ಮೋದಿ ಪದಗ್ರಹಣ ಅಪ್ಡೇಟ್: ಈಶ್ವರ್ ಕೆ ನಾಮ್ ಶಪಥ್

ನವದೆಹಲಿ, ಮೇ.26:ಸುಮಾರು 125 ಕೋಟಿ ಭಾರತೀಯರ 'ಭರವಸೆಯ ನಾಯಕ' ಯಾಗಿ ಜನಪ್ರಿಯತೆ ಗಳಿಸುವ ನರೇಂದ್ರ ದಾಮೋದರ ಮೋದಿ ದೇಶದ 15ನೇ ಪ್ರಧಾನಿಯಾಗಿ ಸೋಮವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.. 63 ವರ್ಷದ ಮೋದಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗೋಧೂಳಿ ಮುಹೂರ್ತದಲ್ಲಿ ಪ್ರಮಾಣ ವಚನ ಬೋಧಿಸಿದರು.. ದೆಹಲಿಯಲ್ಲಿ ನಡೆದಿರುವ ಚಟುವಟಿಕೆಗಳ ಅಪ್ದೇಟ್ ಇಲ್ಲಿದೆ.

* ಕ್ಯಾಬಿನೆಟ್ ದರ್ಜೆಯ 24 ಮಂದಿ ಸಚಿವರು, 11 ಮಂದಿ ರಾಜ್ಯ ಖಾತೆ ಸಚಿವರು, 10 ಮಂದಿ ಸ್ವತಂತ್ರ ಖಾತೆಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
* ಮೋದಿ ಸಚಿವ ಸಂಪುಟದಲ್ಲಿ ಏಳು ಮಂದಿ ಮಹಿಳೆಯರು ಇದ್ದಾರೆ.

* ಸಂಪುಟ ದರ್ಜೆಯ ಸಚಿವರು : ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಡಿ.ವಿ.ಸದಾನಂದಗೌಡ, ಉಮಾಭಾರತಿ, ನಜ್ಮಾ ಅಫ್ತುಲ್ಲಾ, ಗೋಪಿನಾಥ್ ರಾವ್ ಮುಂಡೆ, ರಾಮ್ ವಿಲಾಸ್ ಪಾಸ್ವಾನ್, ಕಲ್‌ರಾಜ್ ಮಿಶ್ರ್, ಮನೇಕಾ ಗಾಂಧಿ, ಅನಂತ್ ಕುಮಾರ್, ರವಿಶಂಕರ್ ಪ್ರಸಾದ್, ಅಶೋಕ್ ಗಜಪತಿ ರಾಜು, ಅನಂತ್ ಗೀತೆ, ಹರ್ಸಿಮ್ರಾತ್ ಕೌರ್ ಬಾದಲ್, ನರೇಂದ್ರ ಸಿಂಗ್ ಟೋಮರ್, ಜೌಲ್ ಒರಾಂ, ರಾಧಾಮೋಹನ್ ಸಿಂಗ್, ಥಾವರ್ ಸಿಂಗ್ ಗೆಹ್ಲೋಟ್, ಸ್ಮೃತಿ ಇರಾನಿ, ಡಾ.ಹರ್ಷವರ್ದನ್ ಅವರು ರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Narendra Modi swearing-in as Prime Minister of India

* ಸ್ವತಂತ್ರ ಖಾತೆಯ ಸಚಿವರು : ಜ.ವಿ.ಕೆ.ಸಿಂಗ್, ಇಂದ್ರಜೀತ್ ಸಿಂಗ್, ಸಂತೋಷ್ ಕುಮಾರ್ ಗಂಗಾವರ್, ಶ್ರೀಪಾದ್ ನಾಯಕ್, ಧರ್ಮೇಂದ್ರ ಪ್ರಧಾನ್, ಸರಬಾನಂದ್ ಸೋನೋವಾಲ್, ಪ್ರಕಾಶ್ ಜಾವೇಡ್ಕರ್, ಪಿಯೂಶ್ ಗೋಯಲ್, ಡಾ.ಜಿತೇಂದ್ರ ಸಿಂಗ್, ನಿರ್ಮಲಾ ಸೀತಾರಾಮನ್ ಅವರು ಪ್ರಮಾಣ ವಚನ ಸ್ವೀಕರಿಸಿದರು. [ಯಾರಿಗೆ ಯಾವ ಖಾತೆ?]

