10 ದಿನಗಳಲ್ಲಿ 1000 ಕೋಟಿ ಕಳ್ಕೊಂಡ 'ಸಂತ'
ಚಂಡೀಗಢ, ನ.28:ಸ್ವಯಂಘೋಷಿತ ದೇವಮಾನವ ಸಂತ ರಾಮ್ ಪಾಲ್ ಕಳೆದ 10 ದಿನಗಳಲ್ಲಿ 1000 ಸಾವಿರ ಕೋಟಿ ರು ಕಳೆದುಕೊಂಡಿರುವ ಅಂದಾಜು ಸಿಕ್ಕಿದೆ. ವಿವಾದಿತ ಸ್ವಾಮೀಜಿ ರಾಂಪಾಲ್ ಬಂಧನಕ್ಕೆ ಸುಮಾರು 26 ಕೋಟಿ ರು ಖರ್ಚಾಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ. ಜಯಪೌಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿವಾದಿತ ಗುರು ರಾಂಪಾಲ್ ರನ್ನು ಬಿಗಿ ಬಂದೋ ಬಸ್ತ್ ನೊಂದಿಗೆ ಹಾಜರುಪಡಿಸಲಾಯಿತು. ರಾಂಪಾಲ್ ಜೊತೆ ಸಹ ಆರೋಪಿಗಳಾದ ರಾಮ್ ಪಾಲ್ ಧಾಕಾ ಮತ್ತು ಒ.ಪಿ. ಹೂಡಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು

ರಾಂಪಾಲ್‌ರ ಬಂಧನಕ್ಕೂ ಮುನ್ನ ಹರಿಯಾಣದ ಹಿಸ್ಸಾರ್‌ನ ಸತ್‌ಲೋಕ್ ಆಶ್ರಮದ ಮುಂದೆ ಭಾರಿ ಪ್ರತಿಭಟನೆ ನಡೆದಿತ್ತು. ಬಳಿಕ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿದ್ದು, ಪ್ರತಿಭಟನಾ ನಿರತರನ್ನು ಸ್ಥಳಾಂತರ ಹಾಗೂ ಸಂತ ರಾಂಪಾಲ್ ಪತ್ತೆಗೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ಹರಿಯಾಣ ಡಿಜಿಪಿ ಎಸ್.ಎನ್ ವಶಿಷ್ಠ ಅವರು ಕೋರ್ಟಿಗೆ ತಿಳಿಸಿದ್ದಾರೆ.
ಸುಮಾರು 42ಕ್ಕೂ ಅಧಿಕ ಕೋರ್ಟ್ ಸಮನ್ಸ್ ಗೆ ಸೊಪ್ಪು ಹಾಕದ ರಾಂಪಾಲ್ ರನ್ನು ನ.18ರಂದು ಬಂಧಿಸಲು ಯತ್ನಿಸಿದ ಪೊಲೀಸರನ್ನು ಸಾವಿರಾರು ಮಂದಿ ರಾಂಪಾಲ್ ಭಕ್ತರು ಅಡ್ಡಗಟ್ಟಿದ್ದರು. ಈ ಸಮಯದಲ್ಲಿ ಹಿಂಸಾಚಾರ ನಡೆದಿತ್ತು.ಐವರು ಮಹಿಳೆಯರು, ಒಂದು ಮಗು ಸಾವು ಹಾಗೂ 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 907 ಜನರನ್ನು ಇದುವರೆವಿಗೂ ಪೊಲೀಸರು ಬಂಧಿಸಿದ್ದಾರೆ.
ಆಶ್ರಮದಲ್ಲಿ ಹಲವಾರು ಮಂದಿಯನ್ನು ಅಕ್ರಮವಾಗಿ ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿರುವ ಪ್ರಕರಣ ಬಯಲಿಗೆ ಬಂದಿತ್ತು. ನಕ್ಸಲರ ಸಂಪರ್ಕ ಹೊಂದಿದ್ದ ರಾಂಪಾಲ್ ಅವರ ಆಶ್ರಮದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.(ಪಿಟಿಐ)
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications