• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತ್ಮಸಾಕ್ಷಿಯಂತೆ ದ್ರೌಪದಿ ಮುರ್ಮು ಪರ ಮತ ಚಲಾಯಿಸಿದೆ: ಕಾಂಗ್ರೆಸ್ ಶಾಸಕ

|
Google Oneindia Kannada News

ನವದೆಹಲಿ, ಜುಲೈ18: ಪಕ್ಷದ ನಿರ್ಧಾರವನ್ನು ಧಿಕ್ಕರಿಸಿ ಕಟಕ್-ಬಾರಾಬತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಅವರು ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ.

"ನಾನು ನನ್ನ ಆತ್ಮಸಾಕ್ಷಿಯ ಆದೇಶದಂತೆ ಮತ ಚಲಾಯಿಸಿದ್ದೇನೆ ಮತ್ತು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಣ್ಣಿನ ಮಗಳನ್ನು ಆಯ್ಕೆ ಮಾಡಿದ್ದೇನೆ" ಎಂದು ಮೊಕ್ವಿಮ್ ಅವರು ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಇವಿಎಂ ಏಕೆ ಬಳಸಲ್ಲ?ರಾಷ್ಟ್ರಪತಿ ಚುನಾವಣೆಯಲ್ಲಿ ಇವಿಎಂ ಏಕೆ ಬಳಸಲ್ಲ?

ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ವಿಪ್ ಇಲ್ಲದ ಕಾರಣ, ಅವರು ತಮ್ಮ ಆತ್ಮಸಾಕ್ಷಿಯಂತೆ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ತಿಳಿಸಿದರು. "ಅಲ್ಲದೆ, ದೇಶದ ಒಳಗೆ ಮತ್ತು ಹೊರಗಿನಿಂದ ಹಲವಾರು ಗಣ್ಯ ವ್ಯಕ್ತಿಗಳು ದ್ರೌಪದಿ ಮುರ್ಮುಗೆ ಮತ ಹಾಕುವಂತೆ ನನಗೆ ಮನವಿ ಮಾಡಿದ್ದರು" ಎಂದು ಅವರು ಹೇಳಿದ್ದಾರೆ.

ಒಡಿಶಾದ ಜನ ನನ್ನ ನಿರ್ಧಾರವನ್ನು ಬೆಂಬಲಿಸುತ್ತಾರೆ, ನನ್ನ ಮತದಿಂದ ದ್ರೌಪದಿ ಮುರ್ಮು ಅವರ ಗೆಲುವಿನ ಅಂತರ ಹೆಚ್ಚಾದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಶಾಸಕ ಮೊಹಮ್ಮದ್ ಮೊಕ್ವಿಮ್ ಹೇಳಿದ್ದಾರೆ. ಮುರ್ಮು ಅವರಿಗೆ ಮತ ಹಾಕುವ ನಿರ್ಧಾರ ವೈಯಕ್ತಿಕ ನಿರ್ಧಾರ ಎಂದು ಹೇಳಿದ ಅವರು, ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಮಾಡಿದ ನಾಯಕರುರಾಷ್ಟ್ರಪತಿ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಮಾಡಿದ ನಾಯಕರು

 ರಾಜ್ಯ ನಾಯಕರಿಂದ ಹೈಕಮಾಂಡ್‌ಗೆ ದೂರು

ರಾಜ್ಯ ನಾಯಕರಿಂದ ಹೈಕಮಾಂಡ್‌ಗೆ ದೂರು

ಅವರ ಈ ನಿರ್ಧಾರದಿಂದ ಕಾಂಗ್ರೆಸ್‌ನಲ್ಲಿ ಒಡಕು ಉಂಟಾಗಲಿದಿಯೇ ಎಂದು ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಶಾಸಕ ಮೊಕ್ವಿಮ್ ಉತ್ತರಿಸಿದ್ದಾರೆ.

ಆದರೂ, ಮೊಹಮ್ಮದ್ ಮೊಕ್ವಿಮ್ ನಡೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ (OPCC) ಅಧ್ಯಕ್ಷ ಶರತ್ ಪಟ್ಟನಾಯಕ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕ ನರಸಿಂಗ್ ಮಿಶ್ರಾ, ತಮ್ಮ ರಾಜ್ಯದ ಕಾಂಗ್ರೆಸ್ ಶಾಸಕನ ನಡೆ ಬಗ್ಗೆ ಹೈಕಮಾಂಡ್‌ಗೆ ವರದಿ ಮಾಡಿರುವುದಾಗಿ ತಿಳಿಸಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದಂತೆ ಶಾಸಕ ಮೊಹಮ್ಮದ್ ಮೊಕ್ವಿಮ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 ಶಾಸಕನ ನಡೆಗೆ ಸ್ವಪಕ್ಷದವರ ಟೀಕೆ

ಶಾಸಕನ ನಡೆಗೆ ಸ್ವಪಕ್ಷದವರ ಟೀಕೆ

ಶಾಸಕ ಮೊಹಮ್ಮದ್ ಮೊಕ್ವಿಮ್ ಸಹೋದ್ಯೋಗಿಗಳಾದ ಸಂತೋಷ್ ಸಿಂಗ್ ಸಲೂಜಾ ಮತ್ತು ತಾರಾ ಪ್ರಸಾದ್ ಬಹಿನಿಪತಿ ತಮ್ಮ ಪಕ್ಷದ ಶಾಸಕನ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಮೊಕ್ವಿಮ್ ಅವರನ್ನು ಟೀಕಿಸಿದ್ದಾರೆ.

ಪಕ್ಷದಲ್ಲಿ ಮೊಕ್ವಿನ್‌ ನೆಮ್ಮದಿಯಾಗಿಲ್ಲ ಎಂಬುದನ್ನು ಅವರ ನಡೆ ತೋರಿಸುತ್ತದೆ ಎಂದು ಬಹಿನಿಪತಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಮತ್ತೊಮ್ಮೆ ಸಾಬೀತಾದಂತಾಗಿದೆ ಎನ್ನಲಾಗಿದೆ.

 ಎನ್‌ಸಿಪಿ ಶಾಸಕನಿಂದಲೂ ಅಡ್ಡ ಮತದಾನ

ಎನ್‌ಸಿಪಿ ಶಾಸಕನಿಂದಲೂ ಅಡ್ಡ ಮತದಾನ

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿರುವ ವರದಿಗಳೂ ಇವೆ, ಆದರೆ ಕಾಂಗ್ರೆಸ್ ಈ ವರದಿಯನ್ನು ನಿರಾಕರಿಸಿದೆ. ಗುಜರಾತ್‌ನ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ಕಂಧಲ್ ಜಡೇಜಾ, ದ್ರೌಪದಿ ಮುರ್ಮು ಅವರಿಗೆ ಮತ ಹಾಕಿರುವುದಾಗಿ ಹೇಳಿದರು. ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಅಭ್ಯರ್ಥಿ ಸಿನ್ಹಾಗೆ ಬೆಂಬಲ ನೀಡಿತ್ತು. ಆದರೆ ಕಂಧಲ್ ಜಡೇಜಾ ತಮ್ಮ ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

 ಅಸ್ಸಾಂನ 20 ಕಾಂಗ್ರೆಸ್‌ ಶಾಸಕರ ಮೇಲೆ ಆರೋಪ

ಅಸ್ಸಾಂನ 20 ಕಾಂಗ್ರೆಸ್‌ ಶಾಸಕರ ಮೇಲೆ ಆರೋಪ

ಅಸ್ಸಾಂನಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಶಾಸಕ ಕರೀಂ ಉದ್ದೀನ್ ಬರ್ಭುಯಾ ಅವರು ಕಾಂಗ್ರೆಸ್ ಅಡ್ಡ ಮತದಾನ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಅಸ್ಸಾಂನಲ್ಲಿ ಕನಿಷ್ಠ 20 ಕಾಂಗ್ರೆಸ್ ಶಾಸಕರು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ, ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಬರ್ಭುಯಾ ಹೇಳಿದ್ದಾರೆ.
ಚುನಾಯಿತ ಸಂಸದರು ಮತ್ತು ಶಾಸಕರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರಿಂದ ಅಧ್ಯಕ್ಷರನ್ನು ಚುನಾಯಿಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.

ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿಯು ಆರು ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮೊದಲು ಹೊಸ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Recommended Video

   President Election 2022: ದೇಶಾದ್ಯಂತ ಶಾಸಕರು ,ಸಂಸದರಿಂದ ಮತ ಚಲಾವಣೆ ! | Politice | Oneindia Kannada
   English summary
   Odisha Congress MLA Mohammed Moquim voted for the NDA candidate Droupadi Murmu in the presidential election. After voting, "It is my personal decision as I have listened to my heart which guided me to do something for the soil and that is why I voted for her," Moquim said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X