ಇಂದಿರಾ ಗಾಂಧಿ To ನಿರ್ಭಯಾ: ಹ್ಯಾಂಗ್‌ಮ್ಯಾನ್ ಜೀವನದ ಅಚ್ಚರಿಯ ಸುದ್ದಿ
ನವ ದೆಹಲಿ, ಮಾರ್ಚ್ 21: ''ಇದು ನಮ್ಮ ಕುಟುಂಬದ ಪಾರಂಪರಿಕ ವೃತ್ತಿ. ಇದನ್ನು ನಾನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ.'' ಹೀಗೆಂದು ಹೇಳುತ್ತಾರೆ ಹ್ಯಾಂಗ್‌ಮ್ಯಾನ್ ಪವನ್ ಜಲ್ಲದ್.
ನಿರ್ಭಯಾ ಪ್ರಕರಣದ ಹಂತಕರನ್ನು ನಿನ್ನೆ (ಮಾರ್ಚ್ 20) ಗಲ್ಲಿಗೆ ಏರಿಸಲಾಗಿದೆ. ಆ ಕೀಚಕರ ಕುತ್ತಿಗೆಗೆ ಹಗ್ಗ ಹಾಕಿದ್ದು, ಹ್ಯಾಂಗ್‌ಮ್ಯಾನ್ ಪವನ್ ಜಲ್ಲದ್. ನಿರ್ಭಯಾ ಕೇಸ್ ಇಡೀ ಭಾರತದಾದ್ಯಂತ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಪ್ರಕರಣ. ಪ್ರಕರಣದ ಅಪರಾಧಿಗಳನ್ನ ಗಲ್ಲಿಗೆ ಏರಿಸಿದ ಹ್ಯಾಂಗ್ ಮ್ಯಾನ್ ಪವನ್ ಭಾರತದ ಜನರ ಮೆಚ್ಚುಗೆ ಪಡೆದಿದ್ದಾರೆ.
ಹ್ಯಾಂಗ್‌ಮ್ಯಾನ್ ಕೆಲಸ ಸಾಮಾನ್ಯವಾದ ವೃತ್ತಿಯಲ್ಲ. ಹೀಗಾಗಿ, ಪವನ್ ಜಲ್ಲದ್ ಜೀವನ ತುಂಬ ಕುತೂಹಲಕಾರಿಯಾಗಿದೆ. ಅವರ ಇಡೀ ಕುಟುಂಬ ಇದೇ ವೃತ್ತಿಯನ್ನು ನಂಬಿಕೊಂಡು, ಜೀವನ ಸಾಗಿಸುತ್ತ ಬಂದಿದೆ. ತಾತನಿಂದ ಶುರುವಾದ ವೃತ್ತಿಯನ್ನು, ಈಗ ಮೊಮ್ಮಗ ಪವನ್ ಜಲ್ಲದ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮುಂದೆ ತನ್ನ ಮಗ ಕೂಡ ಇದೇ ಕೆಲಸ ಮಾಡಬೇಕು ಎನ್ನುವುದು ಪವನ್ ಅವರ ಆಸೆಯಾಗಿದೆ.

ತಾತ, ಅಪ್ಪ ಈಗ ಮಗ
ಹ್ಯಾಂಗ್‌ಮ್ಯಾನ್ ಕೆಲಸದಲ್ಲಿ ಪವನ್ ಜಲ್ಲದ್ ಕುಟುಂಬ ದೊಡ್ಡ ಇತಿಹಾಸ ಹೊಂದಿದೆ. 1951 ರಿಂದ ಅವರ ಕುಟುಂಬ ಈ ಕೆಲಸ ಮಾಡಿಕೊಂಡು ಬಂದಿದೆ. ಪವನ್ ಜಲ್ಲದ್ ತಾತ ಹ್ಯಾಂಗ್ ಮ್ಯಾನ್ ಕೆಲಸವನ್ನು ಶುರು ಮಾಡಿದರು. ನಂತರ ಅವರ ಮಗ ಕೂಡ ಅದೇ ಕೆಲಸದಲ್ಲಿ ಮುಂದುವರೆದರು. ಈಗ ಪವನ್ ಕೂಡ ತಮ್ಮ ಅಜ್ಜ ಹಾಗೂ ಅಪ್ಪನ ಹಾದಿಯಲ್ಲಿಯೇ ಹ್ಯಾಂಗ್ ಮ್ಯಾನ್ ಆಗಿದ್ದಾರೆ.

ಇಂದಿರಾ ಗಾಂಧಿ ಟು ನಿರ್ಭಯಾ ಕೇಸ್
1987ರಲ್ಲಿ ಇಂದಿರಾ ಗಾಂಧಿ ಹಂತಕರನ್ನು ಪವನ್ ಜಲ್ಲದ್ ತಾತ ಗಲ್ಲಿಗೆ ಏರಿಸಿದ್ದರು. ಆಗ ಪವನ್ 22 ವರ್ಷದ ಹುಡುಗನಾಗಿದ್ದರು. ತಾತ ಹಾಗೂ ತಂದೆಯ ಕೆಲಸ ನೋಡಿಕೊಂಡು ಬೆಳೆದ ಪವನ್ ಅದೇ ಕೆಲಸ ಮಾಡುವ ಆಸೆಯನ್ನು ಬಾಲ್ಯದಿಂದ ಹೊಂದಿದ್ದರು. ಅವರೇ ಹೇಳುವಂತೆ ತಾತನೇ ಅವರಿಗೆ ಸ್ಫೂರ್ತಿಯಂತೆ. ಅಂದು ತಾತ ಇಂದಿರಾ ಗಾಂಧಿ ಹಂತಕನನ್ನು ನೇಣಿಗೆ ಹಾಕಿದರೆ, ಇಂದು ನಿರ್ಭಯಾ ಹಂತಕರನ್ನು ಪವನ್ ಗಲ್ಲಿಗೆ ಏರಿಸಿದ್ದಾರೆ.

