ಬ್ರಾಹ್ಮಣರಿಗಷ್ಟೇ ಹಿಂದುತ್ವ ಗೊತ್ತು ಎಂದ ಕಾಂಗ್ರೆಸ್ ಮುಖಂಡ!
Recommended Video

ನವದೆಹಲಿ, ನವೆಂಬರ್ 23: "ಕೇವಲ ಬ್ರಾಹ್ಮಣರಿಗಷ್ಟೇ ಹಿಂದುತ್ವ ತಿಳಿದಿರುವುದು. ಆದರೆ ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಚಿವೆ ಉಮಾ ಭಾರತಿಯವರೆಲ್ಲ ಹಿಂದುತ್ವದ ಬಗ್ಗೆ ಹೇಗೆ ಮಾತನಾಡುತ್ತಾರೆ?" ಎಂದು ಕಾಂಗ್ರೆಸ್ ಮುಖಂಡ ಸಿಪಿ ಜೋಷಿಯವರು ಕೇಳಿದ ಪ್ರಶ್ನೆ ಇದೀಗ ವಿವಾದ ಸೃಷ್ಟಿಸಿದೆ.
ಹಿಂದು ಧರ್ಮದ ಬಗ್ಗೆ ಯಾರಾದರೂ ಮಾತನಾಡಬಲ್ಲವರಾದರೆ ಅವರು ಪಂಡಿತರು, ಬ್ರಾಹ್ಮಣರು ಮತ್ತು ಬುದ್ಧಿವಂತರು ಮಾತ್ರ. ಆದರೆ ಉಮಾ ಭಾರತಿ ಲೋದಿ ಸಮುದಾಯಕ್ಕೆ ಸೇರಿದವರು, ಪ್ರಧಾನಿ ನರೇಂದ್ರ ಮೋದಿ, ಸಾದ್ವೀ ಅವರೂ ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದವರು. ಆದರೂ ಏಕೆ ಹಿಂತುತ್ವದ ಬಗ್ಗೆ ಮಾತನಾಡುತ್ತಾರೆ? ಕಳೆದ 50 ವರ್ಷಗಳಿಂದ ಬ್ರಾಹ್ಮಣರು ಬುದ್ಧಿ ಕಳೆದುಕೊಂಡಿದ್ದಾರೆ" ಎಂದು ಜೋಷಿ ಹೇಳಿದ್ದರು.
'ಕಾಂಗ್ರೆಸ್ ಪ್ರಧಾನಿಗೆ ಮಾತ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಸಾಧ್ಯವಿರುವುದು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಬಾಬ್ರಿ ಮಸೀದಿಯ ಆವರಣದಲ್ಲಿ ಬಾಗಿಲನ್ನು ತೆರೆದು, ಪೂಜೆಗೆ ಅನುವು ಮಾಡಿಕೊಟ್ಟಿದ್ದು. ಕಾಂಗ್ರೆಸ್ ಪ್ರಧಾನಿ ಮಾತ್ರವೇ ರಾಮಮಂದಿರ ಕಟ್ಟುವುದಕ್ಕೆ ಸಾಧ್ಯ' ಎಂದು ಇತ್ತೀಚೆಗಷ್ಟೇ ಅವರು ಹೇಳಿಕೆ ನೀಡಿದ್ದರು.

ಹೇಳಿಕೆ ವಿರೋಧಿಸಿದ ರಾಹುಲ್ ಗಾಂಧಿ
ಪಿ ಸಿ ಜೋಶಿ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಇಂಥ ಹೇಳಿಕೆಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸೋಲ್ಲ. ಇವು ಸಮಾಜದ ಒಂದು ನಿರ್ದಿಷ್ಟ ವರ್ಗಕ್ಕೆ ನೋವುಂಟು ಮಾಡುತ್ತದೆ. ದಯವಿಟ್ಟು ಇಂಥ ಹೇಳಿಕೆಗಳನ್ನು ನೀಡಬೇಡಿ. ಜೋಷಿಯವರಿಗೆ ತಮ್ಮ ಹೇಳಿಕೆಯ ತಪ್ಪಿನ ಬಗ್ಗೆ ಅರಿವಾಗುತ್ತದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಅವರ ಹೇಳಿಕೆ ವ್ಯತಿರಿಕ್ತವಾಗಿದೆ' ಎಂದರು.












Click it and Unblock the Notifications