ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿದ ವ್ಯಕ್ತಿ

|
Google Oneindia Kannada News

ನವದೆಹಲಿ, ನವೆಂಬರ್ 20: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮುಖ್ಯಮಂತ್ರಿ ಕಾರ್ಯಾಲಯದ ಹೊರಭಾಗದಲ್ಲಿ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿರುವ ಘಟನೆ ಮಂಗಳವಾರ ನಡೆದಿದೆ.

ದಾಳಿಕೋರ ಅನಿಲ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಕಚೇರಿ ಬಳಿಯೇ ಈ ಘಟನೆ ನಡೆದಿರುವುದು ಪೊಲೀಸ್ ಭದ್ರತೆಯ ವೈಫಲ್ಯ ಉಂಟಾಗಿದೆ ಎಂದು ಆಮ್ ಆದ್ಮಿ ಪಕ್ಷ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಿಯ ಹಳೇ ಟ್ವೀಟ್ ರೀಟ್ವೀಟ್ ಮಾಡಿ, ಲೇವಡಿ ಮಾಡಿದ ಕೇಜ್ರಿಪ್ರಧಾನಿಯ ಹಳೇ ಟ್ವೀಟ್ ರೀಟ್ವೀಟ್ ಮಾಡಿ, ಲೇವಡಿ ಮಾಡಿದ ಕೇಜ್ರಿ

ಅರವಿಂದ್ ಕೇಜ್ರಿವಾಲ್ ಸಭೆ ಮುಗಿಸಿ ಊಟಕ್ಕಾಗಿ ಹೊರಡುವಾಗ ಕಟ್ಟಡ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯ ಹೊರಭಾಗದಲ್ಲಿ ಆರೋಪಿ ಖಾರದ ಪುಡಿ ಎರಚಿದ್ದಾನೆ.

ಅಲಕಾ ಲಂಬಾ ಆರೋಪ

ಅಲಕಾ ಲಂಬಾ ಆರೋಪ

ಆರೋಪಿಯು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದಿದ್ದ. ತನ್ನ ಜೇಬಿನಿಂದ ಪತ್ರವೊಂದರ ಜತೆಗೆ ಖಾರದ ಪುಡಿಯನ್ನು ತೆಗೆದುಕೊಂಡು ಅವರತ್ತ ಎಸೆದ. ಕೇಜ್ರಿವಾಲ್ ಕನ್ನಡಕ ಹಾಕಿದ್ದರಿಂದ ಅದೃಷ್ಟವಶಾತ್ ಅವರ ಕಣ್ಣಿಗೆ ಬೀಳಲಿಲ್ಲ. ಆದರೆ, ಅವರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕನ್ನಡಕ ಕೆಳಕ್ಕೆ ಬಿದ್ದು ಒಡೆದುಹೋಯಿತು ಎಂದು ಎಎಪಿ ನಾಯಕಿ ಅಲಕಾ ಲಂಬಾ ತಿಳಿಸಿದ್ದಾರೆ.

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಅಧೀನದಲ್ಲಿರುವ ಪೊಲೀಸರು ಮುಖ್ಯಮಂತ್ರಿಗಳಿಗೆ ಸೂಕ್ತ ಭದ್ರತೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದೆಹಲಿ ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್, ತಂಡಕ್ಕೆ ಜಾಮೀನುದೆಹಲಿ ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್, ತಂಡಕ್ಕೆ ಜಾಮೀನು

Array

ಬಿಜೆಪಿಯದ್ದೇ ಸೂಚನೆ

ಮುಖ್ಯಮಂತ್ರಿ ಕಾರ್ಯಾಲಯದೊಳಕ್ಕೆ ಸಮಾಜ ವಿರೋಧಿ ಶಕ್ತಿಗಳು ಬರುವುದನ್ನು ತಡೆಯುವಲ್ಲಿ ದೆಹಲಿ ಪೊಲೀಸರು ನಿರಂತರವಾಗಿ ವಿಫಲರಾಗಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಯ ಸೂಚನೆಯಂತೆ ಅವರು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಲೋಕಸಭಾ ಚುನಾವಣೆಗೆ ಸಜ್ಜಾದ ಕೇಜ್ರಿವಾಲ್, ಬಿಜೆಪಿ ಗಡಗಡ?!

ತನಿಖೆಗೆ ಒಳಪಡಿಸಬೇಕು

ತನಿಖೆಗೆ ಒಳಪಡಿಸಬೇಕು

ಈ ಘಟನೆಯನ್ನು ಬಿಜೆಪಿ ಖಂಡಿಸಿದೆ. 'ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನು ಸಹಿಸಿಕೊಳ್ಳಲು ಅಥವಾ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ಘಟನೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಹೇಳಿದ್ದಾರೆ.

ಕ್ರಮ ತೆಗೆದುಕೊಳ್ಳುತ್ತಾರೆಯೇ?

ಮುಖ್ಯಮಂತ್ರಿ ಕಚೇರಿಯ ಮುಂದೆ ಯಾವುದೇ ವ್ಯಕ್ತಿ ತೆರಳಲು ಪೊಲೀಸರು ಹೇಗೆ ಅನುವು ಮಾಡಿಕೊಟ್ಟರು? ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆಯೇ ಅಥವಾ ಆತನನ್ನು ಬಿಜೆಪಿಯ ವಕ್ತಾರ ಅಥವಾ ಎಂಎಲ್‌ಎ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆಯೇ? ಎಂದು ಎಎಪಿ ಬೆಂಬಲಿಗ ಬರಹಾರ ಅಂಕಿತ್ ಲಾಲ್ ಸಿಸಿಟಿವಿ ದೃಶ್ಯದ ವಿಡಿಯೋ ಹಂಚಿಕೊಂಡು ಪ್ರಶ್ನಿಸಿದ್ದಾರೆ.

English summary
A man threw chilli powder at Delhi Cheif Minister Arvind Kejriwal outside his office on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X