• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್‌ ವೇಳೆ 82 ವರ್ಷಗಳ ಮಾರಾಟ ದಾಖಲೆ ಮುರಿದ ಪಾರ್ಲೆ-ಜಿ!

|
Google Oneindia Kannada News

ನವ ದೆಹಲಿ, ಜೂನ್ 9: ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಭಾರತದ ಹಳೆಯ, ಜನಪ್ರಿಯ ಬಿಸ್ಕೆಟ್ ಕಂಪನಿ ಪಾರ್ಲೆ-ಜಿ ದಾಖಲೆ ಬರೆದಿದೆ. ತನ್ನ 82 ವರ್ಷಗಳ ಮಾರಾಟದ ದಾಖಲೆಯನ್ನು ಮುರಿದಿದೆ. ಈ ಬಗ್ಗೆ ಪಾರ್ಲೆ ಪ್ರಾಡಕ್ಟ್‌ನ ವಿಭಾಗಿಯ ಮುಖ್ಯಸ್ಥ ಮಯಾಂಕ್ ಶಾ ಮಾಹಿತಿ ನೀಡಿದ್ದಾರೆ.

   ಚಿರಂಜೀವಿಯನ್ನು ನೋಡಿ ಭಾವುಕರಾದ ಯಶ್ | Chiranjeevi Sarja | Yash | | Oneindia Kannada

   ಲಾಕ್‌ಡೌನ್ ವೇಳೆ ದೇಶದ ಬಹುತೇಕ ಕಂಪನಿಗಳಿಗೆ ತೊಂದರೆಯಾಗಿದೆ. ವ್ಯವಹಾರದಲ್ಲಿ ಕುಸಿತ ಕಂಡಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ, ಪಾರ್ಲೆ-ಜಿ ಯಾವುದೇ ಅಡೆ ತಡೆ ಇಲ್ಲದೆ, ತನ್ನ ವ್ಯಾಪಾರ ಮಾಡಿದೆ. ಮಾತ್ರವಲ್ಲದೆ, ಲಾಕ್‌ಡೌನ್ ಸಮಯದಲ್ಲಿಯೇ ಕಂಪನಿಯ ಗಳಿಕೆ ಹೆಚ್ಚಾಗಿದೆ.

   3 ಕೋಟಿ ಬಿಸ್ಕೆಟ್ ಪ್ಯಾಕ್ ಉಚಿತವಾಗಿ ನೀಡುವುದಾಗಿ ತಿಳಿಸಿದ ಪಾರ್ಲೆ-ಜಿ3 ಕೋಟಿ ಬಿಸ್ಕೆಟ್ ಪ್ಯಾಕ್ ಉಚಿತವಾಗಿ ನೀಡುವುದಾಗಿ ತಿಳಿಸಿದ ಪಾರ್ಲೆ-ಜಿ

   ಭಾರತದಲ್ಲಿ ಎಷ್ಟೇ ಬಿಸ್ಕೆಟ್ ಕಂಪನಿಗಳು ಇದ್ದರೂ, ಪಾರ್ಲೆ-ಜಿ ಭಾವನಾತ್ಮಕವಾಗಿ ಅನೇಕರಿಗೆ ಹತ್ತಿರವಾಗಿದೆ. ಲಾಕ್‌ಡೌನ್ ಸಮಯದಲ್ಲಿಯೂ ಪಾರ್ಲೆ-ಜಿ ಎಷ್ಟೋ ಜನರ ಹೊಟ್ಟೆ ತುಂಬಿಸಿದೆ. ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದು, ಹೊಸ ದಾಖಲೆಗೆ ಸಾಕ್ಷಿಯಾಗಿದೆ.

   ಮಾರ್ಕೆಟ್ ಷೇರು ಶೇ. 5ರಷ್ಟು ಹೆಚ್ಚು

   ಮಾರ್ಕೆಟ್ ಷೇರು ಶೇ. 5ರಷ್ಟು ಹೆಚ್ಚು

   ಪಾರ್ಲೆ-ಜಿ ಬಿಸ್ಕೆಟ್ ದಾಖಲೆಯ ಮಾರಾಟ ಬಗ್ಗೆ ಪಾರ್ಲೆ ಪ್ರಾಡಕ್ಟ್‌ನ ವಿಭಾಗಿಯ ಮುಖ್ಯಸ್ಥ ಮಯಾಂಕ್ ಶಾ ಮಾತನಾಡಿದ್ದಾರೆ. ''ನಮ್ಮ ಒಟ್ಟಾರೆ ಮಾರುಕಟ್ಟೆ ಷೇರ್‌ ಸುಮಾರು 5% ರಷ್ಟು ಹೆಚ್ಚಾಗಿದೆ. ಇದು 80-90% ರಷ್ಟು ಪಾರ್ಲೆ-ಜಿ ಮಾರಾಟದಿಂದ ಬಂದಿರುವುದು ಅಭೂತಪೂರ್ವ ಎಂದು ಮಯಾಂಕ್ ಶಾ ತಿಳಿಸಿದ್ದಾರೆ. ಆದರೆ, ಅವರು ಮಾರಾಟದ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ.

