• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮೋದಿ ಎಂಬ ಚಾಯ್ ವಾಲಾನನ್ನೂ ಪ್ರಧಾನಿ ಮಾಡಿದ್ದು ನೆಹರು!'

|
   ಮೋದಿ ಎಂಬ ಚಾಯ್ ವಾಲಾ ನನ್ನೂ ಪ್ರಧಾನಿ ಮಾಡಿದ್ದು ನೆಹರು! | Oneindia Kannada

   ನವದೆಹಲಿ, ನವೆಂಬರ್ 14: "ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಈ ದೇಶಕ್ಕೊಂದು ಪ್ರಜಾಪ್ರಭುತ್ವದ ಭದ್ರ ತಳಪಾಯ ಹಾಕಿದ್ದರಿಂದಲೇ ಒಬ್ಬ ಚಾಯ್ ವಾಲಾ ನರೇಂದ್ರ ಮೋದಿ ಸಹ ಇಂದು ಪ್ರಧಾನಿಯಾಗುವುದಕ್ಕೆ ಸಾಧ್ಯವಾಗಿದ್ದು" ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.

   ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ತಿರುವನಂತಪುರಂ ಸಂಸದ ಶಶಿ ತರೂರ್, ಜವಾಹರಲಾಲ್ ನೆಹರು ಅವರ ಜನ್ಮದಿನ(ನವೆಂಬರ್ 14)ದ ಹಿನ್ನೆಲೆಯಲ್ಲಿ ಅವರ ಗುಣಗಾನ ಮಾಡಿದರು.

   ನೆಹರು ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ: ಸೋನಿಯಾ ಗಾಂಧಿ

   "ಇಂದು ನಾವು ಒಬ್ಬ ಚಾಯ್ ವಾಲಾನನ್ನು ಪ್ರಧಾನಿಯಾಗಿ ಪಡೆದಿದ್ದರೆ ಅದಕ್ಕೆ ಕಾರಣ ನೆಹರುಜೀ! ಭಾರತದ ಸಾಂಸ್ಥಿಕ ವ್ಯವಸ್ಥೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ನಿರ್ಮಿಸಿ, ಒಬ್ಬ ಸಾಮಾನ್ಯ ವ್ಯಕ್ತಿ ಸಹ ಪ್ರಧಾನಿಯಾಗುವಂತೆ ಮಾಡಿದವರು ನೆಹರು" ಎಂದು ತರೂರ್ ಅಭಿಪ್ರಾಯ ಪಟ್ಟರು.

   ರಫೇಲ್ ಒಪ್ಪಂದ : ರಾಹುಲ್‌ಗೆ ಟ್ವೀಟ್ ಮೂಲಕ ಜೇಟ್ಲಿ ತಿರುಗೇಟು

   "ಇಂದು ಸರ್ಕಾರ ಮಂಗಳಯಾನವನ್ನು ಕೈಗೊಳ್ಳಲು ಮುಂದಾದರೆ, ಕೇಳಿ ಇಸ್ರೋವನ್ನು ಆರಂಭಿಸಿದ್ದು ಯಾರು? ಬಡ ಭಾರತ ಕೂಡ ಆಕಾಶದಲ್ಲಿ ಹಾರುವಂತೆ ಮಾಡಿದವರು ಯಾರು? ಭಾರತದ ಹಲವು ಬುದ್ಧಿವಂತ ವಿದ್ಯಾರ್ಥಿಗಳನ್ನು ಸೃಷ್ಟಿಸಿದ ಐಐಟಿಯನ್ನು ಆರಂಭಿಸಿದ್ದು ಯಾರು?" ಎಂದು ಶಶಿ ತರೂರ್ ಪ್ರಶ್ನಿಸಿದರು.

   ಬಿಜೆಪಿಗೆ ವರ, ಕಾಂಗ್ರೆಸ್ಸಿಗೆ ದುಃಸ್ವಪ್ನವಾಗಲಿದೆ ನೆಹರು ಬರೆದಿದ್ದ 'ಆ ಪತ್ರ'!

   "ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆಹರು ಅವರ ವ್ಯಕ್ತಿತ್ವವನ್ನು ಕೀಳಾಗಿ ಚಿತ್ರಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವುದು ವಿಷಾದನೀಯ" ಎಂದು ತರೂರ್ ಬೇಸರ ವ್ಯಕ್ತಪಡಿಸಿದರು.

   English summary
   Congress leader and Thiruvanantapuram MP Shashi Taroor said, it's because of Jawaharlal Nehru, PM Narendra Modi became PM today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X