ದೇಶದೆಲ್ಲೆಡೆ ತೆರೆದುಕೊಂಡ ಇಫ್ತಾರ್ ಕೂಟದ ಸಂಭ್ರಮ

ನವದೆಹಲಿ, ಜೂನ್ 09: ರಂಜಾನ್ ತಿಂಗಳ ಉಪವಾಸಕ್ಕೆ ಬ್ರೇಕ್ ನೀಡುವ ಇಫ್ತಾರ್ ಕೂಟ ಸರ್ವಧರ್ಮ ಸಮನ್ವಯದ ದ್ಯೋತಕವಾಗಿ ಎಲ್ಲೆಡೆ ಆಚರಣೆಗೊಳ್ಳುತ್ತಿದೆ. ಕೆಲವೆಡೆ ರಾಜಕೀಯಕ್ಕೆ ಈ ಇಫ್ತಾರ್ ಕೂಟವೇ ಬಳಕೆಯಾಗುತ್ತಿರುವುದು ಹೊಸ ವಿಷಯವಾಗಿ ಉಳಿದಿಲ್ಲ!

ಜೂನ್ 8 ಶುಕ್ರವಾರದಂದು ಮತಭೇದಗಳನ್ನೆಲ್ಲ ಮರೆತು ಮುಸ್ಲಿಂ ಬಾಂಧವರು ರಂಜಾನಿನ ಉಪವಾಸವನ್ನು ಮುರಿದರು. ದೇಶದಾದ್ಯಂತ ಹಲವು ಕಡೆಗಳಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ದೇಶದ ಗಣ್ಯಾತಿಗಣ್ಯರು ಪಾಲ್ಗೊಂಡರು.

ಇಸ್ಲಾಂ ಮತದಲ್ಲಿ ಇಫ್ತಾರ್ ಕೂಟಕ್ಕೆ ಮಹತ್ವವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಫ್ತಾರ್ ಕೂಟವನ್ನು ಕೇವಲ ರಾಜಕೀಯದ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಸಮಯದಲ್ಲಿ ನಿನ್ನೆ ದೇಶದ ವಿವಿಧೆಡೆ ನಡೆದ ಇಫ್ತಾರ್ ಕೂಟದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಹೈದರಾಬಾದ್ ನಲ್ಲಿ ಇಫ್ತಾರ್ ಕೂಟ

ಹೈದರಾಬಾದ್ ನಲ್ಲಿ ಇಫ್ತಾರ್ ಕೂಟ

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಇಬ್ಬರೂ ತೆಲಂಗಾಣ ಸರ್ಕಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಕಂಡಿದ್ದು ಹೀಗೆ!

ಇಫ್ತಾರ್ ಕೂಟದಲ್ಲಿ ಸುಶಿಲ್ ಮೋದಿ

ಇಫ್ತಾರ್ ಕೂಟದಲ್ಲಿ ಸುಶಿಲ್ ಮೋದಿ

ಬಿಹಾರದ ಪಾಟ್ನಾದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಬಿಹಾರದ ಉಪಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿ ಮತ್ತು ಬಿಜೆಪಿ ಮುಖಂಡ ಶೆಹನ್ವಾಜ್ ಹುಸೇನ್ ಕಾಣಿಸಿಕೊಂದಿದ್ದು ಹೀಗೆ.

ನಾಯ್ಡು ಇಫ್ತಾರ್ ಸಂಭ್ರಮ

ನಾಯ್ಡು ಇಫ್ತಾರ್ ಸಂಭ್ರಮ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಸೇರಿ ಪ್ರಾರ್ಥಿಸಿ, ಸಂಭ್ರಮಿಸಿದರು.

ಜಮ್ಮು ಕಾಶ್ಮೀರದಲ್ಲಿ ರಾಜನಾಥ್ ಇಫ್ತಾರ್ ಕೂಟ

ಜಮ್ಮು ಕಾಶ್ಮೀರದಲ್ಲಿ ರಾಜನಾಥ್ ಇಫ್ತಾರ್ ಕೂಟ

ಜಮ್ಮು ಕಾಶ್ಮೀರದಲ್ಲಿ ಅಲ್ಲಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಗೃಹಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಹಿಳೆಯೊಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು ಹೀಗೆ.

ಇಫ್ತಾರ್ ನಲ್ಲಿ ಉಂಡ ಕೇಜ್ರಿವಾಲ್

ಇಫ್ತಾರ್ ನಲ್ಲಿ ಉಂಡ ಕೇಜ್ರಿವಾಲ್

ರಾಜಧಾನಿ ದೆಹಲಿಯ ನೆಹರೂ ಪಾರ್ಕ್ ನಲ್ಲಿ ಏರ್ಪಡಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಬಾಲಕನೊಬ್ಬನಿಗೆ ತಿನಿಸು ತಿನ್ನಿಸಿ ಇಫ್ತಾರ್ ಕೂಟವನ್ನು ಆಚರಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.

ಇಫ್ತಾರ್ ಸವಿದ ದೀದಿ

ಇಫ್ತಾರ್ ಸವಿದ ದೀದಿ

ಕೋಲ್ಕತ್ತದ ಪಾರ್ಕ್ ಸರ್ಕಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಜಾಮಾ ಮಸೀದಿ ಎದುರಲ್ಲಿ ಇಫ್ತಾರ್ ಪಂಕ್ತಿ!

ಜಾಮಾ ಮಸೀದಿ ಎದುರಲ್ಲಿ ಇಫ್ತಾರ್ ಪಂಕ್ತಿ!

ದೆಹಲಿಯ ಜನಪ್ರಿಯ ಜಾಮಾ ಮಸೀದಿ ಎದುರಲ್ಲಿ ಮುಸ್ಲಿಂ ಬಾಂಧವರು ಪಂಕ್ತಿಯಲ್ಲಿ ಕುಳಿತು ಇಫ್ತಾರ್ ಕೂಟದ ಸವಿ ಉಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+