ನಗರಗಳನ್ನು 'ಸ್ಮಾರ್ಟ್' ಮಾಡುವ 3 ಯೋಜನೆಗೆ ಚಾಲನೆ
ನವದೆಹಲಿ, ಜೂ.25: ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಮೂರು ಮಹತ್ವದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದ್ದಾರೆ. ಸ್ಮಾರ್ಟ್ ಸಿಟಿ, ಅಮೃತ್, ಅರ್ಬನ್ ಹೌಸಿಂಗ್ ಯೋಜನೆಗೆ ಮೋದಿ ನಾಂದಿ ಹಾಡಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು ಅವರು ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕಾಗಿ ಕರಡು ಪ್ರತಿ ಸಿದ್ಧಪಡಿಸಿ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದರು. ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಹಾಗೂ 26 ನಗರಗಳು ಅಮೃತ್ ಯೋಜನೆಗೆ ಆಯ್ಕೆಯಾಗಿವೆ.

ಅಮೃತ್ ಯೋಜನೆಗೆ ಕರ್ನಾಟಕದಿಂದ ಆಯ್ಕೆಯಾದ ನಗರಗಳು: ಕೋಲಾರ, ಬಾಗಲಕೋಟೆ, ರಾಣೆಬೆನ್ನೂರು, ಮಂಡ್ಯ, ಚಿಕ್ಕಮಗಳೂರು, ಗಂಗಾವತಿ, ರಾಬರ್ಟ್ ಸನ್ ಪೇಟೆ, ಉಡುಪಿ, ಭದ್ರಾವತಿ, ಚಿತ್ರದುರ್ಗ, ಬೀದರ್, ಹೊಸಪೇಟೆ, ಹಾಸನ, ಗದಗ-ಬೆಟಗೇರಿ, ವಿಜಯಪುರ, ಶಿವಮೊಗ್ಗ, ತುಮಕೂರು, ರಾಯಚೂರು, ಮಂಗಳೂರು, ಬೆಳಗಾವಿ, ಕಲಬುರಗಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು,ಮೈಸೂರು, ಹುಬ್ಬಳ್ಳಿ- ಧಾರವಾಡ.
ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿಗಾಗಿ ಜೆಎನ್ ನರ್ಮ್ ಬದಲಿಗೆ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಅಮೃತ್ ಯೋಜನೆ ಹಾಗೂ ಅರ್ಬನ್ ಹೌಸಿಂಗ್ ಯೋಜನೆಗೆ ಚಾಲನೆ ನೀಡಿ ಮೋದಿ ಅವರು ಮಾಡಿದ ಭಾಷಣ ಇಲ್ಲಿದೆ...
ಲೋಕ ನಾಯಕ ಜಯಪ್ರಕಾಶ್ ನಾರಾಯಣ ಅವರ ಅವರ ಸ್ಮಾರಕ ನಿರ್ಮಿಸಲಾಗುವುದು ಎಂದ ಮೋದಿ, ತುರ್ತು ಪರಿಸ್ಥಿತಿ ಕರಾಳ ನೆನಪನ್ನು ಬಿಚ್ಚಿಟ್ಟರು.
ಜೆಪಿ ಅವರು ಸಂಪೂರ್ಣ ಕ್ರಾಂತಿ ಹೋರಾಟದಿಂದ ದೇಶಾದ್ಯಂತ ಜನರು ಈ ಕರಾಳ ಘೋಷಣೆಯನ್ನು ವಿರೋಧಿಸಿ ಪ್ರಜಾಪ್ರಭುತ್ವ ಮರು ಸ್ಥಾಪನೆಗೆ ಮುಂದಾದರು. ಆ ದಿನಗಳನ್ನು ಎಂದೂ ಮರೆಯುವಂತಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಇಂದಿಗೆ 40 ವರ್ಷಗಳು ಸಂದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಪ್ರಸಕ್ತ ಹಾಗೂ ಸಂರ್ವಾಂಗೀಣ ಭಾರತ ನಿರ್ಮಾಣಕ್ಕೆ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ದೇಶದ ಅಭಿವೃದ್ಧಿಗೆ ಇದು ಪರಿಣಾಮಕಾರಿ ಎಂದರು. ದೇಶದ ಭವಿಷ್ಯ ಭದ್ರಪಡಿಸಬೇಕಿದೆ ಶಸಕ್ತ ಹಾಗೂ ಸರ್ವಾಂಗೀಣ ಅಭಿವೃದ್ಧಿ ಮಾತ್ರ ಸಾಧ್ಯ ಎಂದರು.












Click it and Unblock the Notifications