'ಕಾಶ್ಮೀರದ ಇಂದಿನ ಸಮಸ್ಯೆಗೆ ಕಾರಣ ನೆಹರೂ-ಗಾಂಧಿ, ಅಬ್ದುಲ್ಲಾ ಕುಟುಂಬ!'
ನವದೆಹಲಿ, ಜುಲೈ 22: 'ಕಾಶ್ಮೀರದ ಇಂದಿನ ಎಲ್ಲಾ ಸಮಸ್ಯೆಗಳಿಗೂ ನೆಹರೂ, ಗಾಂಧಿ ಮತ್ತು ಅಬ್ದುಲ್ಲಾ ಕುಟುಂಬವೇ ಕಾರಣ'. ಹಾಗೆಂದು ಗುಡುಗಿದ್ದು ಬಿಜೆಪಿ ಮುಖ್ಯಸ್ಥ ಸುಧಾಂಶು ತ್ರಿವೇದಿ.
'ಬಿಜೆಪಿಗೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬರುವುದಿಲ್ಲ. ಅದಕ್ಕಾಗಿ ಮೂರನೆಯವರೊಬ್ಬರ ಮಧ್ಯಸ್ಥಿಕೆಯ ಅವಶ್ಯಕತೆ ಇದೆ' ಎಂಬ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಮಾತಿಗೆ, ನವದೆಹಲಿಯಲ್ಲಿಂದು (ಜುಲೈ 22) ಪ್ರತಿಕ್ರಿಯೆ ನೀಡಿದ ಸುಧಾಂಶು ತ್ರಿವೇದಿ ಈ ಹೇಳಿಕೆ ನೀಡಿದರು.

'ಫಾರೂಖ್ ಅಬ್ದುಲ್ಲಾ ಅವರು ಕಾಶ್ಮೀರದ ಸಮಸ್ಯೆಗೆ ಆಡಿದ ಮಾತು ಬೇಜವಾಬ್ದಾರಿ ಮತ್ತು ಅರ್ಥವಿಲ್ಲದ್ದು. ಕಾಶ್ಮೀರದಲ್ಲಿ ಇಂದಿಗೂ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಕಾರಣ ಇದೇ ಅಬ್ದುಲ್ಲಾ ಕುಟುಂಬ ಮತ್ತು ನೆಹರೂ, ಗಾಂಧಿ ಕುಟುಂಬ' ಎಂದು ಅವರು ಅಬ್ದುಲ್ಲಾ ವಿರುದ್ಧ ಹರಿಹಾಯ್ದರು.
ನಿನ್ನೆ (ಜುಲೈ 21) ಕಾಶ್ಮೀರದ ಸಮಸ್ಯೆಯ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ, 79 ವರ್ಷದ ಫಾರೂಖ್ ಅಬ್ದುಲ್ಲಾ, 'ಕಾಶ್ಮೀರದ ಇಂದಿನ ಸ್ಥಿತಿಗೆ ಬಿಜೆಪಿಯೇ ಕಾರಣ, ಅದಕ್ಕೆ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮೂರನೆಯವರ ಮಧ್ಯಸ್ಥಿಕೆಯ ಅಗತ್ಯವಿದೆ' ಎಂದಿದ್ದರು.












Click it and Unblock the Notifications