* ರಾಜ್ಯ ಖಾತೆ ಸಚಿವವರು : ಜಿ.ಎಂ.ಸಿದ್ದೇಶ್ವರ್, ಮನೋಜ್ ಸಿನ್ಹಾ, ನಿಹಾಲ್ ಚಂದ್, ಉಪೇಂದ್ರ ಕುಶ್‌ವಾಹ್, ಪಿ.ರಾಧಾಕೃಷ್ಣನ್, ಕಿರಣ್ ರಿಜಿಜು, ಕೃಷ್ಣಪಾಲ್ ಗುಜ್ಜರ್, ಡಾ.ಸಂಜೀವ್ ಕುಮಾರ್ ಬಾಲಿಯಾ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

18.15: ನರೇಂದ್ರ ಮೋದಿ ಅವರ ನಂತರ ಕ್ಯಾಬಿನೆಟ್ ಸಚಿವರಾಗಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಅವರಿಂದ ಪ್ರಮಾಣ ವಚನ ಸ್ವೀಕಾರ
18.12: 'ಮೇ ನರೇಂದ್ರ ದಾವೋದರ್ ಮೋದಿ ಈಶ್ವರ್ ಕೆ ನಾಮ್ ಶಪಥ್...' ಎಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ. ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.
18.00: ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದ ನರೇಂದ್ರ ಮೋದಿ.

NaMo swearing-in Live updates

17.40: ದೂರದರ್ಶನ ಹಾಗೂ ಯೂಟ್ಯೂಬ್ ನಲ್ಲಿ ಮೋದಿ ಪ್ರಧಾನಿಯಾಗಿ ಪದಗ್ರಹಣ ಸಮಾರಂಭದ ನೇರ ಪ್ರಸಾರ ಮಾಡಲಾಗುತ್ತಿದೆ. ವಿಡಿಯೋ ಲಿಂಕ್ ಇಲ್ಲಿದೆ
17.35:
ರಾಷ್ಟ್ರಪತಿ ಭವನಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಒಮರ್ ಅಬ್ದುಲ್ಲಾ ಆಗಮನ
17.30:
ಸ್ಮೃತಿ ಇರಾನಿಗೆ ಎಚ್ ಆರ್ ಡಿ ಖಾತೆ, ಅನಂತ ಕುಮಾರ್ ಗೆ ಸಂಸದೀಯ ವ್ಯವಹಾರ, ಡಿವಿ ಸದಾನಂದ ಗೌಡಗೆ ರೈಲ್ವೆ, ರಾಧಾ ಮೋಹನ್ ಸಿಂಗ್ ಗೆ ಕೃಷಿ, ಟಿಡಿಪಿ ಅಶೋಕ್ ರಾಜು ಗೆ ನಾಗರಿಕ ವಿಮಾನಯಾನ, ಸುಷ್ಮಾ ಸ್ವರಾಜ್ ಗೆ ವಿದೇಶಾಂಗ ಖಾತೆ, ರಾಜನಾಥ್ ಸಿಂಗ್ ಗೃಹ, ನಿತಿನ್ ಗಡ್ಕರಿ ಸಾರಿಗೆ, ರವಿಶಂಕರ್ ಪ್ರಸಾದ್ ಗೆ ಟೆಲಿಕಾಂ ಹಾಗೂ ಕಾನೂನು, ವೆಂಕಯ್ಯ ನಾಯ್ಡುಗೆ ನಗರಾಭಿವೃದ್ಧಿ ಖಾತೆ ಸಿಗುವ ಸಾಧ್ಯತೆ.
16.45:
ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಸದಾನಂದ ಗೌಡ, ಉಮಾ ಭಾರ್ತಿ, ನಜ್ಮಾ ಹೆಪ್ತುಲ್ಲಾ, ಗೋಪಿನಾಥ್ ಮುಂಡೆ, ರಾಮ್ ವಿಲಾಸ್ ಪಾಸ್ವಾನ್, ಕಲ್ ರಾಜ್ ಮಿಶ್ರಾ, ಮನೇಕಾ ಗಾಂಧಿ, ಅನಂತ್ ಕುಮಾರ್, ರವಿ ಶಂಕರ್ ಪ್ರಸಾದ್, ಅಶೋಕ್ ಗಜಪತಿ ರಾಜು, ಅನಂತ್ ಗೀತೆ, ಹರ್ ಸಿಮ್ರಾಟ್ ಕೌರ್ ಬಾದಲ್, ನರೇಂದ್ರ ಸಿಂಗ್ ಯಾದವ್, ಜೂಯಲ್ ಓರಾಮ್, ರಾಧಾ ಮೋಹನ್ ಸಿಂಗ್, ಥಾವರ್ ಚಂದ್ ಗೆಹ್ಲೋಟ್, ಸ್ಮೃತಿ ಇರಾನಿ, ಡಾ. ಹರ್ಷವರ್ಧನ್ ಕ್ಯಾಬಿನೆಟ್ ದರ್ಜೆ

