ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸೋಷಿಯಲ್ ಮೀಡಿಯಾ ಖಾತೆ ಸಿಕ್ಕಿದ್ದು ಈ 7 ಮಹಿಳೆಯರಿಗೆ

|
Google Oneindia Kannada News

ನವ ದೆಹಲಿ ಮಾರ್ಚ್ 8: ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆ ಬಳಸುವ ಗೌರವವನ್ನು 7 ಮಹಿಳಾ ಸಾಧಕರಿಗೆ ನೀಡಿದ್ದಾರೆ. ಈ ರೀತಿಯಾಗಿ ಈ ವರ್ಷದ ವಿಶ್ವ ಮಹಿಳಾ ದಿನಾಚಾರಣೆಯನ್ನು ಮೋದಿ ಸ್ವಾಗತಿಸಿದ್ದಾರೆ.

"ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು! ನಮ್ಮ ನಾರಿ ಶಕ್ತಿಯ ಉತ್ಸಾಹ ಮತ್ತು ಸಾಧನೆಗಳಿಗೆ ನಾವು ನಮಸ್ಕರಿಸುತ್ತೇವೆ. ಕೆಲವು ದಿನಗಳ ಹಿಂದೆ ನಾನು ಹೇಳಿದಂತೆ, ನಾನು ಸೈನ್ ಆಫ್ ಆಗಿದ್ದೇನೆ. ದಿನವಿಡೀ, 7 ಮಹಿಳಾ ಸಾಧಕರು ತಮ್ಮ ಜೀವನ ಪ್ರಯಾಣವನ್ನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಳ್ಳುತ್ತಾರೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿಮೋದಿಯ ಗೌರವವನ್ನು ತಿರಸ್ಕರಿಸಿದ 8 ವರ್ಷದ ಬಾಲಕಿ

"ಭಾರತವು ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ಅತ್ಯುತ್ತಮ ಮಹಿಳಾ ಸಾಧಕರನ್ನು ಹೊಂದಿದೆ. ಈ ಮಹಿಳೆಯರು ವ್ಯಾಪಕವಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹೋರಾಟಗಳು ಮತ್ತು ಆಕಾಂಕ್ಷೆಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ. ಅಂತಹ ಮಹಿಳೆಯರ ಸಾಧನೆಗಳನ್ನು ಆಚರಿಸುವುದನ್ನು ಮತ್ತು ಅವರಿಂದ ಕಲಿಯುವುದನ್ನು ಮುಂದುವರಿಸೋಣ. #SheInspiresUs'' ಎಂದು ಮೋದಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

Narendra Modi Hands Over His Social Media Accounts To Seven Women Achievers

ಮಾರ್ಚ್ 3 ರಂದು ಮಹಿಳಾ ದಿನಾಚರಣೆಯ ವಿಶೇಷ ದಿನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ಮಹಿಳಾ ಸಾಧಕರಿಗೆ ಬಳಸುವ ಅಧಿಕಾರ ನೀಡಿ, ಗೌರವ ಸೂಚಿಸುವುದಾಗಿ ಮೋದಿ ತಿಳಿಸಿದ್ದರು. ಆ ಅಧಿಕಾರಿ ಈಗ ಈ 7 ಮಹಿಳೆಯರಿಗೆ ಸಿಕ್ಕಿದೆ.

ಇಂದು ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ರಾಮನಾಥ್ ಕೋವಿಂದ್ ನಾರಿ ಶಕ್ತಿ ಪ್ರಶಸ್ತಿಗಳನ್ನು ನೀಡಿದ ನಂತರ ಪ್ರಧಾನಿ ಮೋದಿ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಸಲಿದ್ದಾರೆ. ನಾರಿ ಶಕ್ತಿ ಪ್ರಶಸ್ತಿ ಮಹಿಳಾ ಸಬಲೀಕರಣಕ್ಕಾಗಿ ನೀಡಲು ಪ್ರಶಸ್ತಿಯಾಗಿದೆ.

English summary
#SheInspiresUs Honour: Narendra Modi hands over his social media accounts to seven women achievers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X