ಒಂದು ವಾರ ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಬ್ರೇಕ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವ ದೆಹಲಿ, ನವೆಂಬರ್ 8: ಇನು ಒಂದು ವಾರ ದೆಹಲಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಬೇಡಿ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣದ ಬಗ್ಗೆ ಮಂಗಳವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೀಠವು, ಒಂದು ವಾರ ಕಾಲ ಎಲ್ಲ ರೀತಿ ನಿರ್ಮಾಣ ಕಾರ್ಯಕ್ಕೆ ನಿಷೇಧ ವಿಧಿಸಿತು.

ಮಾಲಿನ್ಯವನ್ನು ನಿಯಂತ್ರಿಸಲಿ ದೆಹಲಿ ಹಾಗೂ ಪಂಜಾಬ್ ಸರಕಾರಗಳು ವಿಫಲವಾಗಿವೆ ಎಂದು ಟೀಕಿಸಿದ ಹಸಿರು ಪೀಠ, ನೀರು ಸಿಂಪರಣೆಗೆ ಹೆಲಿಕಾಪ್ಟರ್ ಬದಲು ಕ್ರೇನ್ ಏಕೆ ಬಳಸುತ್ತಿದ್ದೀರಿ ಎಂದು ದೆಹಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ದೆಹಲಿಯಲ್ಲಿ ಹೊಂಜು (Smog) ಕಡಿಮೆ ಆಗಿರುವುದನ್ನು ತೋರಿಸಬಲ್ಲಂಥ ಅಂಕಿ-ಅಂಶಗಳೇನಾದರೂ ಇವೆಯೇ ಎಂದು ಪ್ರಶ್ನಿಸಿತು.[ಮಾಲಿನ್ಯವೇ ಮಾರಕವಾಗಿದೆಯೇ ದೆಹಲಿಗರ ಲೈಂಗಿಕ ಜೀವನಕ್ಕೆ?]

NGT bans construction in Delhi for a week

ಹೆಲಿಕಾಪ್ಟರ್ ಬದಲಿಗೆ ಕ್ರೇನ್ ನಲ್ಲಿ ಯಾಕೆ ನೀರು ಸಿಂಪಡಿಸಿಸುತ್ತಿದ್ದೀರಿ ಎಂದು ಮತ್ತೆ ಪ್ರಶ್ನಿಸಿದ ಹಸಿರು ಪೀಠ, ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ತಗ್ಗಿಸಲು ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿತು. ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ತಿಳಿಸುತ್ತಿಲ್ಲ. ದೆಹಲಿ-ಚಂಡೀಗಡದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ ಎಂದಿತು.

ಇದೇ ವಿಚಾರವಾಗಿ ಪಂಜಾಬ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹಸಿರು ಪೀಠ, ದೀಪಾವಳಿ ಹಾಗೂ ಬೆಳೆ ಸುಡುವುದು ಗೊತ್ತಿರುವ ವಿಚಾರಗಳು. ಮಾಲಿನ್ಯಕ್ಕೆ ಸಂಬಂಧಿಸಿದ ಹಾಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲೆ ಸಭೆ ಏನಾದರೂ ನಡೆಸಿದ್ದರಾ? ನಿಮ್ಮ ತಯಾರಿ ಏನಿತ್ತು? ಎಂದು ಪ್ರಶ್ನಿಸಿತು.[ದೆಹಲಿ ವಾಯು ಮಾಲಿನ್ಯ: ಮೂರು ದಿನ ಶಾಲೆ ಕಾಲೇಜು ಬಂದ್]

ರೈತರು ಬೆಳೆ ಸುಡುವುದನ್ನು ತಡೆಯುವುದಕ್ಕೆ ಏನು ಕ್ರಮ ತೆಗೆದುಕೊಂಡಿದ್ದಿರಿ? ಕೃಷಿಗೆ ಬಳಸುವ ನೀರಿನ ವಿಲೇವಾರಿಗೆ ರೈತರಿಗೆ ಎಶಃಟು ಯಂತ್ರಗಳನ್ನು ನೀಡಿದ್ದಿರಿ? ನೀವುರೈತರಿಗೆ ಕನಿಷ್ಠ ಒಂದು ಸಾವಿರ ರುಪಾಯಿ ಕೊಟ್ಟಿದ್ದರೂ ಅವರು ಈ ರೀತಿ ಸುಡುತ್ತಿರಲಿಲ್ಲ ಎಂದಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Green Tribunal has ordered a one week ban on construction in Delhi. The order was passed while the NGT was hearing a case relating to the rising pollution levels in the National Capital. The NGT today said that it is banning construction of any type in Delhi for a week.
Please Wait while comments are loading...