• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಸಿಬಿಐ ವಶದಲ್ಲಿದ್ದರೂ ಕೇಂದ್ರದ ವಿರುದ್ಧ ಚಿದಂಬರಂ ವ್ಯಂಗ್ಯದ ಬಾಣ

|

ನವದೆಹಲಿ, ಸೆಪ್ಟೆಂಬರ್ 03: ಹಲವು ದಿನಗಳಿಂದ ಸಿಬಿಐ ವಶದಲ್ಲಿದ್ದರೂ ಪಿ.ಚಿದಂಬರಂ ಅವರ ವ್ಯಂಗ್ಯದ, ಹೋರಾಟದ ಮನೋಭಾವ ಕಡಿಮೆ ಆಗಿಲ್ಲ.

ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಪಿ.ಚಿದಂಬರಂ ನ್ಯಾಯಾಲಯದಿಂದ ಹೊರಗ್ಗೆ ಬರುತ್ತಾ ಮಾಧ್ಯಮದವರ ಮುಂದೆ ಆಡಿರುವ ಮಾತು ಭಾರಿ ವೈರಲ್ ಆಗಿದೆ. ಅವರು ಹೇಳಿದ್ದು ಇಷ್ಟೆ '5%'.

ಚಿದಂಬರಂ ವಿಚಾರಣೆ ಮುಗಿಸಿದ ಸಿಬಿಐ: ಮುಂದೇನು?

ನ್ಯಾಯಾಲಯದ ಕೊಠಡಿಯಿಂದ ಹೊರ ಬಂದ ಪಿ.ಚಿದಂಬರಂ ಅವರನ್ನು ಮಾಧ್ಯಮದವರೊಬ್ಬರು, 'ಸರ್ ಇಷ್ಟು ದಿನದಿಂದ ಸಿಬಿಐ ವಶದಲ್ಲಿದ್ದೀರಿ, ಇದರ ಬಗ್ಗೆ ಏನಾದರೂ ಹೇಳಿ' ಎಂದು ಕೇಳಿದ್ದಾರೆ.

'ಇದಕ್ಕೆ ಉತ್ತರಿಸಿದ ಪಿ.ಚಿದಂಬರಂ 'ಐದು ಪರ್ಸೆಂಟ್' ಎಂದು ಐದು ಬೆರಳು ತೋರಿಸಿದ್ದಾರೆ. ಅರ್ಥವಾಗದ ವರದಿಗಾರ, 'ಹಾಗೆಂದರೇನು ಸರ್?' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪಿ.ಚಿದಂಬರಂ ಅವರು 'ಐದು ಪರ್ಸೆಂಟ್ ಏನೆಂದು ಗೊತ್ತಿಲ್ಲವೇ?' ಎಂದು ನಕ್ಕಿದ್ದಾರೆ. ಆಗ ವರದಿಗಾರರು 'ಜಿಡಿಪಿ ಬಗ್ಗೆ ಹೇಳುತ್ತಿದ್ದೀರಾ" ಎಂದು ಪ್ರಶ್ನೆ ಮಾಡಿದ್ದಾರೆ. ಹೌದು ಎನ್ನುವಂತೆ ನಕ್ಕು ಚಿದಂಬರಂ ಮುಂದೆ ಹೋಗಿದ್ದಾರೆ.

ಚಿದಂಬರಂ ಐದು ಪರ್ಸೆಂಟ್ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರ ಮಗ ಕಾರ್ತಿ ಚಿದಂಬರಂ, ಎಐಸಿಸಿ ಸೇರಿದಂತೆ ಹಲವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಸುಪ್ರೀಂನಿಂದ ರಿಲೀಫ್

ಭಾರತದ ಜಿಡಿಪಿಯು 5% ಗೆ ಕುಸಿದಿದ್ದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಪಿ.ಚಿದಂಬರಂ ಅವರು ಈ ಮುಂಚೆ ಹಲವು ಬಾರಿ ಕೇಂದ್ರದ ಆರ್ಥಿಕ ನೀತಿಗಳನ್ನು ಕಟುವಾಗಿ ಖಂಡಿಸಿದ್ದರು. ಈಗ ಸಿಬಿಐ ವಶದಲ್ಲಿರುವ ಕಾರಣ ಮೃದುವಾಗಿರಬಹುದು ಎಂದು ನಿರೀಕ್ಷಿಸಿದ್ದ ಬಿಜೆಪಿಗೆ ಆಘಾತ ತಂದಿರುವ ಅವರು, ವಶದಲ್ಲಿದ್ದು, ಜೈಲು ಸೇರುವ ಭಯದ ನಡುವೆಯೂ ಕೇಂದ್ರವನ್ನು ಟೀಕಿಸುವುದನ್ನು ನಿಲ್ಲಿಸಿಲ್ಲ.

ಆಗಸ್ಟ್ 21 ರಂದು ಪಿ.ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಪಡೆದಿತ್ತು. ಅಂದಿನಿಂದಲೂ ಅವರು ಸಿಬಿಐ ವಶದಲ್ಲಿಯೇ ಇದ್ದಾರೆ. ಇಂದಿನ ವಿಡಿಯೋದಲ್ಲಿ ಚಿದಂಬರಂ ಅವರ ಮುಖದಲ್ಲಿ ಯಾವುದೇ ಬಳಲಿಕೆಯಾಗಲಿ, ದುಗುಡವಾಗಲಿ, ಹತಾಶೆಯಾಗಲಿ ಕಾಣಲಿಲ್ಲ, ಬದಲಿಗೆ ಅವರು ಎಂದಿನಂತೆ ಗೆಲುವಾಗಿಯೇ ಇದ್ದಾರೆ.

ಸೆಪ್ಟೆಂಬರ್ 5 ರವರೆಗೆ ಚಿದಂಬರಂ ಅವರು ಸಿಬಿಐ ವಶದಲ್ಲಿ ಇರಲಿದ್ದು, ಆ ನಂತರ ಅವರಿಗೆ ಜಾಮೀನು ನೀಡುವುದೊ ಅಥವಾ ತಿಹಾರ್ ಜೈಲಿಗೆ ನ್ಯಾಯಾಂಗ ಬಂಧನದ ಮೇಲೆ ಕಳುಹಿಸುವುದೋ ನೋಡಬೇಕಿದೆ.

English summary
P Chidambaram who is in CBI costody talks to media for just for few seconds. Video of Chidambaram talking to media went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X