ಪೀಪ್ಲಿ ಲೈವ್ ಸಹ ನಿರ್ದೇಶಕನಿಗೆ 7 ವರ್ಷ ಜೈಲುಶಿಕ್ಷೆ!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 04: ಅಮೆರಿಕ ಮೂಲದ ಸಂಶೋಧಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ಸಹನಿರ್ದೇಶಕ ಮಹಮದ್ ಫಾರೂಕಿ ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ದೆಹಲಿ ಕೋರ್ಟ್ ಗುರುವಾರ (ಆಗಸ್ಟ್ 04) ಆದೇಶ ಹೊರಡಿಸಿದೆ.

ಹೆಚ್ಚುವರಿ ಸೆಷನ್ಸ್ಜಡ್ಜ್ ಸಂಜೀವ್ ಜೈನ್ ಅವರು ಪೀಪ್ಲಿ ಲೈವ್ ಚಿತ್ರದ ಸಹನಿರ್ದೇಶಕ ಮಹಮದ್ ಫಾರೂಕಿ (44) ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ರೂಪಾಯಿಗಳ ದಂಡವನ್ನೂ ವಿಧಿಸಿದರು.

Peepli Live co-director Farooqui gets 7-year jail for raping US researcher

ಒಂದು ವೇಳೆ ದಂಡ ತೆರಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದ 35 ವರ್ಷದ ವಿದೇಶಿ ಸಂಶೋಧನಾ ವಿದ್ಯಾರ್ಥಿನಿಯನ್ನು 2015 ಮಾರ್ಚ್ 28 ರ ರಾತ್ರಿ ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪ ಫರೂಕಿ ಮೇಲಿತ್ತು.

ಜೂನ್ 19, 2015ರಂದು ಫರೂಕಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ಬಳಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದರು ಎಂಬುದು ಜುಲೈ 30ರಂದು ಸಾಬೀತಾಗಿತ್ತು.

ಈ ಕೃತ್ಯ ಎಸಗಿದ ಬಳಿಕ ನನ್ನ ಬಳಿ ಆತ ಕ್ಷಮೆ ಕೋರಿ ಹಲವಾರು ಇಮೇಲ್ ಕಳಿಸಿದ್ದ ಎಂದು ಸಂತ್ರಸ್ತ ಮಹಿಳೆ ವಿಡಿಯೋ ಸಾಕ್ಷಿ ಮೂಲಕ ಕೋರ್ಟಿಗೆ ಹೇಳಿಕೆ ನೀಡಿದ್ದರು. ಫರೂಕಿಗೆ bipolar disorder ಇದೆ ಎಂದು ಫರೂಕಿ ಪರ ವಕೀಲೆ ನಿತ್ಯಾ ರಾಮಕೃಷ್ಣನ್ ವಾದಿಸಿದ್ದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood film ‘Peepli Live’ co-director Mahmood Farooqui was sentenced to seven years imprisonment on Thursday by a Delhi court for raping a US researcher in Delhi last year.
Please Wait while comments are loading...