ಅಪನಗದೀಕರಣದಿಂದ ನಗದು ವ್ಯವಹಾರ ಇಳಿಕೆ: ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 13: ಸಮಾಜದಲ್ಲಿ ನಗದು ವ್ಯವಹಾರ ಕಡಿಮೆ ಮಾಡಬೇಕು ಎಂಬುದೇ ಅಪನಗದೀಕರಣದ ಉದ್ದೇಶವಾಗಿತ್ತು. ಅದು ಈಡೇರಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ಬುಧವಾರ ಆಯೋಜಿಸಿರುವ ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?

ಆಧಾರ್ ಜಾರಿಗೆ ತಂದಾಗ ಅದರ ಪ್ರಭಾವವನ್ನು ಪೂರ್ಣ ಪ್ರಮಾಣದಲ್ಲಿ ಅರಿತಿರಲಿಲ್ಲ. ಆಧಾರ್ ಶಾಸನಬದ್ಧಗೊಳಿಸುವುದು ಸಂವಿಧಾನಕ್ಕೆ ಒಂದು ಸವಾಲು ಎಂದು ಅವರು ಹೇಳಿದ್ದಾರೆ.

PM Jan Dhan Yojana down to 20 per cent from 77 per cent in 3 years: Arun Jaitley

ಅಪನಗದೀಕರಣದ ಪರಿಣಾಮವಾಗಿ ನಗದು ವ್ಯವಹಾರದ ಪ್ರಮಾಣ ಕಡಿಮೆಯಾಗಿದೆ. ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕತೆಯಲ್ಲಿ ಎಲ್ಲವೂ ಅಧಿಕೃತ ಲೆಕ್ಕಾಚಾರ ತಿಳಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಶೂನ್ಯ ಠೇವಣಿಯ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಕಳೆದ ಮೂರು ವರ್ಷದಲ್ಲಿ ಶೇ 77ರಿಂದ ಶೇ 20ಕ್ಕೆ ಇಳಿಕೆಯಾಗಿದೆ. ದುರ್ಬಲ ವರ್ಗದವರಿಗಾಗಿ ತೆರೆಯಲಾದ ಖಾತೆಗಳು ವಿಪರೀತ ದೊಡ್ಡ ಸಂಖ್ಯೆಯಲ್ಲಿವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಫೈನಾನ್ಷಿಯಲ್ ಇನ್ ಕ್ಲೂಷನ್ ನ ಸಮಾವೇಶದಲ್ಲಿ ಅರುಣ್ ಜೇಟ್ಲಿ ಅವರು ಹೇಳಿದ ಪ್ರಮುಖಾಂಶಗಳು ಹೀಗಿವೆ.

* ಜನರು ಬ್ಯಾಂಕ್ ಖಾತೆ ತೆರೆದರಷ್ಟೇ ಆಗುವುದಿಲ್ಲ, ಅದನ್ನು ಬಳಸಬೇಕು. ಅದಕ್ಕಾಗಿ ಎಲ್ಲ ಸಾಧ್ಯತೆಗಳ ಬಗ್ಗೆಯೂ ಯೋಚಿಸಬೇಕು

* ಸರಕಾರದ ಸಂಪನ್ಮೂಲಗಳು ಅಗತ್ಯ ಇರುವವರನ್ನು ಗುರಿಯಾಗಿಟ್ಟುಕೊಂಡು ತಲುಪಿಸಬೇಕು

* ಸರಕಾರದ ಸಬ್ಸಿಡಿಗಳು ಯಾರನ್ನು ಗುರಿಯಾಗಿಟ್ಟುಕೊಂಡು ನೀಡಲಾಗುತ್ತಿದೆಯೋ ಆ ಜನರಿಗೆ ತಲುಪಬೇಕು

* ಕೇಂದ್ರ ಹಾಗೂ ರಾಜ್ಯದ ಹಂತದಲ್ಲಿ ಪರಿಣಾಮಕಾರಿಯಾದ ಯೋಜನೆಗಳಿವೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ತಲುಪುತ್ತಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು

* ಬ್ಯಾಂಕ್ ಗಳ ಕಾರ್ಯ ಚಟುವಟಿಕೆ ಉತ್ತಮವಾಗಲಿ ಎಂಬ ಕಾರಣಕ್ಕೆ ಬ್ಯಾಂಕ್ ಮೂಲಕವೇ ಇನ್ಷೂರೆನ್ಸ್ ಹಾಗೂ ನಿವೃತ್ತಿ ವೇತನ ದೊರೆಯುವಂತೆ ಯೋಜನೆ ಮಾಡಿದ್ದೇವೆ

* ನಾವೀಗ ಆಧಾರ್ ನ ಪ್ರಾಮುಖ್ಯತೆ ತಿಳಿಯಲು ಆರಂಭಿಸಿದ್ದೇವೆ. ಭಾರತದ ಭವಿಷ್ಯಕ್ಕೆ ಇದು ಬಹಳ ಮುಖ್ಯ

* ಈ ಹಿಂದೆ ಆಗದಂಥ ಆರ್ಥಿಕ- ರಾಜಕೀಯ ಬದಲಾವಣೆಗಳು ಫೈನಾನ್ಷಿಯಲ್ ಇನ್ ಕ್ಲೂಷನ್ ವಿಚಾರದಲ್ಲಿ ಕಳೆದ ಮೂರು ವರ್ಷದಲ್ಲಿ ಆಗಿದೆ

* ಮೂರು ವರ್ಷದಲ್ಲಿ ಶೂನ್ಯ ಮೊತ್ತದ ಬ್ಯಾಂಕ್ ಖಾತೆಗಳು ಶೇ 77ರಿಂದ ಶೇ 20ಕ್ಕೆ ಇಳಿಕೆಯಾಗಿವೆ

ಇನ್ನು ಜನ್ ಧನ್ ಖಾತೆಯ ಕ್ರಾಂತಿ ಕಾರಿ ಬದಲಾವಣೆ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇದೇ ಸಮಾವೇಶದಲ್ಲಿ ಸಂಜೆ 4.35ಕ್ಕೆ ಮಾತನಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Zero balance accounts under PM Jan Dhan Yojana down to 20 per cent from 77 per cent in 3 years, said by central financia minister Arun Jaitley at Conclave on Financial Inclusion by United Nations in Delhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