ಸಿಂಗ್ ರಾಜೀನಾಮೆ: ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೆ?

ನವದೆಹಲಿ, ಡಿ.31: ವರ್ಷಾಂತ್ಯ ದಿನದಂದು ಕಾಂಗ್ರೆಸ್ ಪಕ್ಷದ ಕಡೆಯಿಂದ ಭಾರಿ ಸಂಚಲನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ. ಏನಪ್ಪಾ ಅಂದರೆ ಮುಂದಿನ ವರ್ಷ ಮೂರಕ್ಕೆ ಪಕ್ಷದ ಯುವರಾಜ (शहजादे) ರಾಹುಲ್ ಗಾಂಧಿ ಅವರು ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರಂತೆ.

ಹೌದು ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ಇಂದು ಬೆಳಗ್ಗೆ ಕೊಟ್ಟಿರುವ ಸುಳಿವನ್ನು ಗಮನಿಸಿದರೆ ರಾಹುಲ್ ಗಾಂಧಿ ಪ್ರಧಾನಿ ಪಟ್ಟಕ್ಕೇರುವ ಸಾಧ್ಯತೆಯಿದೆ.

Prime Minister Manmohan Singh calls for Press Meet on Jan 3- May also resign
ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮುಂದಿನ ತಿಂಗಳು ಜನವರಿ 2ರಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ UPA-2 ಸರಕಾರದ ಅಷ್ಟೂ ಸಾಧನೆಯನ್ನು ಬಿಡಿಸಿಡಲಿದ್ದಾರೆ ಎಂದು ಸಚಿವ ಚಿದಂಬರಂ ಅವರು ಹೇಳಿದ್ದಾರೆ.

ಆದರೆ ತಾಜಾ ಸಮಾಚಾರದ ಪ್ರಕಾರ ಪ್ರಧಾನಿ ಸಿಂಗ್ ರಾಜೀನಾಮೆ ನೀಡುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ.

ಅದಾದ ನಂತರ ರಾಜಕೀಯ ತಜ್ಞರ ಪ್ರಕಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಮಾರನೆಯ ದಿನ ಶುಕ್ರವಾರ ಸಂಜೆಗೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ:
ಅಂದರೆ ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷವು ಆಮೂಲಾಗ್ರ ಮಾರ್ಪಾಡಿನೊಂದಿಗೆ ಆದರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟದಿಂದ ಇಳಿಸಿ, ಚುನಾವಣೆಗಾಗಿ ರಾಹುಲ್ ಗಾಂಧಿ ಅವರನ್ನೇ ಕಾಂಗ್ರೆಸ್ ಪಕ್ಷದ ಫೇಸ್ ಆಗಿ ಬಿಂಬಿಸುವ ಪ್ರಯತ್ನಗಳು ಪಕ್ಷದ ವತಿಯಿಂದ ನಡೆದಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+