ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ಸಂಚುಕೋರನನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ ಪಾಕಿಸ್ತಾನ

|
Google Oneindia Kannada News

ನವದೆಹಲಿ, ಫೆಬ್ರವರಿ 26: ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದಿಂದ ದಿನೇ ದಿನೇ ಒತ್ತಡ ಹೆಚ್ಚುತ್ತಿರುವುದುರಿಂದ ಪಾಕಿಸ್ತಾನ ತಾನು ನೆಲೆ ನೀಡಿದ ಭಯೋತ್ಪಾದಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಕೆಲಸ ಮಾಡುತ್ತಿದೆ.

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯ ಸಂಚುಕೋರ, ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಪಾಕಿಸ್ತಾನ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.

ಭಾರತ ಯುದ್ಧ ಸಾರಿದರೆ ಎದುರಿಸಲು ನಾವು ಸಿದ್ಧ: ಪಾಕ್ ಸೇನೆಭಾರತ ಯುದ್ಧ ಸಾರಿದರೆ ಎದುರಿಸಲು ನಾವು ಸಿದ್ಧ: ಪಾಕ್ ಸೇನೆ

ಅಜರ್ ನನ್ನು ಫೆಬ್ರವರಿ 17 ಮತ್ತು 18 ರಂದು ರಾವಲ್ಪಿಂಡಿಯಿಂದ ಕೊತ್ಗನಿ ಎಂಬಲ್ಲಿಗೆ ರವಾನೆ ಮಾಡಲಾಗಿದೆ. ತನಗೂ ಪುಲ್ವಾಮಾ ದಾಳಿಗೂ ಸಂಬಂಧವೇ ಇಲ್ಲ ಎನ್ನುವ ಪಾಕಿಸ್ತಾನ ಆ ದಾಳಿಗೆ ಕಾರಣನಾದವನ್ನು ರಕ್ಷಿಸುವ ಕೆಲಸ ಮಾಡುತ್ತಲೇ ಇದೆ.

Pakistan shifts Masood Azhar to safe zone: Indian intelligence sources

ಅಷ್ಟೇ ಅಲ್ಲ, ಅಜರ್ ನನ್ನು ಬೇರೆಡೆಗೆ ಸ್ಥಳಾಂತರಿಸಿದ್ದಲ್ಲದೆ, ಆತನಿಗೆ ಬಿಗಿ ಬಂದೋಬಸ್ತ್ ಸಹ ನೀಡಿದೆ ಪಾಕಿಸ್ತಾನ!

ಉಗ್ರ ಚಟುವಟಿಕೆಗೆ ಹೊಸ ತಂತ್ರ, ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿಉಗ್ರ ಚಟುವಟಿಕೆಗೆ ಹೊಸ ತಂತ್ರ, ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ

ಕಳೆದ ವಾರವಷ್ಟೇ 2008 ರ ಮುಂಬೈ ಸ್ಫೋಟದ ಸಂಚುಕೋರ್ ಹಫೀಜ್ ಸಯ್ಯದ್ ನ ಎರಡು ಉಗ್ರ ಸಂಘಟನೆಯನ್ನು ಪಾಕಿಸ್ತಾನ ನಿಷೇಧಿಸುವ ಮೂಲಕ ವಿಶ್ವ ಮಟ್ಟದಲ್ಲಿ ತಾನು ಭಯೋತ್ಪಾದನೆಯ ವಿರಫಧಿ ಎಂಬುದನ್ನು ತೋರಿಸಿಕೊಳ್ಳಲು ಪ್ರಯತ್ನಿಸಿಸತ್ತು. ಆದರೆ ಪಾಕಿಸ್ತಾನದ ನಡೆಯನ್ನು ಭಾರತ ಕಪಟ ನಾಟಕ ಎಂದು ಕರೆದಿತ್ತು.

ಫೆಬ್ರವರಿ 14 ರಂದು ಸಿಆರ್ ಪಿಎಫ್ ಸಿಬ್ಬಂದಿಯಿಂದ ವಾಹನದ ಮೇಲೆ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ದಾರ್ ಎಂಬಾತ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದರು. ಈ ಸ್ಫೋಟದ ಹೊಣೆಯನ್ನು ಜೈಷ್ ಹೊತ್ತುಕೊಂಡಿದ್ದರೂ, ಪಾಕಿಸ್ತಾನ ಅದನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

English summary
Indian Intelligence sources said, Pakistan has shifted Jaish chief Masood Azhar to safe zone. Who was responsible for Feb 14 Pulwama attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X