ಸೆಲ್ಫಿ ವಿಥ್ ಡಾಟರ್ ಮೊಬೈಲ್ ಆಪ್: ದೆಹಲಿಯಲ್ಲಿಂದು ಬಿಡುಗಡೆ
ನವ ದೆಹಲಿ, ಜೂನ್ 9: ಭಾರತದ ಹಿಂದುಳಿದ ರಾಜ್ಯಗಳಲ್ಲಿ ಇಂದಿಗೂ ಸಾಮಾನ್ಯ ಎನ್ನಿಸಿರುವ ಹೆಣ್ಣು ಭ್ರೂಣ ಹತ್ಯೆಯಂಥ ಅನಿಷ್ಟಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 2015 ರಲ್ಲಿ ಆರಂಭವಾದ ಸೆಲ್ಫಿ ವಿಥ್ ಡಾಟರ್ ಅಭಿಯಾನದ ಮುಂದಿನ ಭಾಗವಾಗಿ ಸೆಲ್ಫಿ ವಿಥ್ ಡಾಟರ್ ಮೊಬೈಲ್ ಆಪ್ ಅನ್ನು ಇಂದು (ಜೂನ್ 9) ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು.
ಜನರು ತಮ್ಮ ಹೆಣ್ಣು ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡು ಈ ಆಪ್ ನಲ್ಲಿ ಅಪ್ ಲೋಡ್ ಮಾಡುವಂತೆ ಪ್ರಣಬ್ ಮುಖರ್ಜಿ ಕರೆ ನೀಡಿದರು. ಸೆಲ್ಫಿ ವಿಥ್ ಡಾಟರ್ ಅಭಿಯಾನ ಯಶಸ್ವಿಯಾದ ನಿಟ್ಟಿನಲ್ಲಿ ಇದೀಗ ಅದನ್ನೇ ಆಪ್ ಮೂಲಕ ಪರಿಚಯಿಸುತ್ತಿದ್ದೇವೆ ಎಂದ ಅವರು, ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಲಿಂಗ ತಾರತಮ್ಯ ನಿವಾರಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಆಪ್ ಮಾಡಲಿದೆ ಎಂದರು.
["Selfie With Daughter ತೆಗೆದು ಕಳಿಸಿ ಧೈರ್ಯ ತುಂಬಿ"]

2015ರ ಜೂನ್ ತಿಂಗಳಿನಲ್ಲಿ ಹರ್ಯಾಣದ ಜಿಂದ್ ಜಿಲ್ಲೆಯ ಬಿಬಿಪುರದ ಸುನಿಲ್ ಜಗ್ಲನ್ ಎಂಬ ವ್ಯಕ್ತಿ ತಮ್ಮ ಮಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ ಎಂಬ ಸಂದೇಶ ಹೊತ್ತಿದ್ದ ಆ ಚಿತ್ರ ಎಲ್ಲೆಡೆ ವೈರಲ್ ಆಗಿತ್ತು. ಆ ನಂತರ ಲಕ್ಷಾಂತರ ಜನರು ತಮ್ಮ ಹೆಣ್ಣು ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದರೊಂದಿಗೆ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯೂ ಸೇರಿ ಹೆಣ್ಣು ಮಕ್ಕಳನ್ನು ರಕ್ಷಿಸುವ ಸರ್ಕಾರದ ನಡೆಗೆ ಎಲ್ಲೆಡೆಯಿಂದ ಬೆಂಬಲ ಸಿಕ್ಕಿತ್ತು.












Click it and Unblock the Notifications