾರ್, ಹರ್ಯಾಣ, ಹಿಮಾಚಲ ಪ್ರದೇಶ್, ಜಾರ್ಖಂಡ್, ನಾಗಾಲ್ಯಾಂಡ್, ಉತ್ತರಾಖಂಡ್, ಪುದುಚೇರಿಗಳಲ್ಲಿ ಶೇ.100 ರಷ್ಟು ಮತದಾನವಾಗಿದೆ.

ರಾಷ್ಟ್ರಪತಿ ಚುನಾವಣೆ: ಟ್ವಿಟ್ಟಿಗರು ಏನಂತಾರೆ?

ಪಾರ್ಲಿಮೆಂಟ್ ಹೌಸ್ ನಲ್ಲಿ ಶೇ.99 ರಷ್ಟು ಮತದಾನವಾಗಿದ್ದು, ಇಲ್ಲಿ ಮೊದಲ ಮತ ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ!

ಕೋಲ್ಕತ್ತಾದಲ್ಲಿ ಮತಚಲಾಯಿಸಿದ ತೃಣಮೂಲ ಕಾಂಗ್ರೆಸ್ ಸಂಸದರು, ತಾವೆಲ್ಲರೂ ಮೀರಾ ಕುಮಾರ್ ಅವರಿಗೆ ಮತದಾನ ಮಾಡುವ ಮೂಲಕ ಕೇಂದ್ರ ಸರ್ಕಾರದ ಬಗೆಗಿನ ನಮ್ಮ ಪ್ರತಿಭಟನೆಯನ್ನು ಈ ರೀತಿ ವ್ಯಕ್ತಪಡಿಸಿದ್ದೇವೆ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ತಾವು ಮೀರಾ ಕುಮಾರ್ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದರಲ್ಲದೆ, ಯಾರಿಗೆ ಬೆಂಬಲ ನೀಡಬೇಕು ಎಂಬುದು ನಮ್ಮ ಪಕ್ಷದ ಸದಸ್ಯರ ವಿವೇಚನೆಗೆ ಬಿಟ್ಟಿದ್ದು ಎಂದಿದ್ದರು.

ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ರಾಷ್ಟ್ರಪತಿ ಚುನಾವಣೆಯನ್ನು ಎರಡು ಸಿದ್ಧಾಂತಗಳ ನಡುವಿನ ಸ್ಪರ್ಧೆ ಎಂದು ವ್ಯಾಖ್ಯಾನಿಸಿದ್ದಾರೆ.

D K Shivakumar, M B Patil, S R Patil, Who Will Become KPCC President? | Oneindia Kannada

ಜುಲೈ 20, ಗುರುವಾರದಂದು ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ದೇಶದ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದು ಖಚಿತವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The voting for Presidential candidates of India, took place on July 17th. Close to 99% voting recorded. This the highest ever voting for president of India poll, Lok Sabha secretary general and returning officer for the election, Anoop Mishra told in a press meet in New Delhi. The counting will take place on July 20th, Thursday.
Please Wait while comments are loading...