ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ: ಪ್ರಾಮಾಣಿಕ ತೆರಿಗೆದಾರರಿಗೆ ಸಿಗಲಿದೆ ಗೌರವ

|
Google Oneindia Kannada News

ನವದೆಹಲಿ, ಆಗಸ್ಟ್‌ 13: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಪಾರದರ್ಶಕ ತೆರಿಗೆ ವೇದಿಕೆಗೆ ಚಾಲನೆ ನೀಡಿದ್ದಾರೆ. ಮೋದಿ ಸರ್ಕಾರವು ತರಲು ಬಯಸುವ ನೇರ ತೆರಿಗೆ ಸುಧಾರಣೆಯ ಮತ್ತೊಂದು ಹೊಸ ಪ್ರಯತ್ನದ ತೆರಿಗೆ ವೇದಿಕೆಯಾಗಿದೆ.

ಭಾರತೀಯ ಆರ್ಥಿಕತೆಯನ್ನು ಪುನರ್ನಿಮಿಸುವ ಪ್ರಯತ್ನದಲ್ಲಿ ಅನುಸರಣೆಯನ್ನು ಸರಾಗಗೊಳಿಸುವ ಮತ್ತು ಪ್ರಾಮಾಣಿಕ ತೆರಿಗೆದಾರರಿಗೆ ಗೌರವ ನೀಡುವ ಉದ್ದೇಶದಿಂದ ಮುಂದಿನ ಹಂತದ ನೇರ ತೆರಿಗೆ ಸುಧಾರಣೆಗಳನ್ನು ಪಿಎಂ ಮೋದಿ ಅನಾವರಣಗೊಳಿಸಿದ್ದಾರೆ.

ಭಾರತದ ಆರ್ಥಿಕತೆ ಚೇತರಿಕೆಗೆ ಮತ್ತೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆಭಾರತದ ಆರ್ಥಿಕತೆ ಚೇತರಿಕೆಗೆ ಮತ್ತೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆ

ಪ್ರಧಾನಿ ಚಾಲನೆ ನೀಡುವ ಮುನ್ನ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದು ಕೇವಲ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸಿಲ್ಲ. ತೆರಿಗೆದಾರರ ಸುಧಾರಣೆಗಳನ್ನು ಅಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ತೆರಿಗೆ ಇತಿಹಾಸದಲ್ಲಿ ಮಹತ್ತರ ದಿನ

ತೆರಿಗೆ ಇತಿಹಾಸದಲ್ಲಿ ಮಹತ್ತರ ದಿನ

ಭಾರತೀಯ ತೆರಿಗೆ ಇತಿಹಾಸದಲ್ಲಿ ಇದೊಂದು ಮಹತ್ತರ ದಿನವಾಗಿದೆ. ತೆರಿಗೆದಾರರನ್ನು ಸಬಲೀಕರಣಗೊಳಿಸಲು ಪ್ರಧಾನಮಂತ್ರಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು #HoneringTheHonest ಎಂಬ ಪಾರದರ್ಶಕ ವ್ಯವಸ್ಥೆಯ ಮೂಲಕ ಇಂದು ಪ್ರಾರಂಭಿಸಲಾಗುತ್ತಿರುವ ವೇದಿಕೆಯನ್ನು ಜಾರಿಗೆ ತಂದಿದ್ದೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಹೊಣೆಗಾರಿಕೆಯನ್ನು ಒದಗಿಸುವುದಕ್ಕಾಗಿ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್‌ನ್ನು (ಡಿಐಎನ್) ಪರಿಚಯಿಸಿದೆ. ಇದು ಎಲ್ಲಾ ರೀತಿಯ ಸಂವಹನಕ್ಕಾಗಿದ್ದು, ಡಿಐಎನ್ ಇಲ್ಲದೆ, ಐಟಿ ಇಲಾಖೆಯಿಂದ ನೀಡುವ ದಾಖಲೆಗಳು ಅಮಾನ್ಯವಾಗಿದೆ ಎಂದು ಹೇಳಿದ್ದಾರೆ.

ಪ್ರಾಮಾಣಿಕ ತೆರಿಗೆದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಪ್ರಾಮಾಣಿಕ ತೆರಿಗೆದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಪ್ರತಿ ವರ್ಷವೂ ಸರ್ಕಾರಕ್ಕೆ ತಪ್ಪದೇ ತೆರಿಗೆಯನ್ನು ಪಾವತಿಸುವ ಪ್ರಾಮಾಣಿಕ ತೆರಿಗೆದಾರರನ್ನು ಉತ್ತೇಜನ ನೀಡುವ ಹೊಸ ವೇದಿಕೆಗೆ ಚಾಲನೆ ನೀಡಿದ ಮೋದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಏನು ಹೇಳಿದರು ಎಂಬುದನ್ನು ಮುಂದೆ ಓದಿ

