• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್‌ನ ಯಾವ ವಿಧವೆಗೆ ಲಾಭವಾಗಿದೆ? ಮೋದಿ ಹೇಳಿಕೆಗೆ ಕೆರಳಿದ ಕೈ ಪಡೆ

|

ನವದೆಹಲಿ, ಡಿಸೆಂಬರ್ 8: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಡುವಿನ ಮಾತಿನ ಚಕಮಕಿ ಇನ್ನೊಂದು ಮಜಲಿಗೆ ತಲುಪಿದೆ.

ರಾಜಸ್ತಾನದ ಜೈಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅನ್ನು ಟೀಕಿಸಿ ಮೋದಿ ಬಳಸಿದ 'ವಿಧವೆ' ಪದ ಭಾರಿ ವಿವಾದ ಸೃಷ್ಟಿಸಿದೆ.

ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹುಟ್ಟದೇ ಇರುವ ಹೆಣ್ಣುಮಕ್ಕಳನ್ನು ವಿಧವೆಯರೆಂದು ಪಟ್ಟಿ ಮಾಡಿ ಅವರ ಹೆಸರಿನಲ್ಲಿ ಪಿಂಚಣಿ ಪಡೆದುಕೊಳ್ಳಲಾಗಿತ್ತು. ಈ ಹಣ ಕಾಂಗ್ರೆಸ್‌ನ ಯಾವ ವಿಧವೆಯ ಬ್ಯಾಂಕ್ ಖಾತೆಗೆ ಹೋಗಿದೆ? ಎಂದು ಮೋದಿ ಪ್ರಶ್ನಿಸಿದ್ದರು.

ಕಾಂಗ್ರೆಸ್‌ನ ವಿಧವೆ ಎಂಬ ಪದವನ್ನು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಕುರಿತಾಗಿ ಆಡಿದ್ದು. ಈ ಮೂಲಕ ಸೋನಿಯಾ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಕಮಲ್‌ಹಾಸನ್‌

'ನಗರದ ಹುಡುಗಿ'ಯರನ್ನು 'ವಿಧವೆ'ಯರು ಎಂದು ಪಟ್ಟಿ ಮಾಡಿ 'ಪಿಂಚಣಿ ಸ್ವೀಕರಿಸಲಾಗಿದೆ' ಎಂದು ನಮೂದಿಸುವ ಹಗರಣವನ್ನು ಕಾಂಗ್ರೆಸ್ ಸರ್ಕಾರ ನಡೆಸಿತ್ತು ಎಂದು ಮೋದಿ ಟೀಕಿಸಿದ್ದರು.

ಮೋದಿ ಅವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್‌ನ ಅನೇಕ ಮುಖಂಡರು ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಸಾರ್ವಜನಿಕರ ಹಣ ಕದ್ದಿದ್ದರು

ಸಾರ್ವಜನಿಕರ ಹಣ ಕದ್ದಿದ್ದರು

ಮಂಗಳವಾರ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪ ಮಾಡಿದ್ದ ನರೇಂದ್ರ ಮೋದಿ, ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಹಿರಿಯ ನಾಗರಿಕರ ಪಿಂಚಣಿಗಳು ಮತ್ತು ಶಾಲಾ ಮಕ್ಕಳ ವಿದ್ಯಾರ್ಥಿವೇತನ ಸೇರಿದಂತೆ ಸಾರ್ವಜನಿಕರ ಹಣವನ್ನು ಕದ್ದಿದ್ದರು ಎಂದು ಆರೋಪಿಸಿದ್ದರು.

'ಅವರು ಹಿರಿಯ ನಾಗರಿಕ ಪಿಂಚಣಿ ಹಣವನ್ನು ಕದ್ದಿದ್ದರು. ದಿವ್ಯಾಂಗರ ಪಿಂಚಣಿ ಹಣವನ್ನೂ ಕದ್ದಿದ್ದರು. ಶಾಲಾ ಮಕ್ಕಳ ವಿದ್ಯಾರ್ಥಿವೇತನವನ್ನು ಲೂಟಿ ಮಾಡಲಾಯಿತು. ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದಲೂ ಹಣ ದೋಚಿದ್ದರು' ಎಂದು ಆರೋಪಿಸಿದ್ದರು.

'ಇವಿಎಂ ಮೇಲೆ ಕಣ್ಣಿಡಿ, ಮೋದಿ ಭಾರತದಲ್ಲಿ ಅವಕ್ಕೆ ನಿಗೂಢ ಶಕ್ತಿಯಿದೆ'

ಹುಟ್ಟದಿರುವವರೂ ವಿಧವೆಯರು!

ಹುಟ್ಟದಿರುವವರೂ ವಿಧವೆಯರು!

