ಕೇಂದ್ರದ ವಿರುದ್ಧ ವಿರೋಧ ಪಕ್ಷಗಳಿಂದ ಇಂದು ಸಂಸತ್ತಿನೆದುರು ಪ್ರತಿಭಟನೆ
ನವದೆಹಲಿ, ಏಪ್ರಿಲ್ 05: ಬ್ಯಾಂಕಿಂಗ್ ಹಗರಣ, ಎಸ್ ಸಿ ಎಸ್ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ, ಪ್ರಶ್ನೆಪತ್ರಿಕೆ ಸೋರಿಕೆ ಮುಂತಾದ ವಿಷಯಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸುಮಾರು 15 ಕ್ಕೂ ಹೆಚ್ಚು ವಿರೋಧ ಪಕ್ಷಗಳು ನಿರ್ಧರಿಸಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಈ ಸಂಬಂಧ ಹಲವು ದಿನಗಳಿಂದ ಸಂಸತ್ತಿನ ಉಭಯ ಸದನಗಳಿಗೂ ವಿರೋಧ ಪಕ್ಷಗಳು ಅಡ್ಡಿ ಉಂಟುಮಾಡುತ್ತಿದ್ದವು. ಆದರೆ ಇಂದು(ಏ.5) ಸಂಸತ್ತಿನೆದುರು ಕಾಂಗ್ರೆಸ್ ನೇತೃತ್ವದಲ್ಲಿ 15 ಕ್ಕೂ ಹೆಚ್ಚು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಲಿವೆ.

ಕಳೆದ ಹಲವು ದಿನಗಳಿಂದ ಕಾವೇರಿ ಜಲ ನಿರ್ವಹಣ ಮಂಡಳಿ ನಿರ್ಮಿಸವಂತೆ ಒತ್ತಾಯಿಸಿ ಎಐಎಡಿಎಂಕೆ ಸಂಸದರು ಮತ್ತು ಆಂಧದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಟಿಡಿಪಿ ಸಂಸದರು ಸಂಸತ್ತಿನೆದುರು ನಿರಂತರ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications