'ಜೈ ಮಾತಾ ದಿ' ಕೂಗದ ಮದ್ರಸಾ ವಿದ್ಯಾರ್ಥಿಗಳ ಮೇಲೆ ಹಲ್ಲೆ

Posted By:
Subscribe to Oneindia Kannada

ನವದೆಹಲಿ,ಮಾರ್ಚ್,30: 'ಜೈ ಮಾತಾ ದಿ' ಎಂಬ ಘೋಷಣೆ ಕೂಗಲು ನಿರಾಕರಿಸಿದ ಮದ್ರಸಾದ ಮೂವರು ವಿದ್ಯಾರ್ಥಿಗಳ ಮೇಲೆ ಅಪರಿಚಿತ ಗುಂಪೊಂದು ಹಲ್ಲೆ ಮಾಡಿದ ಘಟನೆ ನವದೆಹಲಿಯ ಬೇಗಮ್ ಪುರದ ಬಳಿ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದಿಲ್ಕಾಶ್, ಅಜ್ಮಲ್ ಹಾಗೂ ನಯೀಮ್ ಎಂಬ ಮೂವರು ಮದ್ರಸಾದ ವಿದ್ಯಾರ್ಥಿಗಳು ಅಪರಿಚಿತ ಗುಂಪಿನ ಮಂದಿಯಿಂದ ಹಲ್ಲೆಗೊಳಗಾಗಿದ್ದು, ಈ ಮೂವರು ವಾಯುವಿಹಾರಕ್ಕೆಂದು ಬ್ಯಾನ್ಸ್ ವಾಲಾ ಪಾರ್ಕಿಗೆ ತೆರಳಿದ ವೇಳೆ ಈ ಘಟನೆ ಸಂಭವಿಸಿದೆ.[ಕರ್ನಾಟಕದ ಸಾವಿರ ಮದ್ರಸಾಗಳಲ್ಲಿ ಸಮೀಕ್ಷೆ ಆರಂಭ]

New Delhi: Madrasa students assaulted for not saying 'Jai Mata Di'

ಹಲ್ಲೆಗೊಳಗಾದ ಮೂವರಲ್ಲಿ ಮೊಹಮ್ಮದ್ ದಿಲ್ಕಾಶ ಅವರ ಕೈ ಮುರಿದು ಹೋಗಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ. ದಿಲ್ಕಾಶ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕ್ರಮ್ ಜಿತ್ ಸಿಂಗ್ ತಿಳಿಸಿದ್ದಾರೆ.[ಮದ್ರಸಾ ಎಂದರೇನು? #banmadrasa ಏಕೆ?]

ಈ ಮೂವರು ವಿದ್ಯಾರ್ಥಿಗಳು ಯಾರು?

ದಿಲ್ಕಾಶ್, ಅಜ್ಮಲ್ ಹಾಗೂ ನಯೀಮ್ ಈ ಮೂವರು ಬಿಹಾರದ ಪೂರ್ಣಿಯಾ ಜಿಲ್ಲೆಯವರು. 2015ರಲ್ಲಿ ನವದೆಹಲಿಗೆ ಬಂದ ಇವರು ಫೈಜ್ ಉಲ್ ಉಲೂಮ್ ಗೌಸಿಯಾ ಮದ್ರಸಾದಲ್ಲಿ ಮೊಹಮ್ಮದ್ ಮಸ್ ಜಿದ್ ಎಂಬುವರ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three madrasa students Dilkash, Ajmal and Naeem were brutally assaulted for not saying 'Jai mata Di' in Bengumpur, New delhi
Please Wait while comments are loading...