ವಿಷ ಸೇವಿಸುವ ಮಾತನಾಡಿದ ಯುವಕನಿಗೆ ನಿರ್ಮಲಾ ಸೀತಾರಾಮನ್ ಬುದ್ಧಿವಾದ

ನವದೆಹಲಿ, ಅಕ್ಟೋಬರ್ 01: ಹಣಕಾಸಿನ ಅವ್ಯವಹಾರದ ಆರೋಪದ ಮೇಲೆ ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇರಿರುವ ನಿರ್ಬಂಧ ಸಾಕಷ್ಟು ಗ್ರಾಹಕರಿಗೆ ಸಮಸ್ಯೆಯನ್ನುಂಟು ಮಾಡಿದೆ.

ಈ ಕುರಿತು ರಾಕೇಶ್ ಭಟ್ ಎಂಬ ಗ್ರಾಹಕರೊಬ್ಬರು ಟ್ವೀಟ್ ಮಾಡಿ, "ಪ್ರೀತಿಯ ಮೇಡಂ, ಇದರಲ್ಲಿ ಹೊಸದೇನೂ ಇಲ್ಲ. ಇದರ ಬಗ್ಗೆ ಕೂಡಲೇ ಸರಿಯಾದ ಕ್ರಮ ಕೈಗೊಳ್ಳುವುದನ್ನು ನಅವು ನಿರೀಖ್ಷಿಸುತ್ತೇವೆ. ಈ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ದಾರಿಗಳಿವೆ. ಆದರೆ ಬ್ಯಾಂಕಿನ ವ್ಯವಹಾರದ ಮೇಲೆ ನಿರ್ಬಂಧ ಹೇರುವುದು ಸರಿಯಾದ ಕ್ರಮವಲ್ಲ. ಇದನ್ನು ನಾವು ಸರ್ಕಾರ ಮತ್ತು ಆರ್ ಬಿಐ ಯಿಂದ ನಿರೀಕ್ಷಿಸಿರಲಿಲ್ಲ. ಇದನ್ನು ಸವಾಲು ಎಂದು ಸ್ವೀಕರಿಸಿ, ಸಮಸ್ಯೆಯನ್ನು ಪರಿಹರಿಸಿ. ಇಲ್ಲವೆಂದರೆ ಜನರು ವಿಷ ಕುಡಿದು ಸಾಯುತ್ತಾರೆ" ಎಂದಿದ್ದರು.

ಅವರ ಈ ಟ್ವೀಟ್ ಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಈ ಥರದ ಅತಿರೇಕದ ಕ್ರಮದ ಬಗ್ಗೆ ಮಾತನಾಡುವ, ಉಲ್ಲೇಖಿಸುವ, ಬರೆಯುವುವುದನ್ನು ಮೊದಲು ನಿಲ್ಲಿಸುವಂತೆ ನಾನು ನಿಮ್ಮಲ್ಲಿ ಮನವಿ ಂಆಡುತ್ತೇನೆ. ಎಲ್ಲ ವಿಷಯಗಳನ್ನೂ ವಿತ್ತ ಸಚಿವಾಲಯ ಬಗೆಹರಿಸುವುದಕ್ಕಾಗುವುದಿಲ್ಲ. ಇದು ಆರ್ ಬಿಐ ಅಡಿಯಲ್ಲಿ ಬರತ್ತದೆ, ಅದು ಕ್ರಮ ಕೈಗೊಳ್ಳುತ್ತದೆ" ಎಂದರು.

Nirmala Sitharaman Urges MPC Bank Account Holders to Not Say Extreme Things

ಪಂಜಾಬ್ ಮತ್ತು ಮಹಾರಾಷ್ಟ್ರ ಕೊ ಆಪರೇಟಿವ್ ಬ್ಯಾಂಕ್ ನಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂಬ ದೂರಿನನ್ವಯ ಸೆಪ್ಟೆಂಬರ್ 23 ರಂದು ಆರ್ಬಿಐ, ಪಿಎಂಸಿ ಬ್ಯಾಂಕ್ ಮೇಲೆ ಕೆಲವು ನಿರ್ಬಂಧ ಹೇರಿತ್ತು. ಅರು ತಿಂಗಳ ಅವಧಿಯ ಈ ನಿರ್ಬಂಧದಿಂದ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ. ಹಣ ಡ್ರಾ ಮಾಡುವುವುದಕ್ಕೂ ಮಿತಿ, ಜೊತೆಗೆ ಆರು ತಿಂಗಳವರೆಗೆ ಈ ಬ್ಯಾಂಕ್ ನಲ್ಲಿ ಎಫ್ಡಿ ಇಡಲು ಅನುಮತಿ ನೀಡುವಂತಿಲ್ಲ, ಹೊಸ ಸಾಲವನ್ನೂ ಕೊಡುವಂತಿಲ್ಲ ಎಂದು ಆರ್ಬಿಐ ಹೇಳಿತ್ತು.

ಇದರಿಂದಾಗಿ ಬ್ಯಾಂಕಿನ ಸಹಸ್ರಾರು ಗ್ರಾಹಕರು ಪರಿತಪಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+