ರಾಜ್ಯ ಖಾತೆ : ವಿಕೆ ಸಿಂಗ್, ರಾವ್ ಇಂದ್ರಜಿತ್ ಸಿಂಗ್, ಸಂತೋಷ್ ಕುಮಾರ್ ಗಂಗ್ವಾರ್, ಶ್ರೀಪಾದ್ ನಾಯಕ್, ಧರ್ಮೇಂದ್ರ ಪ್ರಧಾನ್, ಸರ್ಬನಂದ್ ಸೋನೊವಾಲ್, ಪ್ರಕಾಶ್ ಜಾವೇದ್ಕರ್, ಪಿಯೂಷ್ ಗೋಯಲ್, ಡಾ. ಜಿತೇಂದ್ರ ಸಿಂಗ್, ನಿರ್ಮಲ ಸೀತಾರಾಮನ್, ಜಿ.ಎಂ ಸಿದ್ದೇಶ್ವರ್, ಮನೋಜ್ ಸಿನ್ಹಾ, ಉಪೇಂದ್ರ ಕುಶ್ವಾಹಾ, ಪೊನ್ ರಾಧಕೃಷ್ಣನ್, ಕಿರನ್ ರಿಜಿಜು, ಕೃಷ್ಣನ್ ಪಾಲ್ ಗುಜ್ಜಾರ್, ಸಂಜೀವ್ ಬಾಲಿಯಾನ್, ಮನ್ ಸುಖ್ ಭಾಯಿ ಧಾಜಿಭಾಯಿ ವಾಸವ.

NaMo swearing-in Live updates
15.15: ಮೋದಿ ಪದಗ್ರಹಣ ಸಮಾರಂಭ ತಂದೆ ಸಲಿಂ ಖಾನ್ ಅವರ ಜತೆಗೂಡಿದ ನಟ ಸಲ್ಮಾನ್ ಖಾನ್.
13.15:
ಸೂಪರ್ ಸ್ಟಾರ್ ರಜನಿ ಕಾಂತ್ ಬದಲಿಗೆ ಅವರ ಪತ್ನಿ ಲತಾ ರಜನಿಕಾಂತ್ ಅವರು ಮೋದಿ ಪದಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ.
13.10: ರಜನಿಕಾಂತ್ ರಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡಾ ಸಮಾರಂಭಕ್ಕೆ ಗೈರು ಹಾಜರಾಗುತ್ತಿದ್ದಾರೆ.
13.05: ವಾರಣಾಸಿಯಲ್ಲಿ ಇಂದು ದಿನಪೂರ್ತಿ ದೇಗುಲಗಳಲ್ಲಿ ಭಜನೆ, ವಿಶೇಷ ಪೂಜೆ, ಮೋದಿ ಅಭಿಮಾನಿಗಳಿಂದ ಸಂಭ್ರಮಾಚರಣೆ.
13.00: ಅರುಣ್ ಶೌರಿ ಅವರಿಗೆ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಲಭಿಸುವ ಸಾಧ್ಯತೆಗಳಿವೆ.
NaMo swearing-in Live updates

