ಪದ್ಮನಾಭ ದೇಗುಲ: ಸುಪ್ರೀಂಕೋರ್ಟ್ ಖಡಕ್ ನಿರ್ಧಾರ
ನವದೆಹಲಿ, ಏ. 24: ಕೇರಳ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಲ್ಲಿ ರಾಜ ಕುಟುಂಬ ಚಿನ್ನ ಕದಿಯಲಾಗುತ್ತಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಖಡಕ್ ನಿರ್ಧಾರ ತೆಗೆದುಕೊಂಡಿದೆ.
ದೇವಸ್ಥಾನದ ಸಂಪತ್ತನ್ನು ರಾಜ ಕುಟುಂಬ (Travancore royal family) ಕೊಳ್ಳೆ ಹೊಡೆಯುತ್ತಿದೆ. ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಅವರು ಸಲ್ಲಿಸಿದ್ದ ವಸ್ತುಸ್ಥಿತಿ ವರದಿಗೆ ಸುಪ್ರೀಂ ಮನ್ನಣೆ ನೀಡಿರುವ ಕೋರ್ಟ್ ಸಿಎಜಿ ವಿನೋದ್ ರಾಯ್ ನೇತೃತ್ವದಲ್ಲಿ ಆಡಿಟ್ ನಡೆಯಲಿ ಎಂದು ಆದೇಶಿಸಿದೆ.
ಗೋಪಾಲ ಸುಬ್ರಮಣ್ಯಂ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ವಿನೋದ್ ರಾಯ್ ನೇತೃತ್ವದಲ್ಲಿ ಡೀಟೇಲ್ಡ್ ಆಡಿಟ್ ನಡೆಯಲಿ ಎಂದು ಆದೇಶಿಸಿದೆ. ಈ ಮಧ್ಯೆ, ಗೋಪಾಲ ಸುಬ್ರಮಣ್ಯಂ ಸಲ್ಲಿಸಿರುವ ವರದಿ ಸುಳ್ಳೇ ಸುಳ್ಳು. ಅಂಥಾದ್ದೇನೂ ಇಲ್ಲಿ ನಡೆಯುತ್ತಿಲ್ಲ. ಅಸಲಿಗೆ ಅವರು ಔಪಚಾರಿಕವಾಗಿಯಾದರೂ ನಮ್ಮನ್ನು ಒಮ್ಮೆಯೂ ಸಂಪರ್ಕಿಸಿಲ್ಲ. ಅವರ ವರದಿ ಏಕಪಕ್ಷೀಯವಾಗಿದೆ ಎಂದೆಲ್ಲಾ ರಾಜಮನೆತನದ ಮಾರ್ತಾಂಡ ಸ್ವಾಮಿಗಳು ಕೋರ್ಟಿಗೆ ಅಲವತ್ತುಕೊಂಡಿದ್ದರು.
ಆದರೆ ಕೋರ್ಟ್ ಅವರ ಮನವಿಗೆ ಸೊಪ್ಪುಹಾಕದೆ ದೇಗುಲದ ಸಂಪತ್ತು ರಕ್ಷಣೆಯಲ್ಲಿ ಲೋಪವಾಗುತ್ತಿರುವುದು ಗಂಭೀರ ವಿಷಯ. ಹಾಗಾಗಿ ಡೀಟೇಲ್ಡ್ ಆಡಿಟ್ ನಡೆಯಲಿ ಎಂದು ಸ್ಪಷ್ಟವಾಗಿ ಆದೇಶಿಸಿದೆ. (ಪದ್ಮನಾಭಸ್ವಾಮಿ ದೇಗುಲದಲ್ಲಿ ಇನ್ನೂ 2 ಕೊಠಡಿ ನಿಧಿ)