ರಾಜಧಾನಿ, ಶತಾಬ್ದಿಗಳಲ್ಲಿ ಆಹಾರ ತುಟ್ಟಿ

ಶತಾಬ್ದಿ, ರಾಜಧಾನಿ ಮತ್ತು ತುರಂತೊ ರೈಲುಗಳಲ್ಲಿ ಆಹಾರ ಸಾಮಾಗ್ರಿಗಳ ದರವನ್ನು ಭಾರತೀಯ ರೈಲ್ವೆ ಶೇ 2 ರಿಂದ 4 ರಷ್ಟು ಹೆಚ್ಚಿಸಿದೆ. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸುವ ಗ್ರಾಹಕರು ಸಹ ಗುರುವವಾರ ನೂತನ ದರವನ್ನು ಪಾವತಿ ಮಾಡಬೇಕಾಗುತ್ತದೆ.
ದೆಹಲಿ-ತಿರುವನಂತಪುರ ನಡುವಿನ ರಾಜಧಾನಿ ಎಕ್ಸಪ್ರೆಸ್ ಎರಡನೇ ದರ್ಜೆ ಎಸಿ ಕೋಚ್ ಪ್ರಯಾಣದರ 3980 ರೂಪಾಯಿ ಆಗಿತ್ತು. ಆದರೆ, ಗುರುವಾರ ದರ ಹೆಚ್ಚಳದಿಂದಾಗಿ 4,289 ರೂಪಾಯಿ ಆಗುತ್ತದೆ.
ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಸಸ್ಯಹಾರಿ ಮತ್ತು ಮಾಂಸಹಾರಿ ಪ್ರಯಾಣಿಕರಿಗೂ ತಟ್ಟಲಿದೆ. ಈ ರೈಲುಗಳ ಕೆಟರಿಂಗ್ ದರವನ್ನು 14 ವರ್ಷಗಳ ಬಳಿಕ ಹೆಚ್ಚಿಸಲಾಗುತ್ತಿದೆ ಎಂದು ರೈಲ್ವೆ ಸಮರ್ಥನೆ ನೀಡಿದೆ.
ದರಕ್ಕೆ ತಕ್ಕಂತೆ ಮೆನು : ಭಾರತೀಯ ರೈಲ್ವೆ ಕೆಟರಿಂಗ್ ದರವನ್ನು ಮಾತ್ರ ಹೆಚ್ಚಿಸಿಲ್ಲ. ಈ ರೈಲುಗಳಲ್ಲಿ ದೊರೆಯುತ್ತಿದ್ದ ಆಹಾರ ಪದಾರ್ಥಗಳ ಮೆನುವನ್ನು ಸಹ ಬದಲಾವಣೆ ಮಾಡಿದೆ. ಚಾಕಲೋಟ್, ಟಾಫಿ ಮತ್ತು ಜ್ಯೂಸ್ ಮೆನುವಿನಿಂದ ಮಾಯವಾಗಿವೆ.
ಈ ಮೂರು ಎಕ್ಸಪ್ರೆಸ್ ರೈಲುಗಳ ಊಟೋಪಹಾರದ ಮೆನುವಿನಲ್ಲಿ ಚಾಕೊಲೇಟ್ ಮತ್ತು ಟಾಫಿ ಹಾಗೂ ಜ್ಯೂಸ್ ಸ್ಥಾನಕ್ಕೆ ಹುರಿದ ಮೀನು ಸೇರಿಕೊಂಡಿದೆ. ಇದನ್ನು ಹೆಚ್ಚುವರಿಯಾಗಿ ದರ ಏರಿಕೆ ನಂತರ ಸೇರಿಸಲಾಗಿದೆ. (ರೈಲ್ವೆ ಆಹಾರವೂ ದುಬಾರಿ)
ಉಳಿದಂತೆ ಮೊದಲ ದರ್ಜೆಯ ಎಸಿ ಕೋಚ್‌ನ ಪ್ರಯಾಣಿಕರಿಗೆ ಪರೋಟ, ಚನ್ನಾ ಕುಲ್ಚಾ ದೊರೆಯಲಿದೆ. ಉಪಹಾರದೊಟ್ಟಿಗೆ ಒಂದು ಲೋಟ ಹಾಲು ನೀಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.












Click it and Unblock the Notifications