12.45: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹಾಗೂ ಸೋದರ ಸೊಹೈಲ್ ಖಾನ್ ಅವರು ದೆಹಲಿಗೆ ಆಗಮಿಸಿದ್ದಾರೆ.
12.42: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನರೇಂದ್ರ ಮೋದಿ ಪದಗ್ರಹಣ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.
12.40: ರಾಜಪಕ್ಸೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಂಡಿಎಂಕೆ ನಾಯಕ ವೈಕೋ ಸೇರಿ ಹಲವರು ಪ್ರತಿಭಟನಾಕಾರರ ಬಂಧನ.
11.00: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು 14 ಜನರ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.
10.55: ಹೊಸ ಪ್ರಧಾನಿಗೆ ಪ್ರಧಾನ ಕಾರ್ಯದರ್ಶಿಯಾಗಲಿರುವ ನೃಪೇಂದ್ರ ಮಿಶ್ರಾ ಅವರು ಇದು ಸಂಭ್ರಮಾಚರಣೆಗಿಂತ ಜವಾಬ್ದಾರಿ ನಿಭಾಯಿಸುವ ಕ್ಷಣವಾಗಿದೆ ಎಂದಿದ್ದಾರೆ.
10.50: ರಾಷ್ಟ್ರಪತಿ ಭವನದ ಹೊರಾಂಗಣದಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಸಾರ್ಕ್ ದೇಶಗಳ ಮುಖ್ಯಸ್ಥರು, ಪ್ರತಿನಿಧಿಗಳು ಸೇರಿದಂತೆ ಸುಮಾರು 4000 ಮಂದಿ ಸಾಕ್ಷೀಕರಿಸಲಿದ್ದಾರೆ.
NaMo swearing-in Live

10.45: ಮೋದಿ ತಾಯಿ ಹೀರಾಬೆನ್ ಪಾಲ್ಗೊಳ್ಳುವರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
10.42: ಭಾನುವಾರದ ಬೆಳವಣಿಗೆಯಲ್ಲಿ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಸುಮಿತ್ರಾ ಮಹಾಜನ್ ಹೆಸರು ಕೇಳಿಬಂದಿದೆ.
9.45: ಮೋದಿ ಪದಗ್ರಹಣಕ್ಕೆ ನೇಪಾಳ ಪಿಎಂ ಸುಶೀಲ್ ಕೊಯಿರಾಲ ಆಗಮನ
9.30: ರಕ್ಷತಾ ಖಾತೆಯನ್ನು ತಮ್ಮಲ್ಲೆ ಇಟ್ಟುಕೊಳ್ಳಲಿರುವ ಮೋದಿ: ಸಿಎನ್ ಎನ್ -ಐಬಿಎನ್.

9.15: ಎಂಡಿಎಂಕೆ ನಾಯಕರಿಂದ ರಾಜಪಕ್ಸೆ ವಿರುದ್ಧ ಪ್ರತಿಭಟನೆ ಜೋರು.
9.00: ಅಮಿತ್ ಶಾ ಅವರು ಕ್ಯಾಬಿನೇಟ್ ನಿಂದ ಹೊರಕ್ಕೆ, ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ.
8.45: ಮಾರಿಷಸ್ ಪ್ರಧಾನಿ ನವೀನ್ ರಮ್ ಗೂಲಂ ಅವರು ನವದೆಹಲಿಗೆ ಆಗಮನ.
8.10: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿ ಸ್ಥಳ ರಾಜಘಾಟ್ ನಲ್ಲಿ ನರೇಂದ್ರ ಮೋದಿ ನಮನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+