ಸಂಸತ್ ಅಧಿವೇಶನ ಮುಂದುವರಿಕೆ: ವಿಪಕ್ಷದ ಆಯುಧ ದೆಹಲಿ ಹಿಂಸಾಚಾರ
ನವದೆಹಲಿ, ಮಾರ್ಚ್ 01: ಸಂಸತ್ ಬಜೆಟ್ ಅಧಿವೇಶನದ ನಾಳೆಯಿಂದ ಮುಂದುವರೆಯಲಿದ್ದು, ಏಪ್ರಿಲ್ 03 ಕ್ಕೆ ಅಂತ್ಯವಾಗಲಿದೆ.
ನಾಳೆ ದೆಹಲಿ ಹಿಂಸಾಚಾರ ಪ್ರಮುಖವಾಗಿ ಚರ್ಚೆ ಆಗಲಿದ್ದು, ಗದ್ದಲ ಸೃಷ್ಠಿಯಾಗುವ ಸಾಧ್ಯತೆ ಇದೆ. ದೆಹಲಿ ಗಲಭೆ ಕುರಿತಂತೆ ಈಗಾಗಲೇ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ಆರಂಭಿಸಿದ್ದು, ಸಂಸತ್‌ನಲ್ಲಿ ನೇರ ದಾಳಿಗೆ ಇಳಿಯಲಿವೆ.
ಕಾಂಗ್ರೆಸ್, ಸಿಪಿಐ ಸೇರಿ ಹಲವು ವಿಪಕ್ಷಗಳು ದೆಹಲಿ ಹಿಂಸಾಚಾರದ ಕುರಿತು ಸರ್ಕಾರವನ್ನು ಪ್ರಶ್ನಿಸಲು ಈಗಾಗಲೇ ತಯಾರಾಗಿ ನಿಂತಿವೆ.

ಅಮಿತ್ ಶಾ ರಾಜೀನಾಮೆಗೆ ಸಂಸತ್‌ನಲ್ಲಿ ವಿಪಕ್ಷಗಳು ಒತ್ತಾಯ ಹೇರಲಿದ್ದು, ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಯೋಜನೆ ರೂಪಿಸಿವೆ.
ಬಜೆಟ್ ಅಧಿವೇಶನದ ಮುಂದುವರೆದ ಭಾಗ ಇದಾಗಿದ್ದು, ಬಜೆಟ್ ಮೇಲಿನ ಚರ್ಚೆಯು ಮುಂದುವರೆಸಲಾಗುತ್ತದೆ ಜೊತೆಗೆ ಉಳಿಕೆ ಮಸೂದೆಗಳಿಗೆ ಅಂಗೀಕಾರ ಪಡೆಯುವ ಕಾರ್ಯವೂ ಆಗಲಿದೆ. ಸಹಕಾರಿ ಬ್ಯಾಂಕ್‌ಗಳನ್ನು ಆರ್‌ಬಿಐ ಅಡಿಗೆ ತರುವ ಪ್ರಮುಕ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications