ನಿಥಾರಿ ಮಕ್ಕಳ ಸರಣಿ ಹಂತಕರಿಗೆ ಗಲ್ಲು ಶಿಕ್ಷೆ

Posted By:
Subscribe to Oneindia Kannada

ನವದೆಹಲಿ, ಜುಲೈ 24: ನಿಥಾರಿ ಅತ್ಯಾಚಾರ ಮತ್ತು ಸರಣಿ ಕೊಲೆ ಪ್ರಕರಣದ ಆರೋಪಿಗಳಾದ ಮೋನಿಂದರ್​ ಸಿಂಗ್​ ಪಂದೇರ್ ಮತ್ತು ಸುರೇಂದ್ರ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.

ನಿಥಾರಿ ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ ಗಲ್ಲು ಶಿಕ್ಷೆ

20 ವರ್ಷದ ಯುವತಿ ಪಿಂಕಿ ಸರ್ಕಾರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾ. ಪವನ್​ ತಿವಾರಿ ಅವರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.

Nithari Killers Moninder Pandher, Surender Koli Sentenced To Death

ಸುರೇಂದ್ರ ಕೋಲಿ ಮತ್ತು ಮೋನಿಂದರ್​ ಸಿಂಗ್​ ಪಂದೇರ್​ ಅಪರಾಧಿಗಳು ಎಂದು ಸಿಬಿಐ ಕೋರ್ಟ್ ತಿಳಿಸಿತ್ತು. ಇದುವರೆಗೂ ಇವರ ವಿರುದ್ಧ ದಾಖಲಾಗಿರುವ 16 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಿ ತೀರ್ಪು ಪ್ರಕಟವಾಗಿದ್ದು, ಪ್ರಮುಖ ಆರೋಪಿ ಸುರೇಂದ್ರ ಕೋಲಿಗೆ ಎಲ್ಲಾ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ.

Narendra Modi is threatened by 50 Crores Ransom

ಈ ಸೈಕೋ ಕಿಲ್ಲರ್ಸ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದರು. ಅಲ್ಲದೆ, ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The special CBI court on Monday gave death sentence to Surender Koli and Moninder Singh Pandher convicted in infamous Nithari killings. Koli and Pandher were pronounced guilty by the CBI court in the murder and attempted rape of a 20-year-old girl.
Please Wait while comments are loading...