ಪಟೇಲ್ ಆಧುನಿಕ ಭಾರತದ ವಾಸ್ತುಶಿಲ್ಪಿ : ಮೋದಿ
ನವದೆಹಲಿ, ಅ.31 : ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 139ನೇ ಜನ್ಮ ದಿನವನ್ನು 'ರಾಷ್ಟ್ರೀಯ ಏಕತಾ ದಿನ' ವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಏಕತಾ ಓಟಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಚಾಲನೆ ನೀಡಿದರು. ಪಟೇಲ್ ಆಧುನಿಕ ಭಾರತದ ವಾಸ್ತುಶಿಲ್ಪಿ ಎಂದು ಮೋದಿ ಬಣ್ಣಿಸಿದರು.
ಶುಕ್ರವಾರ ಬೆಳಗ್ಗೆ ಪಟೇಲ್ ಚೌಕ್‌ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು. ನಂತರ ಇಂಡಿಯಾ ಗೇಟ್‌ನಿಂದ ವಿಜಯ್ ಚೌಕ್‌ನವರೆಗಿನ 'ಏಕತಾ ಓಟಕ್ಕೆ' ಚಾಲನೆ ನೀಡಿದರು.

ಏಕತಾ ಓಟಕ್ಕೆ ಚಾಲನೆ ನೀಡುವ ಮೊದಲು ಮಾತನಾಡಿ ಪ್ರಧಾನಿ ಮೋದಿ, ಭಾರತದ ಇತಿಹಾಸದಲ್ಲಿ ಪಟೇಲರ ಹೆಸರು ಅಜರಾಮರವಾಗಿದೆ. ಸಿದ್ಧಾಂತಗಳಿಗೆ ತಕ್ಕಂತೆ ಭಾರತದ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
I am feeling very glad. I always felt history was unkind to Sardar Patel. We decided to mark this as Rashtriya Ekta Diwas: Venkaiah Naidu
— PMO India (@PMOIndia) October 31, 2014 ಸರ್ದಾರ್ ಪಟೇಲರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ ಮತ್ತು ದೇಶ ಪ್ರೇಮ ಮಾದರಿಯಾಗಿದೆ. ಭಾರತ ದೇಶದ ಇತಿಹಾಸದಲ್ಲಿ ಪಟೇಲರು ಎಂದೆಂದೂ ಅಮರ. ತಮ್ಮ ಜೀವನವನ್ನೇ ದೇಶಕ್ಕೆ ಸರ್ಮಿಪಿಸಿದ್ದು, ಪಟೇಲರ ಕೊಡುಗೆಯನ್ನು ದೇಶದ ಪ್ರಜೆಗಳು ಎಂದಿಗೂ ಮರೆಯುವುದಿಲ್ಲ. ಪಟೇಲ್ ಆಧುನಿಕ ಭಾರತದ ವಾಸ್ತುಶಿಲ್ಪಿ ಎಂದು ಮೋದಿ ಬಣ್ಣಿಸಿದರು.
Sardar Patel joined Mahatma Gandhi and integrated the farmers in the freedom struggle: PM @narendramodi
— PMO India (@PMOIndia) October 31, 2014 ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇವೆ. ಗಾಂಧಿ ಮತ್ತು ಪಟೇಲರ ನಡುವೆ ಅವಿನಾಭಾವ ಸಂಬಂಧವಿತ್ತು. ಅವರ ನಡುವಿನ ಸ್ನೇಹ ಮತ್ತು ಸಂಬಂಧ ಎಂದಿಗೂ ಮುರಿಯುವಂಥದ್ದಾಗಿರಲಿಲ್ಲ ಎಂದು ಮೋದಿ ಹೇಳಿದರು. ಇದೇ ವೇಳೆ ಪಟೇಲರ ಜನ್ಮದಿನವಾದ ಅಕ್ಟೋಬರ್ 31ನ್ನು ದೇಶಕ ಏಕತೆಯ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
Sardar Patel's life is a journey of deep-rooted courage, dedication & service to the Motherland. He is truly the architect of Modern India.
— Narendra Modi (@narendramodi) October 31, 2014 











Click it and Unblock the Notifications