ಭಾರತ-ಚೀನಾ ನಡುವೆ ಶಾಂತಿ ಮಂತ್ರ ಜಪಿಸಿದ ನೇಪಾಳ

ದೆಹಲಿ, ಜೂನ್ 20: ಚೀನಾ ಮತ್ತು ಭಾರತ ದೇಶಗಳ ನಡುವೆ ಹುಟ್ಟಿಕೊಂಡಿರುವ ಗಡಿ ವಿವಾದ ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ನೇಪಾಳ ವಿಶ್ವಾಸ ವ್ಯಕ್ತಪಡಿಸಿದೆ.

Recommended Video

      ಕೊರೊನ ಸೋಂಕಿತ MLA ಹೊರಗೆ ಬಂದು ಮತ ಚಲಾಯಿಸಿದ ವಿಚಿತ್ರ ಘಟನೆ | Oneindia Kannada

      ಈ ಕುರಿತು ನೇಪಾಳ ಸರ್ಕಾರ ಶನಿವಾರ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಲಡಾಖ್ ಕಣಿವೆಯ ಗಡಿಗೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತ ಮಧ್ಯೆ ಉಂಟಾಗಿರುವ ಬಿಕ್ಕಟ್ಟನ್ನು ಶಾಂತಿಯುತ ವಿಧಾನಗಳ ಮೂಲಕ ಪರಿಹರಿಸಲಿದೆ ಎಂದು ಹೇಳಿದೆ.

      ''ನಮ್ಮ ಸ್ನೇಹಪರ ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಉತ್ತಮ ನೆರೆಹೊರೆಯ ಮನೋಭಾವದಿಂದ, ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ವಿಶ್ವ ಶಾಂತಿ ಮತ್ತು ಸ್ಥಿರತೆಯ ಪರವಾಗಿ ಶಾಂತಿಯುತ ವಿಧಾನಗಳ ಮೂಲಕ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ ಎಂದು ನೇಪಾಳ ವಿಶ್ವಾಸ ಹೊಂದಿದೆ'' ಎಂದು ಹೇಳಿದೆ.

      ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು.

      Nepal Is Confident That India & China Will Resolve Problem In Peaceful Means

      ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ಭೂಪಟವನ್ನು ನೇಪಾಳ ಸಿದ್ದಪಡಿಸಿದೆ. ಇದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಈ ನಡುವೆ ನೇಪಾಳದ ಬೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಮಸೂದೆಯನ್ನು ಅಲ್ಲಿನ ಸಂಸತ್‌ನಲ್ಲಿ ಸರ್ಕಾರ ಅನುಮೋದಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+