ಹೊಸ ನೇಮಕ, ವಾಹನ ಖರೀದಿಗೆ ಕೇಂದ್ರ ಬ್ರೇಕ್!

p chidambaram
ನವದೆಹಲಿ, ಸೆ.19 : ರೂಪಾಯಿ ಮೌಲ್ಯ ಕುಸಿತ ಮತ್ತು ಅನೇಕ ಕಾರಣಗಳಿಂದ ದೇಶದ ಅರ್ಥವ್ಯವಸ್ಥೆಯಲ್ಲಿ ಆಗುತ್ತಿರುವ ಏರುಪೇರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಮಿತವ್ಯಯ ಮಂತ್ರ ಪಠಿಸಿದೆ. ಸರ್ಕಾರ ಮಿತವ್ಯಯ ಅನುಸರಿಸಲು ಕೆಲವು ಕ್ರಮಗಳನ್ನು ಪ್ರಕಟಿಸಿದೆ.

ಹಣಕಾಸು ಸಚಿವಾಲಯ ಬುಧವಾರ ಈ ಘೋಷಣೆಗಳನ್ನು ಮಾಡಿದ್ದು, ಅದರಂತೆ, ಪಂಚತಾರಾ ಹೋಟೆಲ್‌ಗ‌ಳಲ್ಲಿ ಸಭೆಗಳನ್ನು ನಡೆಸದೇ ಇರುವುದು, ಅಧಿಕಾರಿಗಳಿಂದ ಬಿಸಿನೆಸ್‌ ಕ್ಲಾಸ್‌ ಬದಲು ಎಕಾನಮಿ ಕ್ಲಾಸ್‌ ವಿಮಾನ ಪ್ರಯಾಣ ಮುಂತಾದ ಅಂಶಗಳು ಮಿತವ್ಯಯ ನೀತಿಯಲ್ಲಿ ಸೇರಿವೆ.

ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹೊಸ ವಾಹನ ಖರೀದಿ ಮಾಡದಿರುವುದು. ವಿದೇಶಕ್ಕೆ ತೆರಳುವ ನಿಯೋಗದ ಸದಸ್ಯರ ಸಂಖ್ಯೆ ಕಡಿಮೆ ಮಾಡುವುದು ಮತ್ತು ಯಾವುದೇ ಹೊಸ ನೇಮಕಾತಿ ಮಾಡಿಕೊಳ್ಳದಿರುವುದು ಮಿತವ್ಯಯದ ಕ್ರಮದಲ್ಲಿವೆ.

ಹಿಂದೆ ಕೇಂದ್ರ ಸರ್ಕಾರ 2008-09 ಮತ್ತು 2012ರ ನವೆಂಬರ್ ನಲ್ಲಿ ಮಿತವ್ಯಯ ಕ್ರಮಗಳ ಘೋಷಣೆ ಮಾಡಿತ್ತು. ಸದ್ಯ ಆರ್ಥಿಕ ಸ್ಥಿತಿ ಏರುಪೇರಾಗುತ್ತಿರುವುದರಿಂದ ಮತ್ತೊಮ್ಮೆ ಮಿತವ್ಯಯದ ಮಂತ್ರ ಪಠಿಸಿದೆ.

ಮಿತವ್ಯಯ ಕ್ರಮ ಘೋಷಣೆ ಮಾಡಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಕೆಲವು ದಿನಗಳ ಹಿಂದೆ ಸುಳಿವು ನೀಡಿದ್ದರು. ಅದು ಈಗ ಅನುಷ್ಠಾನಗೊಂಡಿದ್ದು, ಹಣಕಾಸು ಸಚಿವಾಲಯ ಮಿತವ್ಯಯದ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಮಿತವ್ಯಯ ನೀತಿಗಳಿಂದಾಗಿ, ದೇಶದಲ್ಲಿ ಆರ್ಥಿಕ ಶಿಸ್ತು ಬರುತ್ತದೆ. ಪ್ರಸಕ್ತ ಆರ್ಥಿಕ ಸ್ಥಿತಿಯಲ್ಲಿ ಇದ್ದ ಸಂಪನ್ಮೂಲಗಳನ್ನೇ ಬಳಸಿ ದೈನಂದಿನ ಕೆಲಸಗಳನ್ನು ನಡೆಸಿಕೊಂಡು ಹೋಗುವುದು ಅಗತ್ಯವಾಗಿದ್ದು, ಅದಕ್ಕಾಗಿ, ಈ ಕ್ರಮ ಜರುಗಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.ಹೇಳಿದೆ.

ಪ್ರಮುಖ ಮಿತವ್ಯಯದ ಕ್ರಮಗಳು
* ಯೋಜನೇತರ ವೆಚ್ಚ ಶೇ.10 ರಷ್ಟು ಕಡಿತ
* ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಹೊಸ ನೇಮಕಾತಿ ಇಲ್ಲ
* ಪಂಚತಾರಾ ಹೋಟೆಲ್‌ಗ‌ಳಲ್ಲಿ ಸರ್ಕಾರಿ ಸಭೆಗಳು ರದ್ದು
* ಕೇಂದ್ರ ಸರ್ಕಾರಿ ಇಲಾಖೆ, ಸಚಿವಾಲಯಗಳು ಹೊಸ ವಾಹನ ಖರೀದಿಗೆ ಬ್ರೇಕ್
* ವಿದೇಶಕ್ಕೆ ಒಯ್ಯಲಾಗುವ ನಿಯೋಗದ ಸದಸ್ಯರ ಸಂಖ್ಯೆ ಕಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+