ಶಿಷ್ಯ ಕೇಜ್ರಿವಾಲ್ ಗೆ ಬಂದಿರುವ ಸ್ಥಿತಿ ಕಂಡು ವ್ಯಥೆಪಟ್ಟ ಅಣ್ಣಾ
ಶಿಷ್ಯ ಅರವಿಂದ್ ಕೇಜ್ರಿವಾಲ್ ಅವರ ಮೇಲಿನ ಆರೋಪಗಳು, ಭ್ರಷ್ಟಾಚಾರದ ಕೂಪದಲ್ಲಿರುವ ಎಎಪಿ, ಅಧಿಕಾರ ಲಾಲಸೆಯಿಂದ ಉಂಟಾಗಿರುವ ಅರಾಜಕತೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅನುಕಂಪ ವ್ಯಕ್ತಪಡಿಸಿದ್ದಾರೆ.
ರಾಳೆಗಾಂವ್ ಸಿದ್ದಿ(ಮಹಾರಾಷ್ಟ್ರ), ಮೇ 08: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ 2 ಕೋಟಿ ರು ಲಂಚ ಸ್ವೀಕಾರ ಆರೋಪ ಕೇಳಿ ಬಂದಿರುವುದಕ್ಕೆ ಕೇಜ್ರಿವಾಲ್ ಅವರ ಗುರು, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ವ್ಯಥೆಪಟ್ಟಿದ್ದಾರೆ.
ಕೇಜ್ರಿವಾಲ್ ಅವರು ಸಚಿವ ಸತ್ಯೇಂದ್ರ ಜೈನ್‌ರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಸಂಪುಟದಿಂದ ವಜಾಗೊಂಡ ಕಪಿಲ್ ಮಿಶ್ರಾ ಅವರು ಆರೋಪಿಸಿದ್ದು, ಈ ಬಗ್ಗೆ ತನಿಖೆ ಆರಂಭಗೊಂಡಿದೆ.[ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?]

ತಮ್ಮ ಸ್ವಗ್ರಾಮ ರಾಳೆಗಾಂವ್ ಸಿದ್ದಿಯಲ್ಲಿ ಮಾತನಾಡಿ, ಕೇಜ್ರಿವಾಲ್ ಲಂಚ ಪಡೆದಿದ್ದಾರೆ ಎಂಬ ಆರೋಪ ತುಂಬಾ ಬೇಸರ ತರಿಸಿದೆ ಹಾಗೂ ನನ್ನನ್ನು ಮೂಕನಾಗಿಸಿದೆ. ನಾನು 40 ವರ್ಷದಿಂದ ಭ್ರಷ್ಟಾಚಾರ ಬಗ್ಗೆ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಕೇಜ್ರಿವಾಲ್ ಕೂಡ ಭ್ರಷ್ಟಾಚಾರ ವಿರುದ್ಧ ನನ್ನ ಜೊತೆ ಹೋರಾಟ ಮಾಡಿದ್ದಾರೆ.
'ಇಂಡಿಯಾ ಅಗೈನೆಸ್ಟ್ ಕರಪ್ಶನ್' ಹೋರಾಟವೇ ಕೇಜ್ರಿವಾಲ್‌ರನ್ನು ದೆಹಲಿ ಸಿಎಂ ಹುದ್ದೆಗೇರಿಸಿದೆ. ಆದರೆ, ಇದೀಗ ಕೇಜ್ರಿವಾಲ್ ವಿರುದ್ಧವೇ ಲಂಚ ಆರೋಪ ಕೇಳಿಬಂದಿದ್ದು, ನನಗೆ ಬೇಸರ ತರಿಸಿದೆ ಎಂದು ಹೇಳಿದರು.[ಜ್ಯೋತಿಷ್ಯ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾತಕ ಏನು ಹೇಳುತ್ತದೆ?]
ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಮಾಡಿರುವ ಆರೋಪದ ಕುರಿತಂತೆ ನಾನು ಹೆಚ್ಚಿನ ಪರಿಶೀಲನೆ ನಡೆಸುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.












Click it and Unblock the Notifications