ಮೋದಿ ಸರ್ಕಾರಕ್ಕೆ ಹೊಸ ಗರಿ: ನಂಬಿಕಸ್ಥ ಸರ್ಕಾರವೆಂಬ ಬಿರುದು

Posted By:
Subscribe to Oneindia Kannada

ನವದೆಹಲಿ, ನವೆಂಬರ್ 20: ಇತ್ತೀಚೆಗೆ ತಾನೇ ಮೂಡೀಸ್ ಶ್ರೇಯಾಂಕದಲ್ಲಿ ಏರಿಕೆ ಕಂಡು ಜನಮೆಚ್ಚುಗೆ ಗಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದೀಗ ಹೊಸದೊಂದು ಹೆಮ್ಮೆಯ ಗರಿ ಮೂಡಿದೆ. ವಿಶ್ವದ ನಂಬಿಕಸ್ಥ ಸರ್ಕಾರಗಳ ಪಟ್ಟಿಯಲ್ಲಿ ಮೋದಿ ಸರ್ಕಾರ ಮೂರನೇ ಸ್ಥಾನ ಪಡೆದುಕೊಂಡಿದೆ.

ಮೋದಿ ಸರ್ಕಾರಕ್ಕೆ ಸಿಕ್ತು ಮೂಡಿ ಬೆಂಬಲ, ರೇಟಿಂಗ್ ಏರಿಕೆ

ಆರ್ಗನೈಸೇಶನ್ ಫಾರ್ ಎಕನಾಮಿಕ್ ಕಾರ್ಪರೇಶನ್ ಅಂಡ್ ಡೆವಲಪ್ ಮೆಂಟ್(ಒಇಸಿಡಿ) ಎಂಬ ಸಂಸ್ಥೆ ಜಾಗತಿಕವಾಗಿ ನಡೆಸಿದ ಸಮೀಕ್ಷೆ ಈ ಅಂಶವನ್ನು ಬಯಲಿಗೆಳೆದಿದೆ.

ಈಗಲೂ ದೇಶದ ನಂಬರ್ 1 ಜನಪ್ರಿಯ ನಾಯಕ ನರೇಂದ್ರ ಮೋದಿ

ಮೋದಿ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ತೆರಿಗೆ ನಿಯಮ ಮತ್ತು ಭ್ರಷ್ಟಾಚಾರ ವಿರೋಧಿ ನಡೆಗಳೇ ಜನರಲ್ಲಿ ಸರ್ಕಾರದ ಬಗ್ಗೆ ನಂಬಿಕೆ ಮೂಡುವುದಕ್ಕೆ ಕಾರಣ.

ಮೊದಲೆರಡು ರಾಷ್ಟ್ರಗಳು ಯಾವವು?

ಮೊದಲೆರಡು ರಾಷ್ಟ್ರಗಳು ಯಾವವು?

ನಂಬಿಕಸ್ಥ ಸರ್ಕಾರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದಿದ್ದರೆ, ಸ್ವಿಟ್ಜರ್ಲೆಂಡ್ ಮತ್ತು ಇಂಡೋನೇಷ್ಯಾ ದೇಶಗಳು ಕ್ರಮವಾಗಿ ಮೊದಲೆರಡು ಸ್ಥಾನವನ್ನು ಗಳಿಸಿವೆ. ಇಲ್ಲೂ ಸಹ ಜನರು ಭ್ರಷ್ಟಾಚಾರ ನಿರ್ಮೂಲನೆಗೆ ಮತ್ತು ಆರ್ಥಿಕ ಅಭಿವೃದ್ಧಿಗೇ ಹೆಚ್ಚು ಮತನೀಡಿದ್ದಾರೆ.

ಯಾವವು ನಂಬಿಕಸ್ಥ ರಾಷ್ಟ್ರಗಳಲ್ಲ?

ಚಿಲಿ, ಫಿನ್ಲೆಂಡ್, ಗ್ರೀಸ್ ಸ್ಲೊವೇನಿಯಾ ಮುಂತಾದ ರಾಷ್ಟ್ರಗಳ ಸರ್ಕಾರಗಳು ಜನರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ. ಇಲ್ಲೆಲ್ಲ ಆರೋಗ್ಯ, ಉದ್ಯೋಗ, ಶಿಕ್ಷಣ, ಆರ್ಥಿಕತೆ ಮುಂತಾದ ವಿಷಗಳ ಬಗ್ಗೆ ಸರ್ಕಾರ ಜರೂರಾಗಿ ಯೋಚಿಸುವ ಅಗತ್ಯವಿದೆ ಎಂದು ಇಲ್ಲಿನ ಜನ ಭಾವಿಸಿದ್ದಾರೆ.

ಶೇ.74 ರಷ್ಟು ಜನಬೆಂಬಲ

ಶೇ.74 ರಷ್ಟು ಜನಬೆಂಬಲ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಭಾರತದ ಶೇ.74 ರಷ್ಟು ಜನ ಉತ್ತಮ ಸರ್ಕಾರವೆಂದೂ, ನಂಬಿಕಸ್ಥ ಸರ್ಕಾರವೆಂದೂ ಒಪ್ಪಿಕೊಂಡಿದ್ದಾರೆ. ಈ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ನಂಬಿದ್ದಾರೆ.

ಎಲ್ಲಕ್ಕೂ ಕಾರಣ ಮೋದಿ ಸರ್ಕಾರದ ಜನಪರ ಯೋಜನೆಗಳು

ಎಲ್ಲಕ್ಕೂ ಕಾರಣ ಮೋದಿ ಸರ್ಕಾರದ ಜನಪರ ಯೋಜನೆಗಳು

ಮೋದಿ ಸರ್ಕಾರ ಈ ಹೆಗ್ಗಳಿಕೆ ಗಳಿಸಿದೆ ಎಂಬುದನ್ನು ಕೇಳುತ್ತಿದ್ದಂತೆಯೇ ಈ ಕುರಿತು ಹೆಮ್ಮೆಯಿಂದ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ, "ಕೆಲ ವರ್ಷಗಳಿಂದ ಜನರು ಸರ್ಕಾರ ಮತ್ತು ರಾಜಕಾರಣಿಗಳ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆದರೆ ನರೇಂದ್ರ ಮೋದಿಯವರ ಯೋಜನೆಗಳು ಮತ್ತು ಅವರ ನಾಯಕತ್ವ ಜನರು ಮತ್ತೆ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸಗಳಿಸಿಕೊಳ್ಳುವ ಹಾಗೆ ಮಾಡಿವೆ" ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Prime minister Narendra Modi led NDA government has become the 3rd most trusted government in the world. A survey made by Organisation for Economic Co-operation and Development (OECD)

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