ನಾನು ಸಾಯೋಕೂ ಸಿದ್ಧ, ಆದ್ರೆ ಮೋಹನ್ ಭಾಗವತ್ ಗೆ ಬೆಂಬಲ ನೀಡಲಾರೆ: ಲಾಲೂ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜೂನ್ 15: ನಾನು ಸಾಯೋಕಾದರೂ ಸಿದ್ಧ. ಆದರೆ ಯಾವ ಕಾರಣಕ್ಕೂ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬೆಂಬಲಿಸಲಾರೆ ಎಂದು ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗಾಗಿ ವಿಪಕ್ಷಗಳಿಂದ ಮಹತ್ವದ ಸಭೆ

ನವದೆಹಲಿಯಲ್ಲಿ, ನಿನ್ನೆ(ಜೂನ್ 14) ರಾಷ್ಟ್ರಪತಿ ಆಯ್ಕೆ ಕುರಿತಂತೆ ವಿಪಕ್ಷಗಳು ಸೇರಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮೋಹನ್ ಭಾಗವತ್ ಮತ್ತು ನನ್ನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಕಷ್ಟಿವೆ, ಆದ್ದರಿಂದ ನಾನು ಅವರನ್ನು ಎಂದಿಗೂ ಬೆಂಬಲಿಸಲಾರೆ ಎಂದು ಅವರು ಹೇಳಿದರು.

Next President of India: Will die, but won't support Mohan Bhagwat says Lalu

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯ ಕುರಿತು ನಡೆದ ಸಭೆಯಲ್ಲಿ ವಿಪಕ್ಷಗಳಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಆದರೆ ಆಡಳಿತ ಪಕ್ಷ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸುವವರೆಗೂ ಸುಮ್ಮನಿರುವ ತಂತ್ರವನ್ನು ವಿಪಕ್ಷಗಳು ಅನುಸರಿಸಿವೆ.

ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ, 20 ರಂದು ಮತ ಎಣಿಕೆ

ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ ನಂತರ ಆ ಅಭ್ಯರ್ಥಿಗೆ ಸೂಕ್ತ ಪ್ರತಿಸ್ಪರ್ಧೆ ನೀಡುವಂಥ ಅಭ್ಯರ್ಥಿಯನ್ನು ವಿಪಕ್ಷಗಳು ಆರಿಸಲಿವೆ.
ಜುಲೈ 17 ರಂದು ರಾಷ್ತ್ರಪತಿ ಚುನಾವಣೆ ನಡೆಯಲಿದ್ದು, ಜು. 20 ರಂದು ಫಲಿತಾಂಶ ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Will perish, but won't support the candidature of Mohan Bhagwat as the next President of India is what RJD chief and former Bihar Chief Minister Lalu Prasad Yadav had to say. The statement comes in the wake of hectic discussions on choosing a candidate as the next President of India.
Please Wait while comments are loading...