ಸೈಕಲ್, ಕುದುರೆ ಏರಿ ಬಂದ ಬಿಜೆಪಿ ಸಂಸದರು!
ನವದೆಹಲಿ, ಏಪ್ರಿಲ್, 27: ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ವಾಹನ ಸಂಚಾರ ಯೋಜನೆಗೆ ವಿರೋಧ ವ್ಯಕ್ತಿಪಡಿಸಿದ ಬಿಜೆಪಿ ಸಂಸದರು ಸೈಕಲ್ ಮತ್ತು ಕುದುರೆ ಸವಾರಿ ಮಾಡಿ ಸಂಸತ್ ಭವನಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಬುಧವಾರ ಕುದುರೆಯೇರಿ ಸಂಸತ್ತಿಗೆ ಆಗಮಿಸಿದರೆ, ಮನೋಜ್ ತಿವಾರಿ ಸೈಕಲ್ನಲ್ಲಿ ಆಗಮಿಸಿ ತಮ್ಮ ಆಕ್ರೋಶ ಹೊರಹಾಕಿದರು.

ನನ್ನ ಕಾರನ್ನು ಇಂದು ಹೊರತೆಗೆಯುವಂತಿಲ್ಲ. ಸರ್ಕಾರ ಮಾಡಿರುವ ಬಸ್ ವ್ಯವಸ್ಥೆ ನಮ್ಮ ಮನಸ್ಸಿಗೆ ಬಂದಿಲ್ಲ. ಯಾರಿಗೆ ಸಮ-ಬೆಸದ ಮೇಲೆ ಅಸಮಾಧಾನವಿದೆಯೋ ಅವರು ಈ ಬಗೆಯಲ್ಲಿ ಪ್ರತಿಭಟನೆ ಮಾಡಿ ನಮ್ಮ ಜತೆ ಕೈ ಜೋಡಿಸಬೇಕು ಎಂದು ರಾಮ್ ಪ್ರಸಾದ್ ಶರ್ಮಾ ಹೇಳಿದರು.
ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಕೇಜ್ರಿವಾಲ್ ಸರ್ಕಾರ ಜನವರಿ ತಿಂಗಳಲ್ಲಿ 15 ದಿನ ಕಾಲ ಸಮ-ಬೆಸ ಪದ್ಧತಿಯನ್ನು ಜಾರಿ ಮಾಡಿತ್ತು. ಅದಾದ ಮೇಲೆ ಇದೀಗ ಎರಡನೇ ಹಂತದಲ್ಲಿ ಯೋಜನೆಯನ್ನು ಜಾರಿ ಮಾಡಿದ್ದು ಪಾಲಿಸದವರಿಗೆ ದಂಡ ಹಾಕಲಾಗುತ್ತಿದೆ.
BJP MP Manoj Tiwari comes to Parliament on a cycle, says he is following #OddEven pic.twitter.com/8vtnjzLf3g
— ANI (@ANI_news) April 27, 2016












Click it and Unblock the Notifications