ಒಬ್ಬರನ್ನು ಗಲ್ಲಿಗೆ ಹಾಕಿದರೆ 20 ಸಾವಿರ
ಮೂರು ವರ್ಷಗಳ ಹಿಂದೆ ತಮಗೆ ತಿಂಗಳಿಗೆ 5 ಸಾವಿರ ಸಂಬಳ ಸಿಗುತ್ತಿತ್ತು ಎಂದು ಪವನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿರ್ಭಯಾ ಕೇಸ್‌ನ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರ ರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಈ ಮುಂಚೆ ತಿಳಿಸಿದ್ದರು. ಆದರೆ, ಬಳಿಕ ತಲಾ 20 ಸಾವಿರ ರು ನಂತೆ 80 ಸಾವಿರ ರು ಮಾತ್ರ ಸಿಗಲಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.

ದಾಖಲೆ ಮಾಡಿದ ಪವನ್ ಜಲ್ಲದ್
ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೆ ಏರಿಸುವ ಮೂಲಕ ಪವನ್ ಜಲ್ಲದ್ ದಾಖಲೆ ಬರೆದಿದ್ದಾರೆ. ತಮ್ಮ ತಾತ ಒಂದೇ ವೇಳೆ ಇಬ್ಬರು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದರು. ಪವನ್ ಒಂದೇ ವೇಳೆ ನಾಲ್ಕು ಪಾಪಿಗಳನ್ನು ನೇಣಿಗೆ ಹಾಕಿದ್ದಾರೆ. ಅವರ ವೃತ್ತಿ ಬಗ್ಗೆ, ಎಷ್ಟೋ ಜನರು ನಿಮಗೆ ಕೆಲಸ ಮಾಡಲು ಭಯ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರೆ, 'ಇಲ್ಲ' ಎಂದು ಪವನ್ ಹೇಳುತ್ತಾರಂತೆ.

ಮರಣದಂಡನೆಯ ದಿನ 4 ಗಂಟೆಗೆ ಏಳುತ್ತಾರೆ
ಮರಣದಂಡನೆ ನೀಡುವ ದಿನ ಹ್ಯಾಂಗ್ ಮ್ಯಾನ್ ಪವನ್ 4 ಗಂಟೆಗೆ ಏಳುತ್ತಾರೆ. ಮತ್ತೊಮ್ಮೆ ಹಗ್ಗ ಹಾಗೂ ಗಲ್ಲಿಗೆ ಏರಿಸಲು ಬೇಕಾಗುವ ವಸ್ತುಗಳ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಗಲ್ಲಿಗೆ ಏರಿಸಿದ 15 ನಿಮಿಷಗಳ ನಂತರ, ವೈದ್ಯರು ಸಾವನ್ನು ಖಚಿತಪಡಿಸುತ್ತಾರೆ. ಈ ಹಿಂದೆ 5 ಅಪರಾಧಿಗಳನ್ನು ನೇಣಿಗೆ ಹಾಕಿದ್ದ ಪವನ್, ನಿನ್ನೆ ನಾಲ್ಕು ಅಪರಾಧಿಗಳನ್ನು ಗಲ್ಲಿಗೆ ಏರಿಸಿದ್ದಾರೆ.

ಪವನ್‌ಗೆ ಕೊನೆ ಆಗುತ್ತದೆಯೇ ಪಾರಂಪರಿಕ ವೃತ್ತಿ?
ಹ್ಯಾಂಗ್ ಮ್ಯಾನ್ ಆಗಿ ಪವನ್ ಕುಟುಂಬ ಮೂರು ಜನರೇಷನ್ ಕೆಲಸ ಮಾಡಿದೆ. ಆದರೆ, ಪವನ್ ಪುತ್ರನಿಗೆ ಈ ಕೆಲಸ ಇಷ್ಟ ಇಲ್ಲವಂತೆ. ನಾನು ಓದಿ ಬೇರೊಂದು ಕೆಲಸ ಪಡೆಯುತ್ತೇನೆ ಎಂದು ಅವರ ಮಗ ಅಪ್ಪನಿಗೆ ತಿಳಿಸಿದ್ದಾರಂತೆ. ಹೀಗಾಗಿ ತಮ್ಮ ಕುಟುಂಬದ ಪಾರಂಪರಿಕ ವೃತ್ತಿ ತಮಗೆ ಮುಗಿದು ಹೋಗುತ್ತದೆಯೇ ಎನ್ನುವ ಆತಂಕವು ಪವನ್ ಇದೆಯಂತೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications