ವಾಷಿಂಗ್ ಮಷಿನ್ ನಲ್ಲಿ ಮುಳುಗಿ ಅವಳಿ ಹಸುಳೆ ದುರ್ಮರಣ

ಹೆತ್ತ ತಾಯಿಯ ನಿರ್ಲಕ್ಷ್ಯವೋ, ದುರ್ವಿಧಿಯೋ ಮೂರು ವರ್ಷ ವಯಸ್ಸಿನ ಅವಳಿ ಮಕ್ಕಳು ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ.

ನವದೆಹಲಿ, ಫೆಬ್ರವರಿ 26: ಹೆತ್ತ ತಾಯಿಯ ನಿರ್ಲಕ್ಷ್ಯವೋ, ದುರ್ವಿಧಿಯೋ ಮೂರು ವರ್ಷ ವಯಸ್ಸಿನ ಅವಳಿ ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ನಡೆದಿದೆ.

ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 1ನಲ್ಲಿರುವ ಅವಂತಿಕಾ ಅಪಾರ್ಟ್ಮೆಂಟ್ ನಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಾಷಿಂಗ್ ಪೌಡರ್ ತರಲು ತಾಯಿ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ನೀರು ತುಂಬಿಕೊಂಡಿದ್ದ ವಾಷಿಂಗ್ ಮಷಿನೊಳಗೆ ಇಬ್ಬರು ಮಕ್ಕಳು ಇಳಿದು ಮೃತಪಟ್ಟಿದ್ದಾರೆ.

New Delhi : Twins death drown in Washing Machine

ಸುಮಾರು 12 ರಿಂದ 15 ಲೀಟರ್ ನೀರಿತ್ತು. ಮಷಿನ್ ನೊಳಗೆ ಹೇಗೆ ಸೇರಿಕೊಂಡರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ತನಿಖೆ ನಡೆಸಲಾಗುತ್ತದೆ ಎಂದು ಡಿಸಿಪಿ ಎಂಎನ್ ತಿವಾರಿ ಹೇಳಿದ್ದಾರೆ.

ವಾಷಿಂಗ್ ಪೌಡರ್ ತಂದ ಬಳಿಕ ಮಕ್ಕಳನ್ನು ಕಾಣದೆ ಕಂಗಾಲಾದ ತಾಯಿ ರಾಖಿ ಅವರು ತಮ್ಮ ಪತಿಗೆ ಕರೆ ಮಾಡಿದ್ದಾರೆ. ಕೋಟಕ್ ಮಹೇಂದ್ರ ಕಂಪನಿಯ ಉದ್ಯೋಗಿಯಾಗಿರುವ ರವೀಂದರ್ ಅವರು ತಕ್ಷಣವೇ ಮನೆಗೆ ಧಾವಿಸಿ ಬಂದಿದ್ದಾರೆ. ನೆರೆಮನೆಯವರ ಸಲಹೆಯಂತೆ ಪೊಲೀಸರ ನೆರವು ಕೋರಿದ್ದಾರೆ.

ನಿಶಾಂತ್ ಮತ್ತು ನಕ್ಷ್ಯ ಎಂಬ ಇಬ್ಬರು ಅವಳಿ ಮಕ್ಕಳನ್ನು ಹುಡುಕಲು ಆರಂಭಿಸಿದವರಿಗೆ ಆಘಾತ ಎದುರಾಗಿದೆ. ಇಬ್ಬರು ಮಕ್ಕಳು ವಾಷಿಂಗ್ ಮಷಿನ್ ನ ನೀರಿನಲ್ಲಿ ಕಂಡು ಬಂದಿದ್ದಾರೆ. ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ದುಃಖತಪ್ತ ತಂದೆ, ಅಲ್ಲಿಂದ ಜೈಪುರ್ ಗೋಲ್ಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲೂ ಕೂಡಾ ಮಕ್ಕಳು ಬದುಕಿಲ್ಲ ಎಂಬುದು ದೃಢಪಟ್ಟಾಗ ಬರಸಿಡಿಲು ಬಡಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+