   82 ವರ್ಷಗಳ ದಾಖಲೆ ಉಡೀಸ್

   82 ವರ್ಷಗಳ ದಾಖಲೆ ಉಡೀಸ್

   ಪಾರ್ಲೆ-ಜಿ ಬಿಸ್ಕೆಟ್ 1929ರಲ್ಲಿ ತಯಾರಿಕೆ ಶುರು ಆಗಿದ್ದರೂ, ಅದು 1938 ರಿಂದ ಜನಪ್ರಿಯ ಪಡೆದುಕೊಂಡಿದೆ. ಅಲ್ಲಿಂದ ಇಲ್ಲಿಯವರೆಗೆ ಮಾರ್ಕೆಟ್‌ನಲ್ಲಿ ಅದು ಉಳಿಸಿಕೊಂಡಿದೆ. ಲಾಕ್‌ಡೌನ್‌ ಇದ್ದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಅತಿ ಹೆಚ್ಚು ಬಿಸ್ಕೆಟ್‌ಗಳು ಮಾರಾಟವಾಗಿದೆ. ವಲಸೆ ಕಾರ್ಮಿಕರು ಸೇರಿದಂತೆ ಕಾಲು ನಡಿಗೆಯಲ್ಲಿ ಊರು ಸೇರಿದ ಹಲವರು ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ.

   5 ರೂಪಾಯಿ ಬಿಸ್ಕೆಟ್

   5 ರೂಪಾಯಿ ಬಿಸ್ಕೆಟ್

   ''ಲಾಕ್ ಡೌನ್ ಸಮಯದಲ್ಲಿ, ಪಾರ್ಲೆ-ಜಿ ಅನೇಕರಿಗೆ ಆಹಾರವಾಯಿತು. ಇತರರಿಗೆ ಅದು ಏಕೈಕ ಆಹಾರವಾಗಿತ್ತು. ಇದು ಸಾಮಾನ್ಯ ಮನುಷ್ಯನ ಬಿಸ್ಕೆಟ್. ಬ್ರೆಡ್ ಪಡೆಯಲು ಸಾಧ್ಯವಾಗದ ಜನರು - ಪಾರ್ಲೆ-ಜಿ ಖರೀದಿಸಿದ್ದಾರೆ.'' ಎಂದು ಮಯಾಂಕ್ ಶಾ ಹೇಳಿದ್ದಾರೆ. ಲಾಕ್‌ ಡೌನ್‌ನಲ್ಲಿ ಹಣಕಾಸಿನ ಸಮಸ್ಯೆ ಇದ್ದ ಅನೇಕರು 5 ರೂಪಾಯಿ ಕೊಟ್ಟು ಪಾರ್ಲೆ-ಜಿ ಬಿಸ್ಕೆಟ್ ಖರೀದಿ ಮಾಡಿದ್ದಾರೆ.

   3 ಕೋಟಿ ಬಿಸ್ಕೆಟ್ ದಾನ ನೀಡಿದ್ದ ಪಾರ್ಲೆ-ಜಿ

   3 ಕೋಟಿ ಬಿಸ್ಕೆಟ್ ದಾನ ನೀಡಿದ್ದ ಪಾರ್ಲೆ-ಜಿ

   ಕೊರೊನಾ ವೈರಸ್‌ ಸಂಕಷ್ಟದ ಸಮಯದಲ್ಲಿ ಪಾರ್ಲೆ-ಜಿ ಕಂಪನಿ 3 ಕೋಟಿ ಬಿಸ್ಕೆಟ್ ಪ್ಯಾಕ್ ಉಚಿತವಾಗಿ ನೀಡಿತ್ತು. ಅಲ್ಲದೆ, ಅನೇಕರು ತಾವು ಬಿಸ್ಕೆಟ್ ಖರೀದಿ ಮಾಡಿ ಹಸಿವಿನಲ್ಲಿ ಇದ್ದ ಜನರಿಗೆ ನೀಡಿದ್ದರು. ಲಾಕ್‌ಡೌನ್ ವೇಳೆ ಕಡಿಮೆ ಬೆಲೆ ಸಿಗುವ ಆಹಾರ ಪದಾರ್ಥಗಳನ್ನು ಜನರು ಆಯ್ಕೆ ಮಾಡುತ್ತಿದ್ದರು, ಹೆಚ್ಚಾಗಿ ಜನರ ಪಾರ್ಲೆ-ಜಿ ಖರೀದಿ ಮಾಡಿದ್ದಾರೆ.

   ಪಾರ್ಲೆ-ಜಿ ಬಿಟ್ಟರೆ ಬ್ರಿಟಾನಿಯಾ

   ಪಾರ್ಲೆ-ಜಿ ಬಿಟ್ಟರೆ ಬ್ರಿಟಾನಿಯಾ

   ಪಾರ್ಲೆ-ಜಿ ನಂತರ ಬ್ರಿಟಾನಿಯಾ ಹೆಚ್ಚು ಬಿಸ್ಕೆಟ್‌ಗಳು ಮಾರಾಟವಾಗಿವೆ. ಬ್ರಿಟಾನಿಯಾದ ಗುಡ್‌-ಡೆ, ಟೈಗರ್, ಮಿಲ್ಕ್ ಬಿಸ್ಕೆಟ್, ಬಾರ್ಬರ್ನ್ ಹಾಗೂ ಮಾರಿ ಬಿಸ್ಕೆಟ್‌ಗಳನ್ನು ಹೆಚ್ಚು ಮಂದಿ ಖರೀದಿ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಪಾರ್ಲೆ-ಜಿಗೆ ಬೇಡಿಕೆ ಹೆಚ್ಚಾಗಿದ್ದು, ಕಂಪನಿ ಬೇಡಿಕೆಗೆ ಅದಕ್ಕೆ ತಕ್ಕ ಹಾಗೆ ಪೂರೈಕೆ ಮಾಡಿದೆ. ಚಿಲ್ಲರೆ ಅಂಗಡಿಗಳಲ್ಲಿ ಎಂದಿನಂತೆ ಬಿಸ್ಕೆಟ್‌ಗಳು ಸಿಗುವ ಹಾಗೆ ನೋಡಿಕೊಂಡಿದೆ.

   English summary
   82 year old ParleG created a new record records in selling during lockdown lockdown period. April & May have been their best months in over eight decades.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X