ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ, ಜನವರಿ 10: ಇಂದು ಪ್ರಕಾಶ್ ರೈ ಅವರು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ನಂತರ ಪ್ರಕಾಶ್ ರೈ ಅವರನ್ನು ಹೊಗಳಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಪ್ರಕಾಶ್ ರೈ ಪ್ರಕಟಿಸಿದ ಬಳಿಕ ಆಪ್ ಪಕ್ಷವು ಪ್ರಕಾಶ್‌ ರೈಗೆ ಬೆಂಬಲ ಕೊಡುವುದಾಗಿ ಹೇಳಿತ್ತು. ಹಾಗಾಗಿ ಪ್ರಕಾಶ್ ರೈ ಅವರು ಆಪ್‌ ಮುಖಂಡ ಅರವಿಂದ ಕೇಜ್ರಿವಾಲ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಆಗಿದ್ದರು.

ಪ್ರಕಾಶ್ ರೈ ಅವರಂತಹಾ ವ್ಯಕ್ತಿಗಳು ಲೋಕಸಭೆ ಒಳಗೆ ಪ್ರವೇಶ ಮಾಡಬೇಕು, ಆಪ್ ಪಕ್ಷವು ಪ್ರಕಾಶ್ ರೈ ಅವರನ್ನು ಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಕೇಜ್ರಿವಾಲ್ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.

Prakash Raj met Delhi CM Arvind Kejriwal thank him for support

ಮುಂದುವರೆದು, ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವ ಪ್ರಕಾಶ್ ರೈ ಅವರ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಲೋಕಸಭೆಯೊಳಗೆ ಪಕ್ಷಾತೀತವಾದ ಧ್ವನಿಗಳೂ ಸಹ ಇರಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದೇ ಭೇಟಿಯ ಬಗ್ಗೆ ಬೆಳಿಗ್ಗೆ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ಬೆಂಬಲ ಸೂಚಿಸಿದ್ದಕ್ಕೆ ಆಪ್‌ಗೆ ಮತ್ತು ಕೇಜ್ರಿವಾಲ್‌ಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಸಮಸ್ಯೆಗಳ ಕುರಿತು ಚರ್ಚಿಸುವ ವಿಧಾನಗಳನ್ನು ಹಂಚಿಕೊಳ್ಳಿ ಎಂದು ಕೇಜ್ರಿವಾಲ್ ಅವರ ಸಹಾಯವನ್ನೂ ಪ್ರಕಾಶ್‌ ರೈ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+