'ನಾಮದಾರಿಗಳು ಏಕೆ ಚಿಂತಾಕ್ರಾಂತರಾಗಿದ್ದಾರೆ? ಕಾಂಗ್ರೆಸ್ ಸದಸ್ಯರಿಗೆ ಏಕೆ ನಿದ್ದೆ ಬರುತ್ತಿಲ್ಲ? ಅದಕ್ಕೆ ಕಾರಣವಿದೆ. ಮೋದಿ ತೆಗೆದುಕೊಳ್ಳುವ ಪ್ರತಿ ಕ್ರಮವೂ ಅವರೆಲ್ಲರ ಅಂಗಡಿಗಳನ್ನು ಒಂದೊಂದಾಗಿ ಮುಚ್ಚಲು ಕಾರಣವಾಗುತ್ತಿವೆ. ಹುಟ್ಟದೇ ಇರುವ ಹೆಣ್ಣುಮಕ್ಕಳನ್ನು ಕಾಂಗ್ರೆಸ್ ಸರ್ಕಾರದ ದಾಖಲೆಗಳಲ್ಲಿ ವಿಧವೆ ಎಂದು ದಾಖಲಿಸುವಂತಹ ಸರ್ಕಾರವನ್ನು ಕಾಂಗ್ರೆಸ್ ನಡೆಸಿತ್ತು.

ಕುಂಭರಾಮ್ ಹೆಸರನ್ನು ಕುಂಭಕರಣ್ ಎಂದಿದ್ದ ರಾಹುಲ್ ರನ್ನು ಗೇಲಿ ಮಾಡಿದ ಪ್ರಧಾನಿ

ಕಾಂಗ್ರೆಸ್‌ನ ಯಾವ ವಿಧವೆಗೆ ಹಣ?

ಕಾಂಗ್ರೆಸ್‌ನ ಯಾವ ವಿಧವೆಗೆ ಹಣ?

ಜನಿಸದೆಯೇ ಇರುವ ಹೆಣ್ಣುಮಕ್ಕಳು ವಿಧವೆಯರಾಗುತ್ತಾರೆ ಮತ್ತು ಪಿಂಚಣಿ ಪಡೆಯಲೂ ಆರಂಭಿಸುತ್ತಾರೆ. ಈ ಹಣವನ್ನು ಪಡೆದುಕೊಂಡ ಈ ವಿಧವೆಯರು ಯಾರು? ಈ ಹಣವನ್ನು ಕಾಂಗ್ರೆಸ್‌ನ ಯಾವ ವಿಧವೆಯ ಬ್ಯಾಂಕ್ ಖಾತೆ ಪಡೆದುಕೊಂಡಿದೆ?' ಎಂದು ಮೋದಿ ಪ್ರಶ್ನಿಸಿದ್ದರು.

ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ

ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರಿಕುಲವನ್ನು ಅವಮಾನಿಸಿದ್ದಾರೆ. ಮಾಡಿದ್ದಾರೆ. ತನ್ನ ತಾಯಿ ಕೂಡಾ ವಿಧವೆ ಎನ್ನುವುದನ್ನು ಮರೆತಿರುವ ಮೋದಿಯವರು ದ್ವೇಷಾಸೂಯೆಯ ರಸಾತಲ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹೀಯಾಳಿಸದೆ ಇರುವರೇ?

ತನ್ನ ದೇಹ ಸೌಂದರ್ಯಕ್ಕೆ ಅಣಬೆ ತಿನ್ನಲು ಹಿಮಾಲಯಕ್ಕೆ ಹೋಗುವುದೊಂದೆ ಘನಕಾರ್ಯ! ಸೈನಿಕರ ಸಂಬಳ ಹೆಚ್ಚಿಸೊ ಬೇಡಿಕೆ ಕೂಡ ನಿರ್ದಾಕ್ಷಣ್ಯವಾಗಿ ನಿರಾಕರಿಸಿದ ಪುಣ್ಯಾತ್ಮ! ದೇಶವಿದೇಶ ಸೂಟು ಬೂಟುಗಳ ಸರದಾರ! ಹೆಣ್ಣಿನ ಬಗ್ಗೆ ಗೌರವ ಇರಲು ತಾಯಿ ಹೆಂಡತಿ ಅಕ್ಕ ತಂಗಿ ಯಾರ ಹಂಗೂ ಇಲ್ಲ ಅಂದಮೇಲೆ ಒಬ್ಬ ಯೋಧನ ಪತ್ನಿಯನ್ನು ವಿಧವೆ ಅಂತ ಹೀಯಾಳಿಸದೆ ಏನು ಮಾಡುತ್ತಾರೆ ಎಂದು ಜಯಂತಿ ಎಂಬುವವರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಾರ್ಥನೆ ಫಲಿಸುವುದಿಲ್ಲ

ತಾಯಿಯ ಆಶೀರ್ವಾದ ಪಡೆಯುವುದನ್ನೇ ಒಂದು ಡಜನ್‌ಗೂ ಅಧಿಕ ಕ್ಯಾಮೆರಾಗಳನ್ನು ಇಟ್ಟುಕೊಂಡು ಶೂಟ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿರುವ ವ್ಯಕ್ತಿಯ ಬಗೆಗಿನ ನಿಮ್ಮ ಪ್ರಾರ್ಥನೆ ಫಲಿಸುವುದಿಲ್ಲ!! ಎಂದು ಲೋಕೇಶ್ ಎಂಬುವವರು ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi's remarks on 'congress widow' while addressing in Rajasthan assembly elections rally on Tuesday sparks controversy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more