ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧ ರಾಜ್ಯಗಳ ಜನರು ಹಿಂದಿಯಲ್ಲಿ ಮಾತನಾಡಬೇಕು, ಇಂಗ್ಲಿಷ್ ಅಲ್ಲ: ಶಾ

|
Google Oneindia Kannada News

ನವದೆಹಲಿ ಏಪ್ರಿಲ್ 8: ಭಾರತ ವಿವಿಧ ಭಾಷೆಗಳ ದೇಶ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಆದರೆ ಪ್ರಪಂಚದಲ್ಲಿ ನಮ್ಮ ರಾಷ್ಟ್ರದ ಗುರುತಾಗುವ ಒಂದು ಭಾಷೆಯನ್ನು ಹೊಂದುವುದು ಅವಶ್ಯಕವಾಗಿದೆ. ಇಡೀ ದೇಶವನ್ನು ಒಂದೇ ದಾರದಲ್ಲಿ ಕಟ್ಟಿಕೊಡುವ ಭಾಷೆ ಯಾವುದಾದರೂ ಇದ್ದರೆ ಅದು ಹಿಂದಿ. ಇದನ್ನು ಹೆಚ್ಚು ಮಾತನಾಡಬೇಕು. ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ ಸಂವಹನ ನಡೆಸಬೇಕು, ಇಂಗ್ಲಿಷ್‌ನಲ್ಲಿ ಅಲ್ಲ ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಸಲಹೆ ನೀಡಿದ್ದಾರೆ.

ಸಂಸದೀಯ ಅಧಿಕೃತ ಭಾಷಾ ಸಮಿತಿಯ 37 ನೇ ಸಭೆಯಲ್ಲಿ ಮಾತನಾಡಿದ ಅವರು, "ಸರ್ಕಾರವನ್ನು ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಇದು ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಈಗ ಅಧಿಕೃತ ಭಾಷೆಯನ್ನು ದೇಶದ ಏಕತೆಯ ಪ್ರಮುಖ ಭಾಗವಾಗಿಸುವ ಸಮಯ ಬಂದಿದೆ. ಇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ ಅದು ಭಾರತದ ಭಾಷೆಯಲ್ಲಿರಬೇಕು" ಎಂದು ಹೇಳಿದ್ದಾರೆ ಎಂದು ಗೃಹ ಸಚಿವಾಲಯ ಉಲ್ಲೇಖಿಸಿದೆ.

ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳನ್ನು ಅಲ್ಲ ಎಂದು ಶಾ ಸ್ಪಷ್ಟಪಡಿಸಿದರು. ಇತರ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸುವ ಮೂಲಕ ಹಿಂದಿಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

Recommended Video

Zameer Ahmed ಕಾಂಗ್ರೆಸ್ ತೊರೆದು JDS ಸೇರಲಿದ್ದಾರ | Oneindia Kannada
People from different states should speak in Hindi, not English: Amit Shah

ಶಾ ಅವರು ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿದ್ದು, ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಮತ್ತು ಹಿಂದಿ ಬೋಧನಾ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಗೃಹ ಸಚಿವರು ಒತ್ತಿ ಹೇಳಿದರು.

MHA ಪ್ರಕಾರ, ಸಚಿವ ಸಂಪುಟದ 70 ಪ್ರತಿಶತದಷ್ಟು ಕಾರ್ಯಸೂಚಿಯನ್ನು ಈಗ ಹಿಂದಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಶಾ ಸದಸ್ಯರಿಗೆ ತಿಳಿಸಿದರು. ಈಶಾನ್ಯದ ಎಂಟು ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಮತ್ತು ಪ್ರದೇಶದ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ಪರಿವರ್ತಿಸಿದ್ದಾರೆ ಎಂದು ಅವರು ಹೇಳಿದರು. ಈ ಎಲ್ಲಾ ರಾಜ್ಯಗಳು ಹತ್ತನೇ ತರಗತಿಯವರೆಗಿನ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಶಾ ಅವರು ಅಧಿಕಾರಿಗಳಿಗೆ ಮತ್ತು ಯುವಕರಿಗೆ ಹಿಂದಿಯ ಹೆಚ್ಚಿನ ಬಳಕೆಗೆ ಒತ್ತಾಯಿಸಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಗಳು ಪ್ರಾಥಮಿಕವಾಗಿ ಭಾಷೆಯ ಕಾರಣದಿಂದಾಗಿ ರಕ್ಷಿಸಲ್ಪಟ್ಟಿವೆ ಎಂದು ಹೇಳಿದ್ದಾರೆ.

People from different states should speak in Hindi, not English: Amit Shah

2019 ರಲ್ಲಿ ಹಿಂದಿ ದಿವಸ್‌ನಲ್ಲಿ ಭಾಷೆಯ ಕುರಿತು ತಮ್ಮ ಮೊದಲ ಭಾಷಣವನ್ನು ಮಾಡುತ್ತಾ ಶಾ ಅವರು "ಒಂದು ರಾಷ್ಟ್ರ, ಒಂದು ಭಾಷೆ" ಕಲ್ಪನೆಯನ್ನು ಮುಂದಿಟ್ಟರು.ಹಿಂದಿ ಭಾಷೆಯನ್ನು ಎಲ್ಲರು ಮಾತನಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಪಿಐ(ಎಂ) ಇದನ್ನು ಭಾರತದ ವೈವಿಧ್ಯತೆಯ ಮೂಲ ತತ್ವಗಳ ಮೇಲಿನ ದಾಳಿ ಎಂದು ಕರೆದರೆ, ಕಾಂಗ್ರೆಸ್ ನಾಯಕ ರಾಜೀವ್ ಗೌಡ ಬಿಜೆಪಿಗೆ ಸಂವಿಧಾನದ 29 ನೇ ವಿಧಿ ಬಹು ಭಾಷೆಗಳನ್ನು ಗೌರವಿಸಿದೆ ಎಂದು ನೆನಪಿಸಿದರು.

ಅಲ್ಲಿಂದೀಚೆಗೆ, ಶಾ ಅವರು ತಮ್ಮ ಭಾಷೆಯ ಪ್ರತಿಪಾದನೆಯನ್ನು ಕಡಿಮೆ ಮಾಡಿದ್ದರು. ಆದರೀಗ ಮತ್ತೆ ಹಿಂದಿ ಭಾಷೆಯನ್ನು ನಮ್ಮ ಭಾಷೆಯನ್ನಾಗಿ ಮಾತನಾಡಬೇಕು ಎಂದು ಪದೇ ಪದೇ ಸ್ಪಷ್ಟಪಡಿಸಿದ್ದಾರೆ.

English summary
People of different states should communicate with each other in Hindi, and not English, Home Minister Amit Shah suggested on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X