RSS ಸಿದ್ಧಾಂತದಲ್ಲಿರುವ ದೋಷ ತೋರಿಸಿಕೊಡಲಿ ಪ್ರಣಬ್ ದಾದಾ: ಚಿದಂಬರಂ
Recommended Video

ನವದೆಹಲಿ, ಮೇ 30: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದ ಮೂರನೇ ವರ್ಷದ ವರ್ಗ ಸಮಾರಂಭದ ಸಮಾರೋಪಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಯಾಗಿ ತೆರಳುತ್ತಿರುವುದು ಇದೀಗ ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ವಿತ್ತ ಸಚಿವ ಪಿ ಚಿದಂಬರಂ, "ಆರೆಸ್ಸೆಸ್ ನೀಡಿದ ಆಮಂತ್ರಣವನ್ನು ಪ್ರಣಬ್ ದಾದಾ ಒಪ್ಪಿಕೊಂಡಿದ್ದಾರೆ. ಅವರು ಏಕೆ ಒಪ್ಪಿಕೊಂಡರು ಎಂದು ಚರ್ಚಿಸುವುದರಲ್ಲಿ ಅರ್ಥವಿಲ್ಲ. ಆದರೆ ನಾನು ಅವರ ಬಳಿ ಒಂದೇ ಮನವಿ ಮಾಡುತ್ತೇನೆ, ಸರ್ ದಯವಿಟ್ಟು ಆರೆಸ್ಸೆಸ್ಸಿಗರಿಗೆ ತಮ್ಮ ಸಿದ್ಧಾಂತದಲ್ಲಿರುವ ದೋಷವೇನು ಎಂಬುದನ್ನು ತೋರಿಸಿಕೊಡಿ" ಎಂದು ಪಿ ಚಿದಂಬರಂ ಹೇಳಿದ್ದಾರೆ.
ಜೂನ್ 7 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ಧಾರವನ್ನು ಪ್ರಣಬ್ ಮುಖರ್ಜಿ ಮತ್ತೊಮ್ಮೆ ಪರಾಮರ್ಶಿಸಬೇಕು ಎಂದು ಇನ್ನೋರ್ವ ಕಾಂಗ್ರಸ್ ಮುಖಂಡ ರಮೇಶ್ ಚೆನ್ನಿಥಾಲಾ ಹೇಳಿದ್ದಾರೆ.

'ಆರೆಸ್ಸೆಸ್ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತದೆ ಎಂಬುದು ಗೊತ್ತಿದ್ದರೂ ಪ್ರಣಬ್ ಮುಖರ್ಜಿ ಆಹ್ವಾನವನ್ನು ಒಪ್ಪಿಕೊಂಡಿದ್ದು ಸರಿಯಲ್ಲ. ಈ ಕುರಿತ ತಮ್ಮ ನಿರ್ಧಾರವನ್ನು ಅವರು ಮತ್ತೊಮ್ಮೆ ವಿಮರ್ಶಿಸಬೇಕು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications