ಭಾರತ ಆಸ್ಟ್ರೇಲಿಯಾ ವರ್ಚುವಲ್ ದ್ವಿಪಕ್ಷೀಯ ಸಭೆ: ಇದೇ ಮೊದಲು

ನವದೆಹಲಿ, ಜೂನ್4: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಉಲ್ಬಣಗೊಂಡಿದ್ದ ಅರಣ್ಯ ನಾಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜನವರಿ ತಿಂಗಳ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರು.

ಮಾರಿಸನ್ ಜನವರಿ 13 ರಿಂದ 16 ರವರೆಗೆ ತಮ್ಮ ಭಾರತದ ತಮ್ಮ ಸಹೋದ್ಯೋಗಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಬೇಕಿತ್ತು ಆದರೆ ಪ್ರವಾಸ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಮಾರಿಸನ್ ಅವರು ಆಸ್ಟ್ರೇಲಿಯಾಕ್ಕೆ ಹಿಂದಿರುಗುವಾಗ ಭೇಟಿ ನೀಡಬೇಕಿದ್ದ ಜಪಾನ್‌ ಯೋಜಿತ ಪ್ರವಾಸವನ್ನೂ ಕೂಡ ರದ್ದುಗೊಳಿಸಿದ್ದರು.

PM Modi To Hold First Ever Virtual Bilateral Summit With Australian PM Today

ಗುರುವಾರ ವಿಡಿಯೋ ಕಾನ್ಫರೆನ್ಸ್ ನಿಗದಿಯಾದ ಬಳಿಕ ಅದೇ ಖುಷಿಯಲ್ಲಿ ಮಾರಿಸನ್ ಅವರು ಸಮೋಸಾ ತಯಾರಿಸಿ ಅದರ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದರು. ಮೋದಿ ಅವರು ಸಸ್ಯಾಹಾರಿ ಇದನ್ನು ಅವರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದರು.

ಪ್ರಮುಖವಾಗಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸುವ ಕುರಿತು ಪ್ರಧಾನಿ ಮೋದಿ ಹಾಗೂ ಸ್ಕಾಟ್ ಮಾರಿಸನ್ ಮಾತುಕತೆ ನಡೆಸಲಿದ್ದಾರೆ.

ಇದೇ ವೇಳೆ ಮಾರಕ ಕೊರೊನಾ ವೈರಸ್ ಹಾವಳಿಯನ್ನು ತಗ್ಗಿಸಲು ಎರಡೂ ರಾಷ್ಟ್ರಗಳು ಕೈಗೊಳ್ಳಬಹುದಾದ ಜಂಟಿ ಪ್ರಯತ್ನಗಳ ಕುರಿತಾಗಿಯೂ ಈ ನಾಯಕರು ಚರ್ಚೆ ನಡೆಸಲಿದ್ದಾರೆ.

ಸಾಕಷ್ಟು ದೇಶಗಳು ಭಾರತದ ಜೊತೆ ಸ್ನೇಹ ಬೆಳೆಸಲು ತಯಾರಿವೆ ಅದರಲ್ಲಿ ಆಸ್ಟ್ರೇಲಿಯಾ ಕೂಡ ಒಂದಾಗಿದೆ. ಕೊವಿಡ್ 19 ರೋಗದ ಕುರಿತು ಕೂಡ ಚರ್ಚೆ ನಡೆಸಲಿದ್ದಾರೆ.

ದೇಶದ ಭದ್ರತೆಗೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಕಳೆದ ಬಾರಿ ಜಪಾನ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯೊಂದಿಗೆ ತೆಗೆದುಕೊಂಡಿದ್ದ ಫೋಟೊವನ್ನು ಮಾರಿಸನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಯಾವ್ಯಾವ ವಿಚಾರಗಳ ಕುರಿತು ಸಭೆ ನಡೆಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+