ರಾಜಕೀಯ ಪ್ರವೇಶಿಸಲು ತಮಗಿದ್ದ ಕಾರಣಗಳನ್ನು ಬಿಚ್ಚಿಟ್ಟ ಸಾಧ್ವಿ ಪ್ರಜ್ಞಾ ಸಿಂಗ್
ನವದೆಹಲಿ, ಏ.24: ಹೇಮಂತ್ ಕರ್ಕರೆ ಹಾಗೂ ಬಾಬ್ರಿ ಮಸೀದಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಈಗ ಮಾಲೆಗಾವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಾಲೆಗಾವ್ ತನಿಖೆಗೆ ಸಂಬಂಧಿಸಿದಂತೆ ತಮಗಾದ ಕಿರುಕುಳವನ್ನು ಮಹಿಳಾ ಸಮುದಾಯಕ್ಕೆ ಹೋಲಿಸಿ ಮಾತನಾಡಿದ್ದಾರೆ. ಭೋಪಾಲ್‌ನಲ್ಲಿ ನಡೆದ ರೋಡ್ ಶೋ ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ, ಅತ್ಯಾಚಾರದ ವಿರುದ್ಧ ಹೋರಾಡಲು ನಾನು ಚುನಾವಣೆಗೆ ನಿಂತಿದ್ದೇನೆ, ಅದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಸಾಧ್ವಿ ಹೇಳಿಕೆ ನೀಡಿದ್ದಾರೆ.
ಯಾವುದೇ ಮಹಿಳೆಯರು ಕ್ರಿಮಿನಲ್‌ಗಳಿಂದ ಹಿಂಸಾಚಾರಕ್ಕೆ ಒಳಗಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಸಾಧ್ವಿ, ನಾನು ಯಾವುದೇ ಹುತಾತ್ಮರ ವಿರುದ್ಧ ಹೇಳಿಕೆ ನೀಡಿಲ್ಲ.

ಆದರೆ ನನಗೆ ನೀಡಿರುವ ಕಿರುಕುಳ, ಹಿಂಸೆ ವಿರುದ್ಧ ಮಾತನಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಜ್ಞಾ ಸಿಂಗ್ ಜೊತೆಗೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಉಪಸ್ಥಿತರಿದ್ದರು.












Click it and Unblock the Notifications