ಜುಲೈನಲ್ಲಿ ಜಿಎಸ್‌ಟಿ ಆದಾಯ 87,422 ಕೋಟಿ ರೂಪಾಯಿ ಸಂಗ್ರಹಜುಲೈನಲ್ಲಿ ಜಿಎಸ್‌ಟಿ ಆದಾಯ 87,422 ಕೋಟಿ ರೂಪಾಯಿ ಸಂಗ್ರಹ

ಪ್ರಧಾನಿ ನರೇಂದ್ರ ಮೋದಿ ಮಾತು

ಪ್ರಧಾನಿ ನರೇಂದ್ರ ಮೋದಿ ಮಾತು

* ಕಳೆದ ಹಲವು ವರ್ಷಗಳಲ್ಲಿ, ನಮ್ಮ ಗಮನವು ಬ್ಯಾಂಕಿಂಗ್ ಅನ್ನು ಸುರಕ್ಷಿತಗೊಳಿಸುವುದು ಹಾಗೂ ಬ್ಯಾಂಕಿಗ್ ವಲಯದಲ್ಲಿ ಮಹತ್ತರ ಬದಲಾವಣೆಯನ್ನು ತರಲಾಗಿದೆ.

* ಪ್ರಾಮಾಣಿಕ ತೆರಿಗೆದಾರರಿಂದ ದೇಶದ ಅಭಿವೃದ್ಧಿ ಸಾಧ್ಯ. ಇಂದು ನಾವು ಅವರನ್ನು ಗೌರವಿಸುತ್ತಿದ್ದೇವೆ. ಪ್ರಾಮಾಣಿಕ ತೆರಿಗೆ ಪಾವತಿ ಎಲ್ಲರ ಕರ್ತವ್ಯ. ತೆರಿಗೆ ವಂಚನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಪ್ರಾಮಾಣಿಕ ತೆರಿಗೆದಾರರನ್ನು ಸರ್ಕಾರ ಗುರುತಿಸಿ ಗೌರವಿಸುತ್ತದೆ.

* ಕಳೆದ ಆರು ವರ್ಷಗಳಲ್ಲಿ ಬ್ಯಾಂಕಿಗ್ ಅನ್ನು ಅನ್‌ಬ್ಯಾಂಕಿಗ್‌ ಮಾಡುವುದು. ಅಸುರಕ್ಷಿತರನ್ನು ಸುರಕ್ಷಿತಗೊಳಿಸುವುದು ಮತ್ತು ಹೂಡಿಕೆ ಇಲ್ಲದೆಡೆ ಹೂಡಿಕೆ ಮಾಡುವುದರ ಬಗ್ಗೆ ನಾವು ಗಮನ ಹರಿಸಿದ್ದೇವೆ. ಕಳೆದ ಆರು ವರ್ಷಗಳಲ್ಲಿ ಭಾರತವು ಹೊಸ ತೆರಿಗೆ ಮಾದರಿಯ ವಿಕಾಸಕ್ಕೆ ಸಾಕ್ಷಿಯಾಗಿದೆ. ನಾವು ಸಂಕೀರ್ಣತೆ, ತೆರಿಗೆ, ವ್ಯಾಜ್ಯಗಳನ್ನು ಕಡಿಮೆ ಮಾಡಿದ್ದೇವೆ ಮತ್ತು ಪಾರದರ್ಶಕತೆ , ತೆರಿಗೆ ಪಾಲನೆ ಮತ್ತು ತೆರಿಗೆದಾರರ ಮೇಲಿನ ನಂಬಿಕೆ ಹೆಚ್ಚಿಸಿದ್ದೇವೆ.

* ಇದು ಹೊಸ ಪ್ರಯಾಣದ ಪ್ರಾರಂಭವಾಗಿದೆ. ಪ್ರಾಮಾಣಿಕ ತೆರಿಗೆದಾರನು ರಾಷ್ಟ್ರದ ಬೆಳವಣಿಗೆಯಲ್ಲಿ ಭಾರೀ ಪಾತ್ರ ವಹಿಸುತ್ತಾನೆ.

* ತೆರಿಗೆ ನೀತಿಯಲ್ಲಿ ಬದಲಾವಣೆ ತರಲಾಗಿದೆ. ಇಂದಿನ ಹೊಸ ಪ್ರಯಾಣ ಆರಂಭವಾಗಿದ್ದು, ತೆರಿಗೆ ಪಾವತಿ ಮತ್ತಷ್ಟು ಜನಸ್ನೇಹಿ ಆಗಿದೆ. ತೆರಿಗೆ ಪಾವತಿ ಸುಲಲಿತ ಮತ್ತು ಸುರಕ್ಷಿತವಾಗಿದೆ.

* ಸಂಕೀರ್ಣತೆ ಇರುವಲ್ಲಿ ಅನುಸರಣೆ ಕಷ್ಟ. ಕಾನೂನು ಸ್ಪಷ್ಟವಾಗಿದ್ದರೆ, ತೆರಿಗೆದಾರರು ಸಂತೋಷವಾಗಿರುತ್ತಾರೆ, ಹಾಗೆಯೇ ದೇಶವೂ ಸಹ. ಈ ಕೆಲಸವು ಕೆಲವು ಸಮಯದಿಂದ ಪ್ರಕ್ರಿಯೆಯಲ್ಲಿದೆ. ಈಗಿನಂತೆ, ಜಿಎಸ್‌ಟಿ ಡಜನ್‌ಗಟ್ಟಲೆ ತೆರಿಗೆಗಳ ಬದಲಿಗೆ ಬಂದಿದೆ.

* ಇಲ್ಲಿಯವರೆಗೆ, ನಾವು ವಾಸಿಸುವ ನಗರದ ತೆರಿಗೆ ಇಲಾಖೆ ಎಲ್ಲವನ್ನೂ ನಿರ್ವಹಿಸುತ್ತದೆ. ಈಗ ಇದು ಮುಗಿದಿದೆ. ತಂತ್ರಜ್ಞಾನದೊಂದಿಗೆ, ಪರಿಶೀಲನೆಯ ವಿಷಯಗಳನ್ನು ಐಟಿ ಇಲಾಖೆಯ ಅಧಿಕಾರಿಗಳಿಗೆ ನಿಯೋಜಿಸಲಾಗುತ್ತದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಯಾರು ನಿರ್ಣಯಿಸುತ್ತಾರೆ ಎಂಬುದನ್ನು ಈಗ ಕಂಪ್ಯೂಟರ್ ನಿರ್ಧರಿಸುತ್ತದೆ ಎಂದು ಪಿಎಂ ಹೇಳಿದ್ದಾರೆ.

* ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳ ಹೊರತಾಗಿ, ಮೇಲ್ಮನವಿಗಳು ಮುಖರಹಿತವಾಗಿರುತ್ತವೆ. ತೆರಿಗೆದಾರರ ಚಾರ್ಟರ್ ದೇಶದ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

* ನಮ್ಮ ತೆರಿಗೆ ವ್ಯವಸ್ಥೆಯು ತಡೆರಹಿತ, ನೋವುರಹಿತ ಮತ್ತು ಮುಖರಹಿತವಾಗಿರಬೇಕು. ತಡೆರಹಿತ ಎಂದರೆ ತೆರಿಗೆದಾರರನ್ನು ಗೊಂದಲಗೊಳಿಸುವ ಬದಲು ಸಮಸ್ಯೆಯನ್ನು ಪರಿಹರಿಸಲು ತೆರಿಗೆ ಆಡಳಿತವು ಕೆಲಸ ಮಾಡಬೇಕು ಎಂದು ಪ್ರಧಾನಿ ಹೇಳಿದರು.

* ಕಳೆದ ಆರು ವರ್ಷಗಳಲ್ಲಿ ತೆರಿಗೆ ಪರಿಶೀಲನೆ ಪ್ರಕರಣಗಳ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗಿದೆ ಎಂದು ಪ್ರಧಾನಿ ಹೇಳಿದರು. ಐಟಿಆರ್ ಸಲ್ಲಿಸುವವರ ಸಂಖ್ಯೆಯೂ 2.5 ಕೋಟಿ ಹೆಚ್ಚಾಗಿದೆ. ಆದಾಗ್ಯೂ, ಸಂಖ್ಯೆ ಇನ್ನೂ ಕಡಿಮೆಯಾಗಿದೆ. ಐಟಿಆರ್ ಅನ್ನು ದೇಶದ ಎಲ್ಲಾ ಕಡೆಗೆ ಜವಾಬ್ದಾರಿಯಾಗಿ ಸಲ್ಲಿಸುವಂತೆ ನಾನು ಎಲ್ಲರಿಗೂ ವಿನಂತಿಸುತ್ತೇನೆ ಎಂದಿದ್ದಾರೆ.

ಆನ್‌ಲೈನ್ ಮೇಲ್ಮನವಿ ಸೇವೆ ಸೆಪ್ಟೆಂಬರ್ 25ರಿಂದ ಲಭ್ಯ

ಆನ್‌ಲೈನ್ ಮೇಲ್ಮನವಿ ಸೇವೆ ಸೆಪ್ಟೆಂಬರ್ 25ರಿಂದ ಲಭ್ಯ

ಪಾರದರ್ಶಕ ತೆರಿಗೆ ವೇದಿಕೆಯು ಆನ್‌ಲೈನ್ ಮೌಲ್ಯಮಾಪನ, ಆನ್‌ಲೈನ್ ಮನವಿ ಮತ್ತು ತೆರಿಗೆದಾರರ ಚಾರ್ಟರ್‌ನಂತಹ ದೊಡ್ಡ ಸುಧಾರಣೆಗಳನ್ನು ಹೊಂದಿದೆ. ಈ ರೀತಿಯ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬಂದರೆ, ಆನ್‌ಲೈನ್ ಮೇಲ್ಮನವಿ ಸೇವೆಯು ಸೆಪ್ಟೆಂಬರ್ 25ರಿಂದ ಲಭ್ಯವಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

English summary
PM Narendra modi today launched transparent taxation platfor. Highlights of the New taxation platform in kannada here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X