'ಸಿಬಿಐ ಮುಖ್ಯಸ್ಥರ ಮರು ನಿಯೋಜನೆ, ಪಿಎಂ ಬಚಾವಾಗಲು ಸಾಧ್ಯವೇ ಇಲ್ಲ'
ನವದೆಹಲಿ, ಜನವರಿ 8: ರಫೇಲ್ ವ್ಯವಹಾರದ ತನಿಖೆ ಆರಂಭಿಸಬಹುದು ಎಂಬ ಕಾರಣಕ್ಕೆ ಸಿಬಿಐ ಮುಖ್ಯಸ್ಥರನ್ನು ಮಧ್ಯರಾತ್ರಿ ಒಂದು ಗಂಟೆಗೆ ತೆಗೆಯಲಾಯಿತು.. ಇದೀಗ ಅಲೋಕ್ ವರ್ಮಾರನ್ನು ಪುನರ್ ನಿಯೋಜನೆಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ನ್ಯಾಯ ದೊರೆಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ರಫೇಲ್ ವ್ಯವಹಾರದಿಂದ ಪ್ರಧಾನಿಗಳನ್ನು ರಕ್ಷಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಸಾಕ್ಷ್ಯಗಳು ತೆರೆದುಕೊಂಡಿವೆ ಮತ್ತು ಸುಮ್ಮನಾಗಿಸಲಾಗುತ್ತಿದೆ ಎಂದಿರುವ ಅವರು, ಮಧ್ಯರಾತ್ರಿ ವೇಳೆ ಸಿಬಿಐ ಮುಖ್ಯಸ್ಥರನ್ನು ಬದಲಿಸಿದ್ದು ರಫೇಲ್ ಅವ್ಯವಹಾರ ಆರೋಪಕ್ಕೆ ತಳುಕು ಹಾಕಿಕೊಂಡಿದೆಯೇ ಎಂದು ಕೇಳಿದ್ದಾರೆ.
ಅನಿಲ್ ಅಂಬಾನಿಗೆ ಮೂವತ್ತು ಸಾವಿರ ಕೋಟಿ ರುಪಾಯಿ ದೊರಕಿಸಿಕೊಡಲು ಪ್ರಧಾನಮಂತ್ರಿ ಸಹಾಯ ಮಾಡಿದ್ದಾರೆ ಎಂಬುದು ಸ್ಪಷ್ಟ. ಯಾವುದೇ ಅನುಮಾನದ ನೆರಳಿಲ್ಲದೆ, ಶೇಕಡಾ ನೂರರಷ್ಟು ಖಾತ್ರಿಯಾಗಿ ದೇಶದ ಜನರಿಗೆ ಈ ವಿಚಾರ ಗೊತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿ, ಸರಕಾರವು ಯಾರ ವಿರುದ್ಧವೂ ಅಲ್ಲ ಮತ್ತು ಸಂಸ್ಥೆಯ ಮೊದಲ ಎರಡು ಉನ್ನತ ಸ್ಥಾನಗಳಲ್ಲಿ ಇದ್ದವರು ಜಗಳ ಆಡುವಾಗ ಸಿಬಿಐನ ಸಮಗ್ರತೆ ಹಾಗೂ ವಿಶ್ವಾಸಾರ್ಹತೆ ರಕ್ಷಿಸುವ ಉದ್ದೇಶದಿಂದ ನಿರ್ಧಾರ ಕೈಗೊಳ್ಳಲಾಯಿತು ಎಂದಿದ್ದಾರೆ.












Click it and Unblock